ETV Bharat / sukhibhava

ಪ್ರಪಂಚದ ಈ ದೇಶಗಳಲ್ಲಿ ಕೊರೊನಾ ಸಾವಿನಲ್ಲಿ ಹೆಚ್ಚಳ: ಈ ವಯೋಮಾನದವರಲ್ಲೇ ಕೋವಿಡ್​ ಅಬ್ಬರ ಹೆಚ್ಚು!

author img

By

Published : Jan 7, 2023, 7:47 PM IST

corona in japan
ಪ್ರಪಂಚದ ಈ ದೇಶಗಳಲ್ಲಿ ಕರೋನಾದಿಂದ ನೂರಾರು ಸಾವುಗಳು ಇನ್ನೂ ಸಂಭವಿಸುತ್ತಿವೆ!

ಈಗಲೂ ವಿಶ್ವದ ಕೆಲವು ದೇಶಗಳಲ್ಲಿ ಕರೋನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ದಾಖಲು - ಜಪಾನ್​ ದೇಶದಲ್ಲಿ ಒಂದೇ ತಿಂಗಳಲ್ಲಿ ಸಾವಿರಾರು ಜನರು ಕರೋನಾದಿಂದ ಸಾವು- ಯಾವೆಲ್ಲಾ ದೇಶಗಳಲ್ಲಿ ಎಷ್ಟೆಷ್ಟು ಸಾವಾಗಿವೆ ತಿಳಿಯಲು ಸಂಪೂರ್ಣ ಸುದ್ದಿ ಓದಿ.

ಟೋಕಿಯೋ(ಜಪಾನ್​): ಈಗಲೂ ವಿಶ್ವದ ಕೆಲವು ದೇಶಗಳಲ್ಲಿ ಕರೋನಾದಿಂದ ಹೆಚ್ಚಿನ ಸಂಖ್ಯೆಯ ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಅಮೆರಿಕ (200 ಸಾವು), ಜರ್ಮನಿ (170), ಬ್ರೆಜಿಲ್ (198 ಸಾವು) ಇನ್ನೂ ಕೆಲವು ದೇಶಗಳಲ್ಲಿ ಪ್ರತಿದಿನ ಸಾವಿನ ಸಂಖ್ಯೆ ನೂರರ ಗಡಿ ದಾಟುತ್ತಿದೆ. ಜಪಾನ್​ನಲ್ಲಿ ಶುಕ್ರವಾರ 456 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಇದು ಇಲ್ಲಿಯವರೆಗೆ ಒಂದೇ ದಿನದಲ್ಲಿ ಸಂಭವಿಸಿದ ಅತಿ ಹೆಚ್ಚು ಸಾವುಗಳಾಗಿವೆ.

ಜಪಾನ್​ ದೇಶದಲ್ಲಿ ಒಂದು ತಿಂಗಳಲ್ಲಿ ಸಾವಿರಾರು ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ. ಜಪಾನ್ ಟುಡೇ ವರದಿಯ ಪ್ರಕಾರ, ದೇಶದಲ್ಲಿ ಇದುವರೆಗೆ 2,45,542 ಜನರು ಕೊರೊನೊದಿಂದ ಬಳಲುತ್ತಿದ್ದಾರೆ. ಗುರುವಾರ 18,638 ಪ್ರಕರಣಗಳಿಗೆ ಹೋಲಿಸಿದರೆ ಶುಕ್ರವಾರ 20,720 ಹೊಸ ಪ್ರಕರಣಗಳು ದಾಖಲಾಗಿವೆ.

ಟೋಕಿಯೊದಲ್ಲಿ ತೀವ್ರ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಸೋಂಕಿತರ ಸಂಖ್ಯೆ 53ರಷ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರಕ್ಕಿಂತ ಇದು ನಾಲ್ಕು ಪಟ್ಟು ಹೆಚ್ಚು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಜಪಾನ್ ಡಿಸೆಂಬರ್ 2022 ರಲ್ಲಿ ಕೋವಿಡ್‌ನಿಂದಾಗಿ ದಾಖಲೆಯ 7,688 ಸಾವುಗಳು ದಾಖಲಾಗಿವೆ, ಹಿಂದಿನ ಕೊರೊನಾ ಅಲೆಯ ಸಮಯದಲ್ಲಿ ಆಗಸ್ಟ್‌ನಲ್ಲಿ ದಾಖಲಾದ 7,329 ರ ಗರಿಷ್ಠ ಪ್ರಮಾಣವನ್ನೂ ಮೀರಿದೆ. ಮೈನಿಚಿ ಜಪಾನ್ ಪ್ರಕಾರ, ಎಂಟನೇ ಅಲೆಯ ಪ್ರಾರಂಭದೊಂದಿಗೆ ನವೆಂಬರ್‌ನಿಂದ ಸಾವಿನ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ.

ಮೂರು ವಯೋಮಾನದವರಿಂದ ಹೆಚ್ಚು ಸಾವು: ಜಪಾನ್‌ನಲ್ಲಿ ಕಳೆದ ಮೂರು ತಿಂಗಳಲ್ಲಿ ಕೋವಿಡ್ 19 ನಿಂದ ಸಾವನ್ನಪ್ಪಿದವರ ಸಂಖ್ಯೆ ಕಳೆದ ವರ್ಷದ ಇದೇ ಅವಧಿಗೆ ಸುಮಾರು 16 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷದ ಆಗಸ್ಟ್ 31 ರಿಂದ ಡಿಸೆಂಬರ್ 27 ರವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ, ಕೋವಿಡ್‌ನಿಂದ ಸಾವನ್ನಪ್ಪಿದವರಲ್ಲಿ ಶೇಕಡಾ 40.8 ರಷ್ಟು ಜನರು 80 ವರ್ಷಕ್ಕಿಂತ ಮೇಲ್ಪಟ್ಟವರು. 90 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 34.7 ಪ್ರತಿಶತ ಮತ್ತು 70 ಕ್ಕಿಂತ ವರ್ಷಕ್ಕಿಂತ ಮೇಲ್ಪಟ್ಟವರು 17 ಪ್ರತಿಶತ. ಒಟ್ಟಾರೆಯಾಗಿ, 92.4 ರಷ್ಟು ಸಾವುಗಳು ಈ ಮೂರು ವಯೋಮಾನದವರಲ್ಲಿ ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಕೊರೊನಾ: ಭಾರತದಲ್ಲಿ ಶನಿವಾರ 214 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,509 ಕ್ಕೆ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ ಎಂಟು ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಹೊಸ ಸೋಂಕಿತರ ಸಂಖ್ಯೆ 4.46 ಕೋಟಿಗೆ ಏರಿದೆ. ಸಚಿವಾಲಯದ ಪ್ರಕಾರ, ಸೋಂಕಿನಿಂದ ನಾಲ್ಕು ರೋಗಿಗಳು ಸಾವನ್ನಪ್ಪಿದ್ದರಿಂದ ಸಾವಿನ ಸಂಖ್ಯೆ 5,30,718 ಕ್ಕೆ ಏರಿದೆ. ಇದರಲ್ಲಿ, ಇಬ್ಬರು ರೋಗಿಗಳು ಕೇರಳದವರಾಗಿದ್ದಾರೆ, ಇದಲ್ಲದೇ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದು, ಉತ್ತರ ಪ್ರದೇಶದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಕೋವಿಡ್ ಪುರುಷರಲ್ಲಿ ಬಲವಾದ ಉರಿಯೂತದ ಪ್ರತಿಕ್ರಿಯೆಗೆ ಕಾರಣ: ಕೋವಿಡ್ ಪುರುಷರಲ್ಲಿ ಬಲವಾದ ಉರಿಯೂತದ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಚೇತರಿಸಿಕೊಂಡ ನಂತರವೂ, ಅವರ ರೋಗನಿರೋಧಕ ಶಕ್ತಿಯಲ್ಲಿನ ಬದಲಾವಣೆಗಳು ಮುಂದುವರಿಯುತ್ತವೆ ಎಂದು ವಿವರಿಸಲಾಗಿದೆ. ಈ ಸಂಶೋಧನೆಯ ಆಧಾರದ ಮೇಲೆ, ಉತ್ತಮ ಲಸಿಕೆಗಳನ್ನು ವಿನ್ಯಾಸಗೊಳಿಸಬಹುದು ಎಂದು ಅವರು ಹೇಳಿದರು. ವೈರಲ್ ಸೋಂಕಿನ ನಂತರ, ಪ್ರತಿರಕ್ಷಣಾ ವ್ಯವಸ್ಥೆಯು ತನ್ನ ಹಿಂದಿನ ಸ್ಥಿರ ಮಟ್ಟಕ್ಕೆ ಮರಳುತ್ತದೆ ಎಂದು ಸಂಶೋಧಕರು ಭಾವಿಸಿದ್ದರು. ಇದು ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿದೆ ಎಂದು ಇತ್ತೀಚೆಗೆ ಬಹಿರಂಗವಾಗಿದೆ.

ಪುರುಷರ ಮೇಲೆ ಉತ್ತಮ ಪರಿಣಾಮ: ಈ ಸಂಶೋಧನೆಯನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸ್ (ಎನ್‌ಐಎಡಿ) ವಿಜ್ಞಾನಿಗಳು ಮಾಡಿದ್ದಾರೆ. ಫ್ಲೂ ಲಸಿಕೆಯನ್ನು ಪಡೆದ ಕೆಲವು ಆರೋಗ್ಯವಂತ ವ್ಯಕ್ತಿಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅವರು ವಿಶ್ಲೇಷಿಸಿದ್ದಾರೆ. ಸಾಮಾನ್ಯ ಕೋವಿಡ್‌ನಿಂದ ಚೇತರಿಸಿಕೊಂಡ ಪುರುಷರು ಮಹಿಳೆಯರಿಗೆ ಹೋಲಿಸಿದರೆ ಫ್ಲೂ ಲಸಿಕೆಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೆ, ಕೋವಿಡ್ ಸೋಂಕಿಗೆ ಒಳಗಾದ ಪುರುಷರು ಕನಿಷ್ಠ ರೋಗನಿರೋಧಕ ಬದಲಾವಣೆಗಳಿಗೆ ಒಳಗಾಗುತ್ತಾರೆ ಎಂದು ಕಂಡು ಬಂದಿದೆ. ಸಾಮಾನ್ಯವಾಗಿ, ಮಹಿಳೆಯರು ಲಸಿಕೆಗಳು ಮತ್ತು ರೋಗಕಾರಕಗಳಿಗೆ ಬಲವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅವರಿಗೆ ಆಟೋಇಮ್ಯೂನ್ ಕಾಯಿಲೆಗಳ ಅಪಾಯ ಹೆಚ್ಚು ಎಂದು ಅವರು ಹೇಳಿದರು. ಕೋವಿಡ್ 19 ಮಧ್ಯಮ ಮಟ್ಟದಲ್ಲಿ ಸಂಭವಿಸಿದರೂ, ಪುರುಷರಲ್ಲಿ ಉರಿಯೂತದ ಪ್ರತಿಕ್ರಿಯೆಯು ತುಂಬಾ ಪ್ರಬಲವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:4ನೇ ಡೋಸ್ ಈಗಲೇ ಬೇಡ, ಆದ್ರೆ ಮಾಸ್ಕ್​ ಧರಿಸಿ: ಐಎಂಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.