ಕೊರೆವ ಚಳಿ ಮೀರಿ ಬರಿ ಮೈಯಲ್ಲಿ ಭಾರತ್​ ಜೋಡೋ ಯಾತ್ರೆ: ವಿಡಿಯೋ

By

Published : Jan 8, 2023, 11:28 AM IST

Updated : Feb 3, 2023, 8:38 PM IST

thumbnail
()

ಹರಿಯಾಣ: ಉತ್ತರ ಭಾರತದಲ್ಲಿ ಚಳಿ ಮೈ ಕೊರೆಯುತ್ತಿದೆ. ಹೊರಬಂದರೆ ದೇಹ ಗಡಗಡ ನಡುಗುತ್ತದೆ. ಬೆಚ್ಚನೆಯ ಹೊದಿಕೆ, ಬೆಂಕಿ ಕಾಯಿಸುತ್ತಾ ಚಳಿಗೆ ಅಲ್ಲಿನ ಜನರು ತಡೆಯುತ್ತಿದ್ದಾರೆ. ಆದರೆ, ರಾಹುಲ್​ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಚಳಿ ಲೆಕ್ಕಕ್ಕೇ ಇಲ್ಲವಾಗಿದೆಯೇನೋ?. ಹರಿಯಾಣದ ಕರ್ನಾಲ್​ನಲ್ಲಿ ಸಾಗುತ್ತಿರುವ ಯಾತ್ರೆಗೆ ಕಾಂಗ್ರೆಸ್​ ಕಾರ್ಯಕರ್ತರು ಭರ್ಜರಿ ಬೆಂಬಲ ನೀಡಿದ್ದು, ಚಳಿ ಇದ್ದರೂ ಬರಿ ಮೈಯಲ್ಲಿ ಭಾಗವಹಿಸಿದ್ದಾರೆ. ವಾಹನದ ಮೇಲೆ ನಿಂತು ಅಂಗಿ ತೆಗೆದು ನೃತ್ಯ ಮಾಡುತ್ತಾ ಸಾಗುತ್ತಿರುವ ಯಾತ್ರೆಯನ್ನು ಹುರಿದುಂಬಿಸಿದ್ದಾರೆ. ತೀವ್ರ ಚಳಿಯಲ್ಲೂ ರಾಹುಲ್​ರ ಯಾತ್ರೆ ಬಿಸಿ ಏರಿಸಿದಂತಾಗಿದೆ.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.