ETV Bharat / sukhibhava

2023 ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 111ನೇ ಸ್ಥಾನ: ವರದಿ ದೋಷಪೂರಿತ ಎಂದ ಸರ್ಕಾರ

author img

By ETV Bharat Karnataka Team

Published : Oct 13, 2023, 11:42 AM IST

ಪ್ರತಿ ವರ್ಷ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಲಾಗುವುದು. ಈ ಪಟ್ಟಿಯಲ್ಲಿ ಭಾರತ ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನ ಕುಸಿತ ಕಂಡಿದೆ.

indian government has rejected Global Hunger Index
indian government has rejected Global Hunger Index

ನವದೆಹಲಿ: 2013ರ ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್​ಐ)ದ 125 ದೇಶಗಳ ಪಟ್ಟಿಯಲ್ಲಿ ಭಾರತವೂ 111ನೇ ಸ್ಥಾನ ಪಡೆದಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನ ಕುಸಿತ ಕಂಡಿದೆ. ಆದರೆ, ಸರ್ಕಾರ ಈ ವರದಿಯನ್ನು ದೋಷ ಪೂರಿತ ಎಂದು ತಿರಸ್ಕರಿಸಿದೆ. 2023ರ ಜಾಗತಿಕ ಹಸಿವಿನ ಸೂಚ್ಯಂಕವು ಶೇ 28.7ರಷ್ಟು ಸ್ಕೋರ್​ ಮಾಡಿದೆ. ಭಾರತದ ಹಸಿವಿನ ಮಟ್ಟ ಗಂಭೀರ ಸ್ವರೂಪದ್ದಾಗಿದೆ ಎಂದು ಜಾಗತಿಕ ವರದಿ ತಿಳಿಸಿದೆ. ಐರ್ಲೆಂಡ್ ಮತ್ತು ಜರ್ಮನಿಯಿಂದ ಸರ್ಕಾರೇತರ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಈ ವರದಿಯನ್ನು ಬಿಡುಗಡೆ ಮಾಡಿದೆ.

ಕಳೆದ ವರ್ಷದ ಅಂದರೆ 2022ರ 125 ದೇಶದಗಳ ಈ ಪಟ್ಟಿಯಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು.

ವರದಿ ಅಲ್ಲಗಳೆದ ಕೇಂದ್ರ: ಈ ವರದಿಯು ದೋಷ ಪುರಿತವಾಗಿದೆ. ಇದರಲ್ಲಿ ಹಸಿವಿನ ಮಾಪನವನ್ನು ಸರಿಯಾಗಿ ನಡೆಸಿಲ್ಲ. ಇದು ಭಾರತದ ನೈಜ ಸ್ಥಾನವನ್ನು ಸರಿಯಾಗಿ ಪ್ರತಿನಿಧಿಸಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ವರದಿಯಲ್ಲಿ ಪಾಕಿಸ್ತಾನ 102, ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀ ಲಂಕಾ 60 ಮತ್ತು ದಕ್ಷಿಣ ಏಷ್ಯಾ ಮತ್ತು ಉಪ ಸಹಾರನ್​ ಆಫ್ರಿಕಾದಲ್ಲಿ ಅಧಿಕ ಹಸಿವಿನ ಮಟ್ಟವನ್ನು ಹೊಂದಿರುವುದಾಗಿ ತಿಳಿಸಿದೆ.

ಸೂಚ್ಯಂಕದಲ್ಲಿ ಭಾರತದ ಹಸಿವಿನ ಮಾಪಕವನನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದಕ್ಕೆ ಬಳಕೆ ಮಾಡಿರುವ ಮಾದರಿಗಳು ತಪ್ಪಾಗಿವೆ. ಇದರಲ್ಲಿ ನಾಲ್ಕು ಮಕ್ಕಳಲ್ಲಿ ಮೂರು ಮಗುವಿಒನ ಆರೋಗ್ಯದ ಸೂಚ್ಯಕವಾಗಿದ್ದು, ಇದು ಒಟ್ಟಾರೆ ಜನಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಮಾದರಿಗಳ ಬಳಕೆ ಅಸಮಪರ್ಕ: ನಾಲ್ಕನೇ ಮತ್ತು ಪ್ರಮುಖ ಸೂಚ್ಯಕವಾಗಿರುವ ಅಪೌಷ್ಟಿಕತೆಯ ಜನಸಂಖ್ಯೆಯ ಅನುಪಾತವನ್ನು ಅಭಿಪ್ರಾಯದ ಮತಗಳ ಮೂಲಕ ಪಡೆಯಲಾಗಿದ್ದು, ಇದಕ್ಕೆ ಕೇವಲ 3000 ಗಾತ್ರದ ಸಣ್ಣ ಮಾದರಿಯನ್ನು ಪಡೆಯಲಾಗಿದೆ ಎಂದರು.

ಇದರ ಜೊತೆಗೆ, ವರದಿಯು ಭಾರತದಲ್ಲಿ ಮಕ್ಕಳ ತೀವ್ರವಾದ ಅಪೌಷ್ಟಿಕತೆ ದರ ಸೂಚಿಸಲಾಗಿದ್ದು, ಇದು ಶೇ 18.7ರಷ್ಟು ತೋರಿಸಲಾಗಿದೆ. ಭಾರತದಲ್ಲಿ ಮಕ್ಕಳ ಅಪೌಷ್ಟಿಕಾಂಶತೆ ದರ 16.6ರಷ್ಟಿದ್ದು, ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ ಶೇ 3.1ರಷ್ಟಿದೆ.

ಇನ್ನು ವರದಿಯಲ್ಲಿ 15ರಿಂದ 24 ವರ್ಷದೊಳಗಿನ ಮಹಿಳೆಯರಲ್ಲಿನ ರಕ್ತ ಹೀನತೆ ಪ್ರಮಾಣ ಶೇ 58.1ರಷ್ಟು ತೋರಿಸಲಾಗಿದೆ. ಈ ಎರಡೂ ಸೂಚ್ಯಂಕ ಗಳು ಕುಂಠಿತ ಮತ್ತು ಕ್ಷೀಣಿಸುವಿಕೆಯು ನೈರ್ಮಲ್ಯ, ಪರಿಸರ ಮತ್ತು ಹಸಿವಿನ ಹೊರತಾದ ಆಹಾರ ಸೇವನೆ ಬಳಕೆಯಂತಹ ಇತರ ಅಂಶಗಳ ಸಂಕೀರ್ಣ ಪರಸ್ಪರ ಕ್ರಿಯೆಗಳ ಫಲಿತಾಂಶಗಳಾಗಿವೆ. ಇದು ಜಿಎಚ್​ಐನಲ್ಲಿ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನು ನಾಲ್ಕನೇ ಸೂಚಕ ಸಂಬಂಧ ಹೆಸರು, ಹಸಿವಿನಿಂದ ಶಿಶು ಮರಣ ಯಾವುದೇ ಪುರಾವೆ ಇಲ್ಲ ಎಂಬುದನ್ನು ಗಮನಿಸಬೇಕಿದೆ.

2023ರ ಏಪ್ರಿಲ್​ನಿಂದ ಪೋಷಣ್​ ಕಾರ್ಯಕ್ರಮ ಪತ್ತೆಯಲ್ಲಿ ಐದು ವರ್ಷದೊಳಗಿನ ಮಾಪನದ ದತ್ತಾಂಶವನ್ನು ನೀಡಲಾಗಿದ್ದು, ಇದು ಸುಸ್ಥಿರವಾಗಿ ಅಭಿವೃದ್ಧಿ ಕಂಡಿದೆ. ಏಪ್ರಿಲ್​ 2023ರಲ್ಲಿ 6.34ಕೋಟಿ ಇದ್ದರೆ, 2023 ಸೆಪ್ಟೆಂಬರ್​ನಲ್ಲಿ 7.24 ಕೋಟಿ ಇದೆ. ಪೋಷಣ್​ ಟ್ರಾಕರ್​ನಲ್ಲಿ ಮಗುವಿನ ಕುಂಠಿತವೂ ಕಡಿಮೆ ಇದ್ದು 7.2ರಷ್ಟಿದೆ ಎಂದು ಸಚಿವರು ಮಾಹಿತಿ ಒದಗಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಯಶಸ್ವಿನಿ ಯೋಜನೆ ಜಾರಿಗೆ ಪ್ರಕ್ರಿಯೆ ಶುರು: ಯಾರು ಅರ್ಹರು? ಸೌಲಭ್ಯ ಪಡೆಯುವುದು ಹೇಗೆ? ಸಂಪೂರ್ಣ ವಿವರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.