ETV Bharat / state

ಭೀಮಾ ನದಿ ಪ್ರವಾಹ ; ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ ಮುಳುಗಡೆ

author img

By

Published : Sep 21, 2020, 6:50 PM IST

Updated : Sep 21, 2020, 7:52 PM IST

ನಗರದ ಕೂಗಳತೆ ದೂರದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನ ಮತ್ತೊಮ್ಮೆ ಮುಳುಗಡೆಯಾಗಿವೆ. ತಾಲೂಕಿನ ಗುರಸಣಗಿ, ಚಟ್ನಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ನೂರಾರು ಎಕರೆ ಭತ್ತ, ತೊಗರಿ, ಹತ್ತಿ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ..

Again Flood At Yadagiri
ಮುಳುಗಡೆಯಾದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯಗಳು

ಯಾದಗಿರಿ : ಭೀಮಾ ನದಿ ಪ್ರವಾಹಕ್ಕೆ ಯಾದಗಿರಿಯ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯಗಳು ಮುಳುಗಡೆಯಾಗಿವೆ. ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಭೀಮಾ ನದಿ ಪ್ರವಾಹಕ್ಕೆ ಮುಳುಗಡೆಯಾದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ.

ಮಹರಾಷ್ಟ್ರ ಸೇರಿ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಲಬುರಗಿಯ ಸೊನ್ನ ಬ್ಯಾರೇಜ್​ನಿಂದ ಸತತವಾಗಿ ಭೀಮಾ ನದಿಗೆ ನೀರು ಹರಿಬಿಡಲಾಗುತ್ತಿದೆ. ಯಾದಗಿರಿ ವ್ಯಾಪ್ತಿಯ ಭೀಮಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ನಗರದ ಕೂಗಳತೆ ದೂರದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನ ಮತ್ತೊಮ್ಮೆ ಮುಳುಗಡೆಯಾಗಿವೆ. ತಾಲೂಕಿನ ಗುರಸಣಗಿ, ಚಟ್ನಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ನೂರಾರು ಎಕರೆ ಭತ್ತ, ತೊಗರಿ, ಹತ್ತಿ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ.

Again Flood At Yadagiri
ಭೀಮಾ ನದಿ ಪ್ರವಾಹಕ್ಕೆ ಮುಳುಗಡೆಯಾದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಾಲಯ.

ಒಂದೆಡೆ ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ 1 ಲಕ್ಷದ 12 ಸಾವಿರ ಕ್ಯೂಸೆಕ್ ನೀರನ್ನ ಹರಿಬಿಟ್ಟರೆ ಮತ್ತೊಂದೆಡೆ ಕಾಗಿಣ ನದಿಯಿಂದ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನದಿಯ ಒಳ ಹರಿವು ಹೆಚ್ಚಾಗಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ, ಜಿಲ್ಲಾಡಳಿತ ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ಎಚ್ಚರಿಕೆ ನೀಡಿದೆ.

Last Updated : Sep 21, 2020, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.