ETV Bharat / state

ಯಾದಗಿರಿಯ ಹತ್ತಿಕುಣಿ ಡ್ಯಾಂ ಭರ್ತಿಗೆ ಕ್ಷಣಗಣನೆ: ರೈತರಲ್ಲಿ ಮೂಡಿದ ಸಂತಸ

author img

By

Published : Jul 22, 2021, 5:33 AM IST

ಪ್ರತಿವರ್ಷ ನಮ್ಮ ಹತ್ತಿಕುಣಿ ಜಲಾಶಯ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು, ಆದರೆ ಈ ವರ್ಷ ಬೇಗನೆ ಭರ್ತಿಯಾಗಿರುವದರಿಂದ ರೈತರು ಸಂತಸಗೊಂಡಿದ್ದಾರೆ.

Dam
Dam

ಯಾದಗಿರಿ: ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಹಸಿರು ಬೆಟ್ಟಗಳ ಮಧ್ಯೆ ಇರುವ ತಾಲೂಕಿನ ಹತ್ತಿಕುಣಿ ಜಲಾಶಯ ಭರ್ತಿಯಾಗುತ್ತಿದ್ದು, ಅಧಿಕಾರಿಗಳು ನೀರು ಹೊರ ಬಿಡುವ ಯೋಚನೆಯಲ್ಲಿದ್ದಾರೆ. ಇದು ರೈತರಲ್ಲಿ ಸಂತಸ ಮೂಡಿದೆ.

ಈ ಭಾಗದ ರೈತರ ಜೀವನಾಡಿಯಾಗಿರುವ ಜಲಾಶಯ ಬೇಗನೆ ಭರ್ತಿಯಾಗಿರುವುದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪೂರ, ದಸರಾಬಾದ್ ಗ್ರಾಮಗಳ ಒಟ್ಟು 5300 ಎಕರೆ ಜಮೀನು ನೀರಾವರಿ ಕ್ಷೇತ್ರವಾಗುತ್ತದೆ. ರೈತರು ಭತ್ತ, ಶೇಂಗಾ, ಹತ್ತಿ, ಜೋಳ, ಸಜ್ಜೆ ಇನ್ನಿತರ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಅವರು ಈಗಾಗಲೇ ಕೃಷಿ ಚಟುವಟಿಕೆಗಳ ತಯಾರಿಯಲ್ಲಿ ತೊಡಗಿದ್ದಾರೆ.


ಜಲಾಶಯ ವಿಶಾಲವಾಗಿದ್ದು, ಮೇಲ್ಭಾಗದ ಮೋಟ್ನಳ್ಳಿ, ಕೋಟಗೇರಾ, ಕೆರೆಗಳು ಈಗಾಗಲೇ ತುಂಬಿರುವದರಿಂದ ಹೆಚ್ಚು ನೀರು ನಿರಂತರ ಜಲಾಶಯಕ್ಕೆ ಹರಿದು ಬರುತ್ತಿದೆ. ಒಟ್ಟು 0.352 ಟಿಎಮ್‌ಸಿ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 0.305 ಟಿಎಮ್‌ಸಿ ನೀರು ಸಂಗ್ರಹವಿದೆ. ಇನ್ನೂ ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್‌ಗಳನ್ನು ತೆರೆಯಲು ನೀರಾವರಿ ಇಂಜಿನೀಯರ್ ಸಿದ್ಧಾರೂಡ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಜಲಾಶಯಕ್ಕೆ ಹರಿದು ಬರುತ್ತಿರುವ ಪ್ರವಾಸಿಗರು:

ಜಲಾಶಯ ಭರ್ತಿಯಾಗಿದೆ ಎಂಬ ಸುದ್ಧಿ ತಿಳಿಯುತ್ತಿದ್ದಂತೆ ಹತ್ತಿಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ರೈತರು ಜಲಾಶಯಕ್ಕೆ ಬೆಳಿಗ್ಗೆಯಿಂದಲೇ ಆಗಮಿಸುತ್ತಿದ್ದಾರೆ. ಈಗಾಗಲೇ ಅಲ್ಲಿನ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ, ಮಕ್ಕಳು ಆಟವಾಡಲು ಸೂಕ್ತ ವಾತಾವರಣ ನಿರ್ಮಾಣ ಮಾಡಿರುವುದರಿಂದ ಜನರು ಜಲಾಶಯ, ನಿಸರ್ಗದ ಸೌಂದರ್ಯವನ್ನು ಸವಿದು ತೆರಳುತ್ತಿದ್ದಾರೆ.

ಪ್ರತಿವರ್ಷ ನಮ್ಮ ಹತ್ತಿಕುಣಿ ಜಲಾಶಯ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು, ಆದರೆ ಈ ವರ್ಷ ಬೇಗನೆ ಭರ್ತಿಯಾಗಿರುವುದರಿಂದ ರೈತರು ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಬೆಳೆಯಲು ಸಹಾಯಕವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.