ETV Bharat / state

ಯಾದಗಿರಿ ಜಿಲ್ಲಾದ್ಯಂತ ಧಾರಾಕಾರ ಮಳೆ.. ಹಲವು ಸೇತುವೆ ಜಲಾವೃತ

author img

By

Published : Sep 19, 2020, 6:53 PM IST

ಹತ್ತಿಕುಣಿ ಜಲಾಶಯದಿಂದ 300ಕ್ಕೂ ಹೆಚ್ಚು ಕ್ಯುಸೆಕ್ ನೀರು ಹೊರಬಿಡಲಾಗಿದೆ. ಚಮನಳ್ಳಿಯಿಂದ ಯಾದಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತವಾಗಿದೆ..

Heavy rains in Yadagiri district
ಯಾದಗಿರಿ ಜಿಲ್ಲಾದ್ಯಂತ ಧಾರಾಕಾರ ಮಳೆ: ಹಲವು ಸೇತುವೆಗಳು ಜಲಾವೃತ

ಯಾದಗಿರಿ : ಕೃಷ್ಣಾ ಮತ್ತು ಭೀಮಾ ನದಿಯ ಪ್ರವಾಹದಿಂದ ನಲುಗಿದ್ದ ಯಾದಗಿರಿ ಜನತೆಗೆ ಇದೀಗ ಮಳೆರಾಯ ಗಾಯದ ಮೇಲೆ ಬರೆ ಎಳೆದಿದ್ದಾನೆ. ಜಿಲ್ಲಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಸೇತುವೆ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಯಾದಗಿರಿ ಜಿಲ್ಲಾದ್ಯಂತ ಧಾರಾಕಾರ ಮಳೆ.. ಹಲವು ಸೇತುವೆ ಜಲಾವೃತ

ಯಾದಗಿರಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಬಾಚವಾರ ಗ್ರಾಮದ ಬಳಿಯ ಸೇತುವೆ ಜಲಾವೃತವಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಜತೆಗೆ ಹಲವು ಗ್ರಾಮಗಳು ಹಾಗೂ ಹೊಲಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. ಹತ್ತಿಕುಣಿ ಜಲಾಶಯದಿಂದ 300ಕ್ಕೂ ಹೆಚ್ಚು ಕ್ಯುಸೆಕ್ ನೀರು ಹೊರಬಿಡಲಾಗಿದೆ. ಚಮನಳ್ಳಿಯಿಂದ ಯಾದಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತವಾಗಿದೆ.

ಯರಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಥಾನುನಾಯಕ ತಾಂಡಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಯಾದಗಿರಿ ತಾಲೂಕಿನ ಅರಕೇರ (ಬಿ), ಅಲ್ಲಿಪುರ ಖಾನಳ್ಳಿ ಸೇರಿ ವಿವಿಧೆಡೆ ಮನೆಗಳ ಗೋಡೆ ಕುಸಿದು ಅಪಾರ ನಷ್ಟವುಂಟಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.