ವಿಜಯಪುರ ನಗರ ಕ್ಷೇತ್ರದಲ್ಲಿ ಧೈರ್ಯ ಇದ್ದವರು ನಿಲ್ಲಲಿ : ಯತ್ನಾಳ್​ ಸವಾಲ್​

author img

By

Published : Nov 16, 2022, 7:47 PM IST

Etv Bharat

ಮುಂದಿನ ಬಾರಿ ಮುಸ್ಲಿಂರನ್ನೇ ಆರಿಸಿ ತರುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ದರು. ಅವರ ಮುಸ್ಲಿಂ ಅಭಿಮಾನ ಎಲ್ಲಿ ಹೋಯಿತು ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಪ್ರಶ್ನಿಸಿದರು.

ವಿಜಯಪುರ: 2023 ರ ವಿಧಾನಸಭಾ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡೋ ವಿಚಾರವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹಾಗೂ ಬಿಜೆಪಿಯ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನಡುವೆ ವಾಕ್ಸಮರ ಮತ್ತೆ ಆರಂಭವಾಗಿದೆ.‌

ವಿಜಯಪುರ ನಗರ ಕ್ಷೇತ್ರದಿಂದ ಶಾಸಕ ಶಿವಾನಂದ ಪಾಟೀಲ್ ಪುತ್ರಿ ಕಣಕ್ಕಿಳಿಯೋ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್. ಯಾರು ನಿಲ್ಲೋರು ಧೈರ್ಯ ಇದ್ದವರು ನಿಲ್ಲಲಿ ಎಂದು ಹೇಳಿದ್ದೇನೆ. ಮುಂದಿನ ಬಾರಿ ಮುಸ್ಲಿಂರನ್ನೇ ಆರಿಸಿ ತರುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ದರು. ಅವರ ಮುಸ್ಲಿಂ ಅಭಿಮಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೋ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕ್ಷೇತ್ರದಲ್ಲೂ ಒಬ್ಬರು ಬದಲಾವಣೆ ಮಾಡಬೇಕು ಎಂದು ಇದ್ದರು. ಅವರಿಗೆ ಯಾರೂ ಹಣ ಕೊಡಲಿಲ್ಲ. ಕೊನೆಗೆ ಶ್ರೀಪಾದವೇ ಗತಿ ಎಂದು ಅಲ್ಲೇ ಹೋಗಿದ್ದಾರೆ ಎಂದು ಪರೋಕ್ಷವಾಗಿ ಶಿವಾನಂದ ಪಾಟೀಲ್ ವಿರುದ್ಧ ಯತ್ನಾಳ್​ ಕಿಡಿಕಾರಿದರು.

ವಿಜಯಪುರ ನಗರ ಕ್ಷೇತ್ರದಲ್ಲಿ ಧೈರ್ಯ ಇದ್ದವರು ನಿಲ್ಲಲಿ

ನಿಮ್ಮ ಪ್ರಶ್ನೆಗೆ ನಾನೇಗೆ ಉತ್ತರಿಸಲಿ?: ಬೇಡ ಜಂಗಮ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬುರ ಕುರಿತು ನಾನು ಮಾತನಾಡಲ್ಲಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು. ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ನೀವು ಯಾರು ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದ ಯತ್ನಾಳ್​, ಯಾರ ಬಗ್ಗೆ ಮಾತನಾಡಬೇಕು ಬಿಡಬೇಕೆಂಬುದರ ಸ್ವಾತಂತ್ರ್ಯ ನನಗಿದೆ ಎಂದರು.

ಇದನ್ನೂ ಓದಿ: ನಿಮ್ಮ ವಿರುದ್ಧ ನಾನು ಸೋತರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ : ಮಾಜಿ ಸಂಸದ ಶಿವರಾಮೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.