ETV Bharat / state

ವಿದೇಶಿಗರ ಸಹಾಯ ಕೇಳುವುದು ದೇಶದ್ರೋಹ: ರಾಹುಲ್ ಗಾಂಧಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

author img

By

Published : Mar 10, 2023, 8:26 AM IST

ct ravi
ಸಿ ಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ​

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಯಾದಗಿರಿ: ವಿದೇಶಿಗರ ಸಹಾಯ ಕೇಳುವುದು ದೇಶದ್ರೋಹದ ಕಾರ್ಯ. ಅಂತಹ ಸ್ಥಿತಿ ನಮ್ಮ ದೇಶಕ್ಕೆ ಬಂದಿಲ್ಲ. ರಾಹುಲ್ ಗಾಂಧಿಗೆ ನಮ್ಮ ದೇಶದ ಬಗ್ಗೆ ನಿಯತ್ತು ಇದ್ದಿದ್ದರೆ ವಿದೇಶದಲ್ಲಿ ಭಾರತವನ್ನು ಟೀಕಿಸುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಆಡಳಿತದಿಂದ ಭಾರತ ಸರ್ವ ಕ್ಷೇತ್ರದಲ್ಲಿಯೂ ಬಲಿಷ್ಠವಾಗಿದೆ. ರಾಹುಲ್​ಗೆ ದೇಶಕ್ಕೆ ಬರುವ ಯೋಗ್ಯತೆ ಇಲ್ಲ, ಯಾವ ಮುಖ ಹೊತ್ತು ದೇಶಕ್ಕೆ ಹಿಂದಿರುಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ನಗರದ ಚರಬಸವೇಶ್ವರ ಗದ್ದುಗೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಂಚುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಫಾಲ್ಸ್ ಕಾರ್ಡ್. ಅದು ಸದ್ಯದಲ್ಲೇ ಮುಳುಗುತ್ತಿರುವ ಹಡಗು. ಕಾಂಗ್ರೆಸ್ಸಿನವರಿಗೆ ನೀತಿ, ನಿಯತ್ತು ಇಲ್ಲದ ಕಾರಣಕ್ಕೆ ದೇಶದಲ್ಲಿ ಪಕ್ಷ ಅಧೋಗತಿಗೆ ತಲುಪಿದೆ. ನಾನು ನನ್ನ ಕ್ಷೇತ್ರದಲ್ಲಿ ದತ್ತ ಜಯಂತಿ ಆಚರಣೆಯಲ್ಲಿ ಮಾತ್ರ ಸೀರೆ ಹಂಚಿದ್ದೇನೆ. ಸೀರೆ ಸುಟ್ಟದ್ದು ನಮ್ಮ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಸೀರೆ ಸುಟ್ಟ ವ್ಯಕ್ತಿ ನಮ್ಮ ಪಕ್ಷದವನಲ್ಲ. ಕೈಗಳಲ್ಲಿ ಸೀರೆ ಹಿಡ್ಕೊಂಡು, ಫುಲ್ ಟೈಟಾಗಿ ಮಾತನಾಡಿದ್ದಾನೆ ಎಂದು ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ ನಾಯಕರ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಕಲ್ಯಾಣ ಕರ್ನಾಟಕದ ಅನುದಾನ 5,000 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಯಾವ ಪಕ್ಷಗಳಿಂದ ಆಗದ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಮಾಡಿದೆ. 1,050 ಕೋಟಿ ರೂ.ಗಳ ವೆಚ್ಚದಲ್ಲಿ 4,500 ಸ್ಕಾಡಾ ಗೇಟ್‌ಗಳನ್ನು ಅಳವಡಿಸಿ ಕೊನೆ ಭಾಗದ ರೈತರಿಗೆ ನೀರು ಒದಗಿಸುವ ಕಾರ್ಯ ಮಾಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿ ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ 6 ಸಾವಿರ ಮತ್ತು ರಾಜ್ಯ ಸರ್ಕಾರದ 4ಸಾವಿರ ರೂ. ಗಳು ಸೇರಿ 10 ಸಾವಿರ ಹಣವನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ: ರಾಹುಲ್ ಗಾಂಧಿ ಆರೋಪ

ಕೆಂಭಾವಿ ರೋಡ್ ಶೋ : ತಾಲೂಕಿನ ಕೆಂಭಾವಿ ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸಂಜೀವನಗರ ವೃತ್ತದಲ್ಲಿ ಯುವ ಮುಖಂಡ ಅಮೀನ್‌ರೆಡ್ಡಿ ಯಾಳಗಿ ಅವರ ಅಭಿಮಾನಿ ಬಳಗ ಹಾಗೂ ಅಪಾರ ಬಿಜೆಪಿ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಹೂ ಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಸಂಸದ ರಾಜ ಅಮರೇಶ್ವರ ನಾಯಕ, ಶಾಸಕ ನರಸಿಂಹನಾಯಕ ರಾಜೂಗೌಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಗುರುಕಾಮಾ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ಇತರರಿದ್ದರು.

ಇದನ್ನೂ ಓದಿ: ಪೆಗಾಸಸ್‌ ಮೂಲಕ ನನ್ನ ಫೋನ್‌ ಮೇಲೆ ಗೂಢಚಾರಿಕೆ; ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.