ಚಳಿಗಾಲದಲ್ಲಿ ತಪ್ಪದೇ ಕ್ಯಾರೆಟ್​ ಹಲ್ವಾ ತಿನ್ನಬೇಕಂತೆ; ಇದರ ಹಿಂದಿನ ಗುಟ್ಟು ಏನ್​ ಗೊತ್ತಾ?

author img

By ETV Bharat Karnataka Team

Published : Nov 13, 2023, 11:52 AM IST

http://10.10.50.85:6060/reg-lowres/13-November-2023/carrot-halwa_1311newsroom_1699854718_642.jpg

ಚಳಿಗಾಲದಲ್ಲಿ ಕ್ಯಾರೆಟ್​ ಹಲ್ವಾ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಮನೆಯಲ್ಲಿ ಕ್ಯಾರೆಟ್​ ಇದೆ ಎಂದರೆ ಸಾಕು, ಹಲ್ವಾ ಮಾಡಿ, ಸಿಹಿ ತಿನ್ನುವ ಆಸೆಯನ್ನು ತಣಿಸಿಕೊಳ್ಳುತ್ತೇವೆ. ತಜ್ಞರು ಹೇಳುವಂತೆ ಇದು ಕೇವಲ ನಿಮ್ಮ ಬಾಯಿಗೆ ರುಚಿ ಜೊತೆಗೆ ಆರೋಗ್ಯದ ಹಲವು ಪ್ರಯೋಜನವನ್ನು ಹೊಂದಿದೆ. ಅದರಲ್ಲೂ ಚಳಿಗಾಲದಲ್ಲಿ ಕ್ಯಾರೆಟ್​ ಹಲ್ವಾ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ, ತೂಕ ಕಳೆದುಕೊಳ್ಳಲು, ಚಳಿಗಾಲದ ಋತುಮಾನದಲ್ಲಿ ತ್ವಚೆಯ ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ಈ ಕ್ಯಾರೆಟ್​ ಹಲ್ವಾ ಚಳಿಗಾಲದಲ್ಲಿ ಏಕೆ ತಿನ್ನಬೇಕು ಎಂಬ ಕುರಿತ ಮಾಹಿತಿ ಇಲ್ಲಿದೆ.

ಪ್ರತಿ ರಕ್ಷಣಾ ವ್ಯವಸ್ಥೆ ಕಾಪಾಡಲು: ಚಳಿಗಾಲದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ನಿಧಾನವಾಗುತ್ತದೆ. ಅನೇಕ ಅಧ್ಯಯನಗಳು ತೋರಿಸಿರುವಂತೆ ಈ ಸಮಯದಲ್ಲಿ ಹೆಚ್ಚಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡದಿರುವ ಹಿನ್ನೆಲೆ ವಿಟಮಿನ್​ ಡಿ ಕೊರತೆ ಕಾಡುತ್ತದೆ. ಹೀಗಾಗಿ ಬೇಗ ಸೋಂಕಿನ ದಾಳಿ ಕೂಡ ಆಗುತ್ತದೆ. ತಜ್ಞರು ಹೇಳುವಂತೆ ಕ್ಯಾರೆಟ್​ ಹಲ್ವಾ ಸೇವನೆ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಿ, ಸಮಸ್ಯೆಗಳನ್ನು ತಡೆಯುತ್ತದೆ. ಕ್ಯಾರೆಟ್​ನಲ್ಲಿ ಬೆಟಾ -ಕ್ಯಾರೊಟೆನ್​ ಮತ್ತು ಆ್ಯಂಟಿ ಅಕ್ಸಿಡೆಂಟ್​ ಇದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳಿಸಿ, ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಹಲ್ವಾಗೆ ಸೇರಿಸುವ ಹಾಲು, ಏಲಕ್ಕಿ, ಬಾದಾಮಿ, ಗೋಂಡಂಬಿಗಳು ಕೂಡ ಪ್ರತಿಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ ಅಂಶವನ್ನು ಹೊಂದಿದೆ.

ತೂಕ ನಿಯಂತ್ರಣ: ಚಳಿಗಾಲದಲ್ಲಿ ಚಳಿ ಎಂದು ಬೆಚ್ಚಗಿರುವ ನಾವು ವ್ಯಾಯಾಮವನ್ನು ಕಡಿಮೆ ಮಾಡುತ್ತೇವೆ. ಅಲ್ಲದೇ ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ. ಜೊತೆಗೆ ಹವಾಮಾನ ಬದಲಾವಣೆಯಿಂದ ಹಾರ್ಮೋನ್​ಗಳು ಕೂಡ ಅಸಮತೋಲನ ಉಂಟಾಗುತ್ತದೆ. ಇದರ ಪರಿಣಾಮ ತೂಕ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ದೇಹಕ್ಕೆ ಶಕ್ತಿ ಮತ್ತು ಉಷ್ಣತೆ ಬೇಕಾಗುತ್ತದೆ. ಈ ಶಕ್ತಿಗಾಗಿ ಹೆಚ್ಚಿನ ಕ್ಯಾಲೋರಿ ಆಹಾರ ಸೇವನೆ ಮಾಡಬೇಕು. ಇದರಿಂದ ನಾವು ತೂಕವನ್ನು ಹೆಚ್ಚಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಕ್ಯಾರೆಟ್​ ಹಲ್ವಾ ಹೆಚ್ಚು ಉಪಯುಕ್ತ ತಿನಿಸಾಗಿದೆ. ಇದು ತೂಕ ನಿಯಂತ್ರಣವನ್ನು ಮಾಡುತ್ತದೆ. ಕಾರಣ ಕ್ಯಾರೆಟ್​ನಲ್ಲಿನ ಫೈಬರ್​​ ಅಂಶ ಜೀರ್ಣವಾಗಲು ಸಮಯ ಬೇಕಾಗುತ್ತದೆ. ಈ ಹಿನ್ನೆಲೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಆಗಿ ಹಸಿವು ಉಂಟಾಗುವುದಿಲ್ಲ.

ನೈಸರ್ಗಿಕ ಮಾಶ್ಚರೈಸರ್​​: ಚಳಿಗಾಲದಲ್ಲಿ ಚರ್ಮವೂ ಮಾಶ್ಚರೈಸರ್​ ಅನ್ನು ಕಳೆದುಕೊಂಡು, ಶುಷ್ಕತೆ ಅನುಭವಿಸುತ್ತೇವೆ. ಇದು ಕೆರೆತ, ಉರಿ, ಚರ್ಮ ಕೆಂಪಾಗುವಿಕೆಗೆ ಕಾರಣವಾಗುತ್ತದೆ. ಒಣ ಚರ್ಮಕ್ಕೆ ಮಾಶ್ಚರೈಸರ್​, ಲೋಷನ್​ ಏನೇ ಹಚ್ಚಿದರೂ ಆದು ತಾತ್ಕಾಲಿಕ ಪರಿಹಾರ ನೀಡುತ್ತದೆ. ಇವು ಚರ್ಮದ ಒಳಗಿನಿಂದ ಚಿಕಿತ್ಸೆ ನೀಡುವುದಿಲ್ಲ. ಆದರೆ, ಕ್ಯಾರೆಟ್​ ಚರ್ಮದೊಳಗಿನಿಂದ ನೈಸರ್ಗಿಕವಾಗಿ ಚರ್ಮವನ್ನು ಮಾಶ್ಚರೈಸರ್​ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣ ಕ್ಯಾರೆಟ್​ನಲ್ಲಿರುವ ವಿಟಮಿನ್​ ಎ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹೊಸ ಚರ್ಮ ಕೋಶದ ಅಭಿವೃದ್ಧಿಗೆ ಸಹಾಯ ಆಗುತ್ತದೆ. ಇದರಿಂದ ಚರ್ಮಕ್ಕೆ ಮಾಶ್ಚರೈಸರ್​ ಮಾಡಿದರೆ ಹೊಳೆಯುತ್ತದೆ.

ಚರ್ಮದ ಕ್ಯಾನ್ಸರ್​ ಅಪಾಯ ತಡೆ: ಕ್ಯಾರೆಟ್​​ ಕ್ಯಾನ್ಸರ್​ ಅಪಾಯವನ್ನು ತಡೆಯುತ್ತದೆ. ಕ್ಯಾರೆಟ್​ನಲ್ಲಿ ಕೆಲವು ವಿಧದ ಫೈಟೊಕೆಮಿಕಲ್ಸ್ ಇರುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್​​ ಆಗಿ ಕ್ಯಾನ್ಸರ್​ ವಿರುದ್ಧ ಹೋರಾಡುತ್ತದೆ. ಇದು ಕ್ಯಾನ್ಸರ್​ ಟ್ಯೂಮರ್​ ಆಗುವುದನ್ನು ತಪ್ಪಿಸುತ್ತದೆ.

ಉಷ್ಣತೆ ನೀಡುತ್ತದೆ: ಚಳಿಗಾಲದಲ್ಲಿ ನಾವು ಏನೆ ತಿಂದರೂ ಬಿಸಿಯಾಗಿರಬೇಕು ಎಂದು ಬಯಸುತ್ತೇವೆ. ಅಷ್ಟೇ ಅಲ್ಲದೇ ಆ ಆಹಾರಗಳು ಉಷ್ಣತೆ ನೀಡಿ ದೇಹ ಬೆಚ್ಚಾಗಿಸಬೇಕು ಎನ್ನುತ್ತೇವೆ. ಆರೋಗ್ಯ ತಜ್ಞರು ಹೇಳುವಂತೆ ಕ್ಯಾರೆಟ್​ ಹಲ್ವಾ ಅಂತಹ ಒಂದು ತಿನಿಸಾಗಿದೆ. ಇದರಲ್ಲಿ ತುಪ್ಪು, ಹಾಲು ಮತ್ತು ಒಣ ಹಣ್ಣುಗಳಿದ್ದು, ಇದರಲ್ಲಿ ಸಮೃದ್ಧ ಕ್ಯಾಲ್ಸಿಯಂ, ಪ್ರೋಟಿನ್​​, ಫೈಬರ್​ ಮತ್ತು ಆರೋಗ್ಯಕರ ಕೊಬ್ಬಿನ ಅಂಶ ಇರುತ್ತದೆ. ಇದು ದೇಹಕ್ಕೆ ಉಷ್ಣತೆ ನೀಡುತ್ತದೆ. ಇದು ಮಾತ್ರವಲ್ಲ, ಹಲ್ವಾದಲ್ಲಿ ಬಳಕೆ ಮಾಡಲಾದ ಪದಾರ್ಥಗಳು ದೇಹಕ್ಕೆ ತಕ್ಷಣಕ್ಕೆ ಶಕ್ತಿ ಮತ್ತು ಉತ್ತೇಜನವನ್ನು ಒದಗಿಸುತ್ತವೆ.

ಬೆಲ್ಲ ಬಳಸಿ: ಹಲ್ವಾಗೆ ಸಕ್ಕರೆ ಬಳಕೆ ಮಾಡುವುದು ಸಾಮಾನ್ಯ. ಆದರೆ ತಜ್ಞರು ಹೇಳುವಂತೆ ಹಲ್ವಾವನ್ನು ಸಕ್ಕರೆ ಬದಲಾಗಿ ಬೆಲ್ಲದೊಂದಿಗೆ ಮಾಡುವುದರಿಂದ ಅದರ ರುಚಿ ದುಪ್ಪಟ್ಟಾಗುವ ಜೊತೆಗೆ ಆರೋಗ್ಯ ಪ್ರಯೋಜನ ಸಿಗುತ್ತದೆ.

ಇದನ್ನೂ ಓದಿ: ಭಾರತೀಯ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಧುಮೇಹ: ಕಾರಣ, ಲಕ್ಷಣ, ಪರಿಹಾರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.