ETV Bharat / sukhibhava

ಬೂಸ್ಟರ್​ ಡೋಸ್​ ತೆಗೆದುಕೊಳ್ಳುವುದು ಸುರಕ್ಷಿತ: ಸ್ಮಾರ್ಟ್​ವಾಚ್​ ಆಧಾರದಲ್ಲಿ ಇಸ್ರೇಲ್​ ಅಧ್ಯಯನ

author img

By

Published : Dec 30, 2022, 5:47 PM IST

ಬೂಸ್ಟರ್​ ಡೋಸ್​ ಸುರಕ್ಷಿತ ಎಂದು ಇಸ್ರೇಲ್​ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

Israeli researchers
ಸ್ಮಾರ್ಟ್​ವಾಚ್

ಇಸ್ರೇಲ್‌: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಸುರಕ್ಷಿತ ಎಂದು ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್ ವಾಚ್‌ಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಇದನ್ನು ದೃಢಪಡಿಸಲಾಗಿದೆ.

ಸಂಶೋಧಕರು ಇಸ್ರೇಲ್​ನ ಸುಮಾರು 5 ಸಾವಿರ ನಾಗರಿಕರ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ಅವರಲ್ಲಿ 2,038 ಮಂದಿ ಬೂಸ್ಟರ್​ ಡೋಸ್​ ಪಡೆದವರಾಗಿದ್ದಾರೆ. ಸ್ಮಾರ್ಟ್​ವಾಚ್​ ಸಹಾಯದಿಂದ ಬೂಸ್ಟರ್​ ತೆಗೆದುಕೊಂಡವರ ಮತ್ತು ತೆಗೆದುಕೊಳ್ಳದವರ ಹೃದಯ ಬಡಿತ, ನಿದ್ರೆಯ ಗುಣಮಟ್ಟ ಮತ್ತು ನಡೆದಾಡುವ ದೂರ ಸೇರಿದಂತೆ ದೈಹಿಕ ಚಟುವಟಿಕೆಗಳ ನಿಯತಾಂಕಗಳನ್ನು ಸಂಗ್ರಹಿಸಲಾಯಿತು. ಈ ವೇಳೆ ಹೃದಯ ಬಡಿತದ ನಿಯತಾಂಕಗಳು ಮೊದಲಿಗೆ ಸ್ವಲ್ಪ ಹೆಚ್ಚು ತೋರಿಸಿದ್ದವು. ಆದರೆ ಕೆಲವೇ ಕ್ಷಣದಲ್ಲಿ ಅವು ಸಂಪೂರ್ಣ ನಿಯಂತ್ರಣಕ್ಕೆ ಬಂದವು. ಈ ಕಾರಣಕ್ಕಾಗಿ ಕೋವಿಡ್​ ಲಸಿಕೆ ಬೂಸ್ಟರ್​ ಪಡೆಯುವುದು ಸುರಕ್ಷಿತ ಎಂದು ಸಂಶೋಧಕರು ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಂಡವರು ಕೂಡ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಮತ್ತು ಸ್ಮಾರ್ಟ್​ವಾಚ್​ ನಿಯತಾಂಕಗಳು ಅದಕ್ಕೆ ಪೂರಕವಾಗಿರುವಂತಹ ವರದಿಯನ್ನೇ ನೀಡಿದೆ. ಬೂಸ್ಟರ್​ ಡೋಸ್​ ಪಡೆದವರಲ್ಲಿ ಯಾವುದೇ ರೀತಿಯ ಗಂಭೀರ ಆರೋಪಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಎಐಜಿ ಆಸ್ಪತ್ರೆಗಳ ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.