ETV Bharat / sukhibhava

ತಾಯಿಯ ಗರ್ಭದಲ್ಲಿದ್ದ ಭ್ರೂಣಕ್ಕೆ ಅಪರೂಪದ ಮಿದುಳು ಸಮಸ್ಯೆ: ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

author img

By

Published : May 5, 2023, 3:14 PM IST

ವೈದ್ಯಕೀಯ ಲೋಕದಲ್ಲಿನ ಹೊಸ ಪ್ರಯೋಗ ಜೊತೆಗೆ ಅಚ್ಚರಿಗೆ ಕಾರಣವಾಗಿದೆ ಈ ಪ್ರಕರಣ. ಮಿದುಳಿನ ರಕ್ತನಾಳ ಸಮಸ್ಯೆಗೆ ಒಳಗಾದ ಭ್ರೂಣಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

http://10.10.50.80:6060//finalout3/odisha-nle/thumbnail/05-May-2023/18427573_665_18427573_1683271918621.png
http://10.10.50.80:6060//finalout3/odisha-nle/thumbnail/05-May-2023/18427573_665_18427573_1683271918621.png

ಹೈದರಾಬಾದ್​: ಗರ್ಭಾವಸ್ಥೆಯಲ್ಲಿದ್ದ ಮಗುವಿನಲ್ಲಿ ಅಪರೂಪದ ಮಿದುಳಿನ ರಕ್ತನಾಳಸ ಸಮಸ್ಯೆಗೆ ಒಳಗಾಗಿದ್ದು, ಅದಕ್ಕೆ ಬೋಸ್ಟನ್​ ಚಿಲ್ಡ್ರನ್​ ಆಸ್ಪತ್ರೆ ಮತ್ತು ಬ್ರಿಗ್ಯಾಮ್​ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಸರ್ಜರಿ ನಡೆಸುವ ಮೂಲಕ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗರ್ಭದಲ್ಲೇ ಇರುವಾಗ ಮಗುವಿನ ಮಿದುಳಿನ ಪಕ್ಕದಲ್ಲೇ 14 ಮಿಲಿಮೀಟರ್​ ಅಗದ ರಕ್ತದ ಹರಿವು ಕಂಡಿದೆ. ಇಂತಹ ಅಪರೂಪದ ಸ್ಥಿತಿಯನ್ನು ವೆನೂಸ್​ ಆಫ್​ ಗ್ಯಾಲೆನ್​ ಮಲ್ಫೋರ್ಮೆಷನ್​ ಎಂದು ಕರೆಯಲಾಗುವುದು. ಈ ಸಮಸ್ಯೆ ನಿವಾರಣೆ ಮಾಡದಿದ್ದರೆ, ಮಗು ಹುಟ್ಟಿದ ಬಳಿಕ ಮಿದುಳಿನ ಹಾನಿ, ಹೃದಯ ಸಮಸ್ಯೆ ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ವೆನಸ್​ ಆಫ್​ ಗ್ಯಾಲೆನ್​ ಮಲ್ಫಾರ್ಮೆಷನ್​ನಲ್ಲಿ ರಕ್ತದ ನಾಳಗಳು ಮಿದುಳಿನಿಂದ ರಕ್ತವನ್ನು ಸರಿಯಾಗಿ ಸಾಗಿಸುವುದಿಲ್ಲ. ಇದರಿಂದ ನಾಳ ಮತ್ತು ಹೃದಯದಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ.

30ನೇ ವಾರದ ಗರ್ಭದಲ್ಲಿರುವ ಮಗುವಿನಲ್ಲಿ ಮೊದಲ ಬಾರಿಗೆ ಅಲ್ಟ್ರಾಸೌಂಡ್ ಈ ಸಮಸ್ಯೆ​ ಪತ್ತೆಯಾಗಿದೆ. ಈ ಸಮಸ್ಯೆ ಪತ್ತೆಯಾದಾಗ ಪೋಷಕರು ಆತಂಕಗೊಂಡಿದ್ದು, ಈ ಸಮಸ್ಯೆ ನಿವಾರಣೆಗೆ ಯುಟೆರೊ ಸರ್ಜಿಕಲ್​ ಚಿಕಿತ್ಸೆಗೆ ಮುಂದಾಗಿದ್ದಾರೆ. ಬೊಸ್ಟೊನ್​ ಚಿಲ್ಡ್ರನ್​ ಆಸ್ಪತ್ರೆ ಮತ್ತು ಬ್ರಿಗ್ಯಾಮ್​ ಮತ್ತು ಮಹಿಳಾ ಆಸ್ಪತ್ರೆ ತಂಡ 34 ವಾರದ ಗರ್ಭದಲ್ಲಿದ್ದ ಮಗುವಿಗೆ ಚಿಕಿತ್ಸೆ ನೀಡಲು ಮುಂದಾದರು.

ಅಲ್ಟ್ರಾಸೌಂಡ್​ ಮಾರ್ಗದರ್ಶನ ಸಹಾಯದಿಂದ ಅಮ್ನಿಒಸೆಟೆಸಿಸ್​​ ಬಳಕೆ ರೀತಿಯ ಸೂಚಿ ಬಳಕೆ ಮಾಡಿ ಅಸಹಜವಾಗಿ ರಕ್ತದ ಹರಿವನ್ನು ಕತ್ತರಿಸಲಾಯಿತು. ಭ್ರೂಣದಲ್ಲಿದ್ದ ಮಗುವಿಗೆ ಯಶಸ್ವಿ ಚಿಕಿತ್ಸೆ ನಡೆಸಿದ್ದು, ಮಗುವು ಆರೋಗ್ಯಯುತವಾಗಿದೆ. ಈ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಯಶಸ್ಸಿನಿಂದಾಗಿ ಭವಿಷ್ಯದಲ್ಲಿ, ಹಲವಾರು ಮಿದುಳಿನ ಸಮಸ್ಯೆ ಹೊಂದಿರುವ ಭ್ರೂಣಗಳಿಗೆ ಅದೇ ರೀತಿಯಲ್ಲಿ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ಭವಿಷ್ಯವು ಭ್ರೂಣದ ಶಸ್ತ್ರಚಿಕಿತ್ಸೆಯೊಂದಿಗೆ ಇದು ಮಾದರಿಯಾಗಿದೆ.

ಭ್ರೂಣಕ್ಕೆ ಹೃದಯ ಚಿಕಿತ್ಸೆ: ದೆಹಲಿಯ ಏಮ್ಸ್​ನಲ್ಲಿ ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಯಶಸ್ವಿ ಹೃದಯ ಕವಾಟ ಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ. ಇದನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದರು. ಭ್ರೂಣದ ದ್ರಾಕ್ಷಿ ಗಾತ್ರದ ಹೃದಯದ ಬಂದ್ ಆಗಿದ್ದ ವಾಲ್ವ್​ ಅನ್ನು ಮತ್ತೆ ತೆರೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಈ ಅಪರೂಪದ ಚಿಕಿತ್ಸೆ ನಡೆಸಿದ ವೈದ್ಯರಿಗೆ ಸಚಿವರು ಕೂಡ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ದ್ರಾಕ್ಷಿ ಗಾತ್ರದ ಹೃದಯಕ್ಕೆ ಯಶಸ್ವಿ ಬಲೂನ್ ಡೈಲೇಶನ್ ಚಿಕಿತ್ಸೆ ಮಾಡಲಾಗಿದೆ. ಈ ವಿಧಾನವನ್ನು ಅಲ್ಟ್ರಾಸೌಂಡ್ ಮೂಲಕ ನಡೆಸಲಾಗುತ್ತದೆ. ಏಮ್ಸ್​ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಜೊತೆಗೆ ಹೃದ್ರೋಗ ಮತ್ತು ಹೃದಯ ಅರಿವಳಿಕೆ ವಿಭಾಗದ ವೈದ್ಯರು ಈ ಸಂಕೀರ್ಣ ಬಲೂನ್ ಡೈಲೇಶನ್ ಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ವೈದ್ಯರಿಂದ ಪಡೆದ ಮಾಹಿತಿಯ ಪ್ರಕಾರ, ಈ ಚಿಕಿತ್ಸೆಯ ನಂತರ ಭ್ರೂಣ ಮತ್ತು ತಾಯಿ ಇಬ್ಬರೂ ಚೆನ್ನಾಗಿದ್ದಾರೆ.

ಇದನ್ನೂ ಓದಿ: ಒಂದೇ ಹನಿ ರಕ್ತದಲ್ಲಿ ಎಚ್​ಐವಿ, ಹೆಪಟೈಟಸ್​ ಬಿ ಮತ್ತು ಸಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.