ETV Bharat / sukhibhava

ಚಳಿಗಾಲದಲ್ಲಿ ಅಡುಗೆ ಮನೆಯೇ ಔಷಧಾಲಯ; ಕೆಮ್ಮು- ನೆಗಡಿಗೆ ಅಲ್ಲೇ ಇದೆ ಮದ್ದು

author img

By ETV Bharat Karnataka Team

Published : Nov 15, 2023, 12:32 PM IST

Tips to reduce cough and cold in winter; ಚಳಿಗಾಲದಲ್ಲಿ ನಾವು ಸೇವಿಸುವ ಆಹಾರಗಳು ದೇಹದ ಉಷ್ಣಾಂಶ ಕಾಯ್ದುಕೊಳ್ಳಲು ಸಹಾಯ ಆಗುತ್ತದೆ.

home-remedies-for-winter-cough-and-cold
home-remedies-for-winter-cough-and-cold

ಚಳಿಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಎಂದರೆ ಅದು ಕೆಮ್ಮು ಮತ್ತು ನೆಗಡಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ. ಎಲ್ಲ ವಯೋಮಾನದವರನ್ನು ಬಾಧಿಸುವ ಈ ರೋಗಕ್ಕೆ ಹೆಚ್ಚಾಗಿ ಅಡುಗೆ ಮನೆಯಲ್ಲಿಯೇ ಮದ್ದು ಇದೆ. ಇದರಿಂದ ವಾರಗಳ ಕಾಲ ಬಾಧಿಸುವ ಈ ಸಮಸ್ಯೆಯನ್ನು ಸುಲಭವಾಗಿ ಓಡಿಸಬಹುದು. ಚಳಿಗಾಲದಲ್ಲಿ ನಿಮ್ಮ ಅಡುಗೆ ಮನೆಯೇ ಔಷಧಾಲಯ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಈ ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯದಿರಿ. ಇವುಗಳು ದೇಹಕ್ಕೆ ಬೇಕಾಗುವ ಉಷ್ಣಾಂಶವನ್ನು ಒಳಗಿನಿಂದಲೇ ನೀಡಿ, ಪ್ರತಿರೋಧಕ ಅಂಶವನ್ನು ಹೆಚ್ಚಿಸುತ್ತವೆ ಅನ್ನೋದು ತಿಳಿದಿರಲಿ.

  • ಕೆಮ್ಮು ಉಂಟಾದಾಗ ಅರಿಶಿಣ, ಕರಿ ಮೆಣಸು, ಜೇನು ತುಪ್ಪವನ್ನು ಬೆರಸಿದ ಹಾಲನ್ನು ಕುಡಿಯುವುದರಿಂದ ಅನೇಕ ಪ್ರಯೋಜನ ಸಿಗಲಿದೆ.
  • ಚಳಿಗಾಲದ ಅವಧಿಯಲ್ಲಿ ತಪ್ಪದೇ ನೀರು ಅಥವಾ ಟೀಗೆ ತುಳಸಿಯನ್ನು ಬೆರಸಿ, ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.
  • ಈ ಸಮಯದಲ್ಲಿ ನೆಲ್ಲಿಕಾಯಿ, ಅನಾನಸ್​, ನಿಂಬೆ, ಕಿವಿಯಂತಹ ಹಣ್ಣುಗಳನ್ನು ನಿಮ್ಮ ಡಯಟ್​ನಲ್ಲಿ ಸೇರಿಸಿ.
  • ನೀರಿನಲ್ಲಿ 4-5 ಮೆಣಸು, ಅರಿಶಿಣ, ಮೆಂತ್ಯೆ, ಒಂದು ಟೀಸ್ಪೂನ್​ ಜೀರಿಗೆ, ಸ್ವಲ್ಪ ಶುಂಠಿ, ಬೆಳ್ಳುಳ್ಳಿ, 7-8 ತುಳಸಿಯನ್ನು ಹಾಕಿ ಚೆನ್ನಾಗಿ ಕುದಿಸಿ ಬೆಳಗಿನ ಹೊತ್ತು ಕುಡಿಯುವುದನ್ನು ಮರೆಯಯಬೇಡಿ.
  • ಈ ಅವಧಿಯಲ್ಲಿ ಜೀರ್ಣಕ್ರಿಯೆ ನಿಧಾನವಾಗುವ ಹಿನ್ನೆಲೆ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆಗೆ ಸಹಾಯ ಆಗುತ್ತದೆ.
  • ಗಂಟಲು ಸಮಸ್ಯೆ ಕಾಡುತ್ತಿದ್ದರೆ, ಇದಕ್ಕೆ ಜೇನುತುಪ್ಪ ನಿಮಗೆ ಪರಿಹಾರ ನೀಡುತ್ತದೆ.
  • ಚಳಿ ಹಿನ್ನೆಲೆ ದೇಹದ ಉಷ್ಣಾಂಶ ಹೆಚ್ಚಿಸಲು ಚಹಾ ಅಥವಾ ಕಾಫಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಅದರ ಬದಲಾಗಿ ಶುಂಠಿ ಅಥವಾ ನಿಂಬೆ ಚಹಾ ಸೇವಿಸಿ
  • ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಕೊಂಚ ಅರಿಶಿಣ ಸೇವಿಸಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ
  • ಗಂಟಲು ಕೆರೆತದಂತಹ ಸಮಸ್ಯೆ ಕಾಡುತ್ತಿದ್ದರೆ, ಬೆಚ್ಚಿನ ನೀರಿಗೆ ಕೊಂಚ ಅರಿಶಿಣ ಮತ್ತು ಉಪ್ಪನ್ನು ಬೆರಸಿ ಬಾಯಿ ಮುಕ್ಕಳಿಸಿ.
  • ತುಳಸಿ ಎಲೆಗಳನ್ನು ಅಗೆಯುವುದರಿಂದ ಕೂಡ ದೇಹಕ್ಕೆ ಉಷ್ಣಾಂಶ ಸಿಗುತ್ತದೆ. ಅಲ್ಲದೇ, ಇದು ಕೆಮ್ಮು ಮತ್ತು ನೆಗಡಿ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
  • ಇದರ ಜೊತೆಗೆ ಚಳಿಗಾಲದ ಸಮಯದಲ್ಲಿ ಕರಿದ ಪದಾರ್ಥ, ಹೊರಗಿನ ಆಹಾರ ಮತ್ತು ಕೊಬ್ಬಿನ ಆಹಾರಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ಈ ಸಮಯದಲ್ಲಿ ಮನೆಯಲ್ಲೇ ತಯಾರಿಸಿದ ಆಹಾರ ಸೇವನೆಗೆ ಒತ್ತು ನೀಡಿ.

ಇದನ್ನೂ ಓದಿ: ಚಳಿಗಾಲದಲ್ಲಿ ತಪ್ಪದೇ ಕ್ಯಾರೆಟ್​ ಹಲ್ವಾ ತಿನ್ನಬೇಕಂತೆ; ಇದರ ಹಿಂದಿನ ಗುಟ್ಟು ಏನ್​ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.