ETV Bharat / sukhibhava

ಚರ್ಮದ ಆರೈಕೆಯಲ್ಲಿ ಮೋಡಿ ಮಾಡುವ ಡ್ರ್ಯಾಗನ್​ ಫ್ರುಟ್​; ಒಮ್ಮೆ ಬಳಸಿ ಇದರ ಫೇಸ್​ ಪ್ಯಾಕ್​...

author img

By ETV Bharat Karnataka Team

Published : Oct 20, 2023, 11:40 AM IST

dragon-fruit-face-pack-for-skin-care
dragon-fruit-face-pack-for-skin-care

ಅತ್ಯಂತ ಲಾಭಾದಾಯಕ ಬೆಳೆಗಳಲ್ಲಿ ಒಂದಾಗಿರುವ ಡ್ರ್ಯಾಗನ್​ ಫ್ರುಟ್​ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಪ್ರಮುಖವಾಗಿದೆ.

ಹೈದರಾಬಾದ್​: ಮಾರುಕಟ್ಟೆಯಲ್ಲಿಂದು ಡ್ರ್ಯಾಗನ್​ ಫ್ರುಟ್​ಗೆ ಹೆಚ್ಚಿನ ಬೇಡಿಕೆಯಿದೆ. ಉಷ್ಣವಲಯದಲ್ಲಿ ಬೆಳೆಯುವ ಈ ಹಣ್ಣನ್ನು ಇಂದು ಅನೇಕ ಕಡೆ ಪ್ರಯೋಗಿಕವಾಗಿ ಬೆಳೆದು ಯಶಸ್ಸು ಕಂಡವರು ಇದ್ದಾರೆ. ಕೇವಲ ರುಚಿ ಮತ್ತು ಆರೋಗ್ಯದ ಅಂಶವನ್ನು ಹೊಂದಿರದ ಈ ಹಣ್ಣು ಹಲವು ಅದ್ಬುತ ಪ್ರಯೋಜನ ಹೊಂದಿದೆ. ಅದರಲ್ಲೂ ತ್ವಚೆಯ ಆರೈಕೆಯಲ್ಲೂ ಇದನ್ನು ಪ್ರಮುಖವಾಗಿ ಬಳಕೆ ಮಾಡುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.

ತ್ವಚೆಯ ಆರೈಕೆ: ತ್ವಚೆಯ ಆರೈಕೆ ಅತಿ ಹೆಚ್ಚಿನ ಕಾಳಜಿ ವಿಚಾರವಾಗಿದ್ದು, ಅದರಲ್ಲೂ ಒಣ ತ್ವಚೆಯನ್ನು ಸಾಕಷ್ಟು ಮುನ್ನೆಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ತ್ವಚೆಯ ಉತ್ಪನ್ನಗಳಲ್ಲಿರುವ ಕೆಲವು ರಾಸಾಯನಿಕಗಳು ತ್ವಚೆಗೆ ಹಾನಿಯನ್ನು ಮಾಡುತ್ತದೆ. ಈ ಹಿನ್ನೆಲೆ ಕೆಲವೊಮ್ಮೆ ನೈಸರ್ಗಿಕ ಆರೈಕೆ ಅತ್ಯವಶ್ಯಕವಾಗುತ್ತದೆ. ಅದರಲ್ಲಿ ಒಂದು ಡ್ರ್ಯಾಗನ್​ ಫ್ರುಟ್​​ನಿಂದ ಮಾಡಿಕೊಳ್ಳುವ ಆರೈಕೆಯಾಗಿದೆ. ಇದು ಚರ್ಮವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಡ್ರಾಗನ್​ ಹಣ್ಣಿನ ಆರೈಕೆ ಮಾಡಲು ಇಲ್ಲಿದೆ ಕೆಲವು ಸಲಹೆ.

ಡ್ರ್ಯಾಗನ್​ ಹಣ್ಣಿನ ಪ್ರಯೋಜನ: ಡ್ರ್ಯಾಗನ್​ ಫ್ರುಟ್​ನಲ್ಲಿನ ಅತ್ಯುತ್ತಮ ನೈಸರ್ಗಿಕ ಅಂಶ ಇದ್ದು, ಇದು ಮುಖದ ನೆರಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಉತ್ಕರ್ಷಣ ನಿರೋಧಕ ಗುಣ ಚರ್ಮವನ್ನು ಮೃದು ಮಾಡುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಮತ್ತು ತೇವಾಂಶವನ್ನು ಪುನರ್​ಸ್ಥಾಪಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಾಗಿ ಉತ್ಕರ್ಷಣ ನಿರೋಧಕ, ಖನಿಜ, ಜೀವ ಸತ್ವ ಮತ್ತು ಆರೋಗ್ಯಕರ ಕೊಬ್ಬಿನಾಮ್ಲಗಳಿದ್ದು, ತ್ವಚೆಗೆ ಬೇಕಾದ ಅಗತ್ಯ ಪೋಷಣೆ ಒದಗಿಸುತ್ತದೆ.

ಇನ್ನು ತ್ವಚೆಗೆ ಈ ಡ್ರ್ಯಾಗನ್​ ಹಣ್ಣನ್ನು ಹೇಗೆ ಬಳಕೆ ಮಾಡುವುದು ಎಂಬ ಕುರಿತು ಚಿಂತಿಸುತ್ತಿದ್ದರೆ, ಇಲ್ಲಿದೆ ಸರಳ ಸಲಹೆಗಳು

ಹೀಗೆ ಮಾಡಿ: ರೋಸ್​ ವಾಟರ್​, ಕಡಲೆ ಹಿಟ್ಟು, ಹಾಲು, ಡ್ರ್ಯಾಗನ್​ ಹಣ್ಣನ್ನು ತೆಗೆದುಕೊಳ್ಳಿ. ಡ್ರ್ಯಾಗನ್​ ಹಣ್ಣನ್ನು ಚೆನ್ನಾಗಿ ರುಬ್ಬಿ ಪೇಸ್ಟ್​ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಹಾಲು ಮತ್ತು ರೋಸ್​​ ವಾಟರ್​ ಅನ್ನು ಸೇರಿಸಿ ಚೆನ್ನಾಗಿ ಪೇಸ್ಟ್​ ಮಾಡಿ. ಇದಾದ ಬಳಿಕ ಈ ಪೇಸ್ಟ್​ ಅನ್ನು ಮುಖ ಮತ್ತು ಕುತ್ತಿಗೆ ಭಾಗಗಳಿಗೆ ಹಚ್ಚಿ. 20 ನಿಮಿಷ ಹಾಗೇ ಬಿಡಿ. 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಮೃದುವಾಗಿ ಉತ್ತಮ ಪೋಷಣೆ ಲಭ್ಯವಾಗುತ್ತದೆ.

ಇದನ್ನೂ ಓದಿ: ಸಾಂಪ್ರದಾಯಕ ಬೇಸಾಯಕ್ಕೆ ಗುಡ್​ ಬೈ; ಡ್ರ್ಯಾಗನ್​ ಫ್ರೂಟ್​ ಬೆಳೆದು ಕೈ ತುಂಬಾ ಸಂಪಾದಿಸುವ ಹಾವೇರಿ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.