ETV Bharat / state

ವಿದ್ಯುತ್ ಅವಘಡ: ಮಡ್ನಾಳ ಕ್ಯಾಂಪಿನ 8 ಗುಡಿಸಲುಗಳು ಭಸ್ಮ, ಸಚಿವರಿಂದ ಪರಿಹಾರ

author img

By

Published : Jun 8, 2023, 12:37 PM IST

ವಿದ್ಯುತ್ ಅವಘಡ
ವಿದ್ಯುತ್ ಅವಘಡ

ಯಾದಗಿರಿ ಜಿಲ್ಲೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಎಂಟು ಗುಡಿಸಲುಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಯಾದಗಿರಿ: ವಿದ್ಯುತ್ ಅವಘಡ ಸಂಭವಿಸಿ ಎಂಟು ಗುಡಿಸಲುಗಳು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಸಮೀಪದ ಆಂಧ್ರಕ್ಯಾಂಪಿನಲ್ಲಿ ನಡೆದಿದೆ. ಗುಡಿಸಲುಗಳಲ್ಲಿದ್ದ ಅಡುಗೆ ಸಿಲಿಂಡರ್ ಬೆಂಕಿಗೆ ಸಿಡಿದು ಬೀಳುವುದನ್ನು ಕಂಡು ಹೊಲದಲ್ಲಿದ್ದ ರೈತಾಪಿ ವರ್ಗದವರು ಗಾಬರಿಗೊಂಡಿದ್ದಾರೆ. ಸುಮಾರು 8 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲಿನಲ್ಲಿದ್ದ ಬಂಗಾರದ ಆಭರಣಗಳು, ದವಸ ಧಾನ್ಯ ಸೇರಿದಂತೆ ಬೈಕ್ ಮತ್ತು ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ.

ವಿದ್ಯುತ್ ಅವಘಡ
ವಿದ್ಯುತ್ ಅವಘಡ

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲಿಸಿದರು. ವೈಯಕ್ತಿಕವಾಗಿ ನೊಂದವರ ಕುಟುಂಬಕ್ಕೆ ತಲಾ 10 ಸಾವಿರ ರೂಪಾಯಿನಂತೆ ಪರಿಹಾರ ಧನ ನೀಡಿದರು.

ಸರ್ಕಾರದಿಂದ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಜೆಸ್ಕಾಂ ನಿರ್ಲಕ್ಷದಿಂದ ಕಳೆದ ವರ್ಷ ಸಹ ಇಂತಹ ಅವಘಡ ಸಂಭವಿಸಿತ್ತು. ಪುನಃ ಇಂತಹ ಘಟನೆ ಮರುಕಳಿಸಿದ್ದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

ವಿದ್ಯುತ್ ಅವಘಡ
ವಿದ್ಯುತ್ ಅವಘಡ

ಇದನ್ನೂ ಓದಿ: ಕರುನಾಡಿನಲ್ಲೂ ವಿವಾದಾತ್ಮಕ ಸ್ಟೇಟಸ್ ಪೋಸ್ಟ್: ನಿಪ್ಪಾಣಿಯಲ್ಲಿ ಪ್ರಕರಣ ದಾಖಲು

ಮಹಾರಾಷ್ಟ್ರದಲ್ಲಿ 2 ಮನೆಗಳಲ್ಲಿ ಬೆಂಕಿ ತಗುಲಿ 4 ಜನ ಸಾವನ್ನಪ್ಪಿರುವ ಘಟನೆ: ಎರಡು ಮನೆಗಳಲ್ಲಿ ಬೆಂಕಿ ಅವಘಡ ಸಂಭವಿಸಿ 4 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೇ 22ರಂದು ಶಿವಾಜಿ ನಗರದಲ್ಲಿ ನಡೆದಿತ್ತು. ಹೈಟನ್ಷನ್​ ವಿದ್ಯುತ್​ ತಂತಿ ತಗುಲಿದ ಪರಿಣಾಮ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಿದ್ಯುತ್ ಅವಘಡ
ವಿದ್ಯುತ್ ಅವಘಡ

ವಿಷಯ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಎರಡು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕ ಪಕ್ಕ ಮನೆಯಲ್ಲಿದ್ದ ಜನರನ್ನು ಮನೆ ಬಿಟ್ಟು ಹೊರ ಬರುವಂತೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಪಕ್ಕದ ಮನೆಯ ಬೆಂಕಿ ನಂದಿಸುವವರೆಗೂ ಮನೆ ಬಿಟ್ಟು ಹೊರ ಬಂದಿದ್ದರು. ಇದರಿಂದ ಸಂಭವಿಸಬಹುದಾದ ಹೆಚ್ಚಿನ ಪ್ರಾಣಹಾನಿ ತಪ್ಪಿತ್ತು.

ಸರ್ವಿಸ್​ ವಯರ್​ ತಗುಲಿ ತಾಯಿ ಮತ್ತು ಮಕ್ಕಳು ಸಾವು: ಮಾರ್ಚ್​ 2023ರಲ್ಲಿ ತುಂಡಾಗಿ ಬಿದ್ದಿದ್ದ ಸರ್ವಿಸ್ ವೈರ್ ತಗುಲಿ ತಾಯಿ ಮತ್ತು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಧನಗರದಲ್ಲಿ ನಡೆದಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ ಗುಡುಗು ಮಳೆ ಆರಂಭವಾಗಿತ್ತು. ಮನೆ ಸಮೀಪ ತಂದಿಟ್ಟಿದ್ದ ತೊಗರಿ ಹೊಟ್ಟು ನೆನೆಯುತ್ತದೆ ಎಂದು ಅದನ್ನು ಮುಚ್ಚಲು ಶರಣಮ್ಮ ಹೊರ ಹೋಗಿದ್ದಾರೆ. ಮಕ್ಕಳಾದ ಮುಖೇಶ್, ಸುರೇಶ ಹಿಂಬಾಲಿಸಿ ಹೋಗಿದ್ದು ಮೂವರಿಗೂ ವಿದ್ಯುತ್ ಸ್ಪರ್ಶಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಧ್ಯರಾತ್ರಿ ಸರಣಿ ಅಪಘಾತ... ಅಪಾಯದಿಂದ ಸವಾರರು ಪಾರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.