ETV Bharat / state

ದಲಿತ ಕೇರಿಗೆ ಸಿಗದ ಕುಡಿಯುವ ನೀರು: ಚರಂಡಿ ನೀರನ್ನೇ ಆಶ್ರಯಿಸಿದ ಸ್ಥಳೀಯರು

author img

By

Published : Oct 16, 2020, 2:28 PM IST

'ನಮಗೆ ಅನೇಕ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ಮಳೆಗಾಲವಾದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ' ಎಂದು ಸ್ಥಳೀಯರಾದ ಹಣಮಂತ ಕಟ್ಟಿಮನಿ ಆತಂಕ ವ್ಯಕ್ತಪಡಿಸಿದ್ದಾರೆ.

Drinking water problem for Dalit Keri in Waganegera village
ದಲಿತ ಕೇರಿಗೆ ಸಿಗದ ಕುಡಿಯುವ ನೀರು

ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮದಲ್ಲಿನ ದಲಿತ ಕೇರಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರೂ, ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಲಿತ ಕೇರಿಗೆ ಸಿಗದ ಕುಡಿಯುವ ನೀರು

ಈ ಕುರಿತು ಸ್ಥಳೀಯ ನಿವಾಸಿ ಹಣಮಂತ ಕಟ್ಟಿಮನಿ ಮಾತನಾಡಿ, ನಮಗೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ಮಳೆಗಾಲವಾದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ನಲ್ಲಿಯಲ್ಲಿ ಚರಂಡಿ ನೀರು ಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹಾಗಾಗಿ, ನಮಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಇದೇ ರೀತಿ ಕಲುಷಿತಗೊಂಡ ನೀರು ಕುಡಿದು ಗ್ರಾಮದ ಅನೇಕ ಜನರು ಕಾಲರಾ ಮತ್ತು ಮಲೇರಿಯಾ ಜ್ವರದಿಂದ ನಲುಗಿ ಹೋಗಿದ್ದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.