ETV Bharat / sukhibhava

Skin Care: ಚರ್ಮದ ಆರೈಕೆಗೆ ಈ 3 ಉಪಾಯಗಳು ಬೆಸ್ಟ್​; ಬಾಲಿವುಡ್​ ಸೆಲಿಬ್ರಿಟಿಗಳ ತ್ವಚೆ ರಹಸ್ಯವೂ ಇದೇ!

author img

By

Published : Jul 28, 2023, 1:28 PM IST

These three ingredients are best for skin care
These three ingredients are best for skin care

Skin Care Tips: ಬಾಲಿವುಡ್​​ ನಟ-ನಟಿಯರ ಸೌಂದರ್ಯ, ತ್ವಚೆಯ ಆರೈಕೆಯ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಇದ್ದೇ ಇರುತ್ತದೆ. ಹಾಗಿದ್ದರೆ, ಸುಂದರ ತ್ವಚೆಗೆ ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.

ಬಾಲಿವುಡ್​ ಸೆಲೆಬ್ರಿಟಿಗಳು ತ್ವಚೆಯ ಆರೈಕೆಯಲ್ಲಿ ಸದಾ ದೇಸಿ ಆರೈಕೆಗೆ ಮಹತ್ವ ನೀಡುತ್ತಾರೆ. ಅದರಲ್ಲೂ ಮುಖ್ಯವಾಗಿ ಕಡಲೆ ಹಿಟ್ಟು, ಮೊಸರು, ಅರಿಶಿಣ ಬಳಸುತ್ತಾರೆ. ತ್ವಚೆಯ ರಹಸ್ಯ ಕಾಪಾಡುವಲ್ಲಿ ಈ ಮೂರು ಮ್ಯಾಜಿಕ್​ ಪವರ್​ ಸೃಷ್ಟಿಸುವುದು ಸುಳ್ಳಲ್ಲ. ಇವು ಭಾರತೀಯರ ಸೌಂದರ್ಯದ ಪ್ರಮುಖ ರಹಸ್ಯವಾಗಿದ್ದು, ಇದರಲ್ಲಿನ ಕೆಲವು ಅಂಶಗಳು ತ್ವಚೆಯ ಹೊಳಪು ಮತ್ತು ಆರೈಕೆ ಮಾಡುವಲ್ಲಿ ಯಶಸ್ವಿಯಾಗಿವೆ. ಈ ಕುರಿತು ಕಾಸ್ಮೆಟೊಲೊಜಿಸ್ಟ್​ ಪೂಜಾ ನಾಗ್ದೇವ್​ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಅರಿಶಿಣ: ಭಾರತೀಯರ ಅಡುಗೆ ಮನೆಯಲ್ಲಿರುವ ಅರಿಶಿಣ ರೋಗ ಪ್ರತಿರೋಧಕ ಗುಣ ಹೊಂದಿದ್ದು, ಸೌಂದರ್ಯ ಸೇರಿದಂತೆ ಹಲವು ಚಿಕಿತ್ಸೆಯಲ್ಲೂ ಮಹತ್ವ ಪಡೆದಿದೆ.

ಆ್ಯಂಟಿ ಆಕ್ಸಿಡೆಂಟ್​ ಅಂಶ: ಅರಿಶಿಣದಲ್ಲಿ ಕ್ಯುರ್ಕುಮಿನ್​ ಇದೆ. ಇದು ನೈಸರ್ಗಿಕವಾಗಿ ರಾಡಿಕಲ್​ ಮುಕ್ತ ಸಾಮರ್ಥ್ಯ ಹೊಂದಿದೆ. ಇದು ಅವಧಿ ಪೂರ್ವ ವಯಸ್ಸಾಗುವಿಕೆ ಮತ್ತು ತ್ವಚೆ ಹಾನಿ ತಡೆಯುತ್ತದೆ.

ಉರಿಯೂತ ವಿರೋಧಿ ಪರಿಣಾಮ: ಅರಿಶಿಣದಲ್ಲಿ ಉರಿಯೂತ ವಿರೋಧಿ ಗುಣ ಹೊಂದಿದ್ದು, ತ್ವಚೆಯನ್ನು ಮೃದುವಾಗಿಸುತ್ತದೆ. ರೆಡ್​ನೆಸ್​ ಮತ್ತು ತ್ವಚೆ ಕಿರಿಕಿರಿ ತಡೆಯುತ್ತದೆ.

ಆ್ಯಂಟಿ ಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿಮೈಕ್ರೊಬಯಲ್​: ಅರಿಶಿಣ ನೈಸರ್ಗಿಕವಾಗಿ ರೋಗ ನಿರೋಧಕ ಗುಣ ಹೊಂದಿದ್ದು, ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿಯಂತ್ರಣ ಮಾಡುತ್ತದೆ.

ಕಡಲೆ ಹಿಟ್ಟು: ಕಡಲೆಹಿಟ್ಟು ಎಕ್ಸೊಲಿಯಟ್​ ಪರಿಣಾಮ ಹೊಂದಿದ್ದು, ಇದು ಚರ್ಮದಲ್ಲಿನ ಸತ್ತ ಕೋಶ ತೆಗೆದುಹಾಕುತ್ತದೆ. ಚರ್ಮದಲ್ಲಿ ತೆರೆದ ರಂಧ್ರಗಳನ್ನು ಮುಚ್ಚುತ್ತದೆ. ನೈಸರ್ಗಿಕ ಬಣ್ಣ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಎಣ್ಣೆ ಹೀರಿಕೊಳ್ಳುವಿಕೆ: ಮುಖದಲ್ಲಿ ಅತಿಯಾದ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ. ಎಣ್ಣೆಯುಕ್ತ ಚರ್ಮದಲ್ಲಿ ಏಳುವ ಮೊಡವೆ ನಿರ್ವಹಣೆ ಮಾಡುತ್ತದೆ.

ಹೊಳೆಯುವಿಕೆ: ಕಡಲೆಹಿಟ್ಟನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮ ಹೊಳೆಯುವಂತೆ ಆಗುತ್ತದೆ. ಸ್ಕಿನ್​ ಟಾನ್​ ನಿವಾರಣೆ ಮಾಡಿ, ಒಟ್ಟಾರೆ ಚರ್ಮದ ಕಾಂತಿಗೆ ಸಹಾಯ ಮಾಡುತ್ತದೆ.

  • " class="align-text-top noRightClick twitterSection" data="">

ಮೊಸರು- ಮಾಶ್ಚರೈಸರ್​: ಮೊಸರಿನಲ್ಲಿ ಸಮೃದ್ಧವಾದ ಲ್ಯಾಕ್ಟಿಕ್​ ಆ್ಯಸಿಡ್​ ಇದ್ದು, ಇದು ನೈಸರ್ಗಿಕವಾಗಿ ತ್ವಚೆಯನ್ನು ಮಾಶ್ಚರೈಸ್​ ಮಾಡುತ್ತದೆ. ಹೈಡ್ರೇಟ್​ ಮಾಡಿ ಚರ್ಮವನ್ನು ಮೃದುಗೊಳಿಸುತ್ತದೆ.

ಇದರಲ್ಲಿನ ಲ್ಯಾಕ್ಟಿಕ್​ ಆಮ್ಲವು ಚರ್ಮದ ಮೃದುತ್ವ ಹೆಚ್ಚಿಸುತ್ತದೆ. ಇದೂ ಕೂಡ ಚರ್ಮದ ಸತ್ತ ಕೋಶ ತೆಗೆದು ಹಾಕುವಲ್ಲಿ ಮತ್ತು ಚರ್ಮದ ವಿನ್ಯಾಸವನ್ನು ಮೃದುವಾಗುವಂತೆ ನೋಡಿಕೊಳ್ಳುತ್ತದೆ.

ಪ್ರೊಬಯೊಟಿಕ್ಸ್​: ಮೊಸರಿನಲ್ಲಿ ಪ್ರೊಬಯಾಟಿಕ್ಸ್​ ಅಂಶ ಇದ್ದು, ಚರ್ಮದ ಮೈಕ್ರೋಬಯೊಮ್​ ಮತ್ತು ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ.

ಇದನ್ನೂ ಓದಿ: ಮಾನ್ಸೂನ್​ನಲ್ಲಿ ಮುಖದ ಅಂದವನ್ನು ಹೆಚ್ಚಿಸಿ; ಮನೆಯಲ್ಲಿ ಸುಲಭವಾಗಿ ತಯಾರಿಸಿ ಫೇಸ್​ಪ್ಯಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.