ETV Bharat / state

ಪಿಎಸ್​ಐ ಮರುಪರೀಕ್ಷೆ ಸೂಕ್ತ: ಮಾಜಿ ಸಚಿವ ಎಂಬಿಪಿ

author img

By

Published : Apr 29, 2022, 8:08 PM IST

ಪಿಎಸ್ಐ ಪರೀಕ್ಷೆಯನ್ನು ಅನೇಕರು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಬರೆದಿರುತ್ತಾರೆ. ಆದರೆ ಇದು ಅನಿವಾರ್ಯದ ಪರಿಸ್ಥಿತಿ. ಹಾಗಾಗಿ ಮರು ಪರೀಕ್ಷೆ ಸೂಕ್ತವಾಗಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

Former Home Minister M P Patil, who spoke in Vijayapura
ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ: ಪಿಎಸ್ಐ ನೇಮಕಾತಿಯಲ್ಲಿ ಮರು ಪರೀಕ್ಷೆ ನಡೆಸುವುದು ಸೂಕ್ತವಾಗಿದೆ ಎಂದು ಎಂ.ಬಿ.ಪಾಟೀಲ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರು ಪರೀಕ್ಷೆ ಮಾಡುವುದಾಗಿ ಸರ್ಕಾರ ಹೇಳಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ಆದ್ರೆ ಪಿಎಸ್ಐ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಅವರ ಪಾಲಕರಿಗೆ ನೋವು ಆಗುತ್ತದೆ. ಆದ್ರೂ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದರು.


ಭಾಷೆ ವಿವಾದ: ಹಿಂದಿ ರಾಷ್ಟ್ರೀಯ ಭಾಷೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ, ಅಜಯ್ ದೇವಗನ್​ಗೆ ಬುದ್ಧಿ ಇಲ್ಲ, ಸುದೀಪ್​ ಹೇಳಿರುವುದು ಸರಿಯಾಗಿದೆ. ಕನ್ನಡ ನಮ್ಮ ಮಾತೃಭಾಷೆ, ಅದಕ್ಕೆ ಅದರದೇ ಸ್ಥಾನಮಾನವಿದೆ. ಹಿಂದಿ ಭಾಷೆಯನ್ನು ಮಹಾರಾಷ್ಟ್ರ, ತಮಿಳುನಾಡು ಸೇರಿ ಯಾರೂ ಒಪ್ಪಿ ಕೊಳ್ಳುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ : ಆರೋಪಿಗಳ ಸಂಬಂಧಿಗಳಿಗೆ ಶಾಸಕ ಜಮೀರ್‌ ಫುಡ್‌ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ಬಿಜೆಪಿ ಆಕ್ಷೇಪ

ಶಾಸಕ ಜಮೀರ್​ ವಿಚಾರ: ಹುಬ್ಬಳ್ಳಿ ಗಲಾಟೆ ಆರೋಪಿಗಳ ಕುಟುಂಬದವರಿಗೆ ಶಾಸಕ ಜಮೀರ್​ ಅಹಮ್ಮದ್ ಖಾನ್ ಕಿಟ್ ವಿತರಣೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಶಾಸಕ ಜಮೀರ್​​ ವಿದೇಶದಲ್ಲಿ ಇದ್ದಾರೆ. ಅದಕ್ಕಾಗಿ ಮಾಹಿತಿ ಇಲ್ಲ ಎಂದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.