ETV Bharat / state

ಮುದ್ದೇಬಿಹಾಳದಲ್ಲಿ ಪೇ ಸಿಎಂ ಪೋಸ್ಟರ್ ವಶಕ್ಕೆ ಪಡೆದ ಪೊಲೀಸರು..

author img

By

Published : Sep 25, 2022, 5:21 PM IST

ಪೇ ಸಿಎಂ ಪೋಸ್ಟರ್
ಪೇ ಸಿಎಂ ಪೋಸ್ಟರ್

ರಾಜ್ಯ ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರ ಆರೋಪದ ಪ್ರಚಾರ ಅಭಿಯಾನದ ಭಾಗವಾಗಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪೇಸಿಎಂ ಪೋಸ್ಟರ್ ಅಭಿಯಾನವನ್ನು ಬಳ್ಳಾರಿಯಲ್ಲಿ ನಡೆಸಲಾಯಿತು.

ಬಳ್ಳಾರಿ/ಮುದ್ದೇಬಿಹಾಳ: ರಾಜ್ಯಾದ್ಯಂತ ಸದ್ದು ಮಾಡಿರುವ ಪೇ ಸಿಎಂ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಮುದ್ದೇಬಿಹಾಳದಲ್ಲಿ ಪೊಲೀಸರು ತಡೆದಿದ್ದು, ಪೋಸ್ಟರ್ ಅಂಟಿಸಲು ಬಂದಿದ್ದ ಕಾರ್ಯಕರ್ತರನ್ನು ವಾಪಸ್ ಕಳಿಸಿದ ಘಟನೆ ನಡೆದಿದೆ.

ಬಸ್ ನಿಲ್ದಾಣದಲ್ಲಿ ಈ ವಿವಾದಿತ ಪೋಸ್ಟರ್ ಅಂಟಿಸಲು ಮುಂದಾಗಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಳಿಯಿದ್ದ ಪೋಸ್ಟರ್ ಅನ್ನು ಸಿಪಿಐ ಆನಂದ ವಾಘಮೋಡೆ, ಪಿಎಸ್​ಐ ಆರೀಫ ಮುಶಾಪುರಿ ವಶಕ್ಕೆ ಪಡೆದುಕೊಂಡರು. ಅನುಮತಿ ಇಲ್ಲದೇ ಯಾವುದೇ ರೀತಿಯ ಪ್ರತಿಭಟನೆ ನಡೆಸದಂತೆ ಎಚ್ಚರಿಸಿದರು. ಈ ವೇಳೆ ಪೊಲೀಸರ ಬಂದೋಬಸ್ತ್ ವಹಿಸಲಾಗಿತ್ತು.

ಮುದ್ದೇಬಿಹಾಳದಲ್ಲಿ ಪೇ ಸಿಎಂ ಪೋಸ್ಟರ್ ವಶಕ್ಕೆ ಪಡೆದ ಪೊಲೀಸರು

ರಾಜ್ಯ ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರ ಆರೋಪದ ಪ್ರಚಾರ ಅಭಿಯಾನದ ಭಾಗವಾಗಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪೇಸಿಎಂ ಪೋಸ್ಟರ್ ಅಭಿಯಾನವನ್ನು ಬಳ್ಳಾರಿಯಲ್ಲಿ ನಡೆಸಲಾಯಿತು.

ಪೇಸಿಎಂಗೆ ಧಿಕ್ಕಾರ ಘೋಷಣೆ: ಬಳ್ಳಾರಿ ನಗರದ ಮೋತಿ ವೃತ್ತದ ಬಳಿ ರೈಲ್ವೇ ನಿಲ್ದಾಣದ ಕಾಂಪೌಂಡ್ ಗೆ ಸಂಸದರಾದ ಡಾ. ಕೆ. ಎಲ್ ಹನುಮಂತಯ್ಯ, ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಪೇಸಿಎಂ ಪೋಸ್ಟರ್ ಅಂಟಿಸಿದರು. ಈ ವೇಳೆ ಪೇಸಿಎಂಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಲಾಯಿತು.

ಬಳ್ಳಾರಿ ಶಾಸಕ ಬಿ ನಾಗೇಂದ್ರ ಅವರು ಮಾತನಾಡಿದರು

ಪೇ ಸಿಎಂ ಪೋಸ್ಟರ್ ಅಂಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ನಾಗೇಂದ್ರ, ಬೆಂಗಳೂರು ಒಂದೇ ಅಲ್ಲ, ಇಡೀ ರಾಜ್ಯಾದ್ಯಂತ ಪೇ ಸಿಎಂ ಅಭಿಯಾನವನ್ನು ಮಾಡ್ತಿದ್ದೇವೆ. 224 ಕ್ಷೇತ್ರಗಳಲ್ಲೂ ಪೇ ಸಿಎಂ ಭಿತ್ತಿ ಪತ್ರ ಅಂಟಿಸುತ್ತೇವೆ ಎಂದರು.

ಪೇ ಸಿಎಂ ಅಭಿಯಾನ ನೋಡಿ ಹೊರ ರಾಜ್ಯದ ಶಾಸಕರೂ ಆಶ್ಚರ್ಯ ಪಡುತ್ತಿದ್ದಾರೆ‌. 40% ಮಾಡಿದಾರಾ ಅಂತಾ ಆಶ್ಚರ್ಯದಿಂದ ಕೇಳ್ತಾ ಇದ್ದಾರೆ. ಬೊಮ್ಮಾಯಿ ಸರ್ಕಾರ 40 % ಗುಟ್ಟನ್ನು ನಾವು ರಟ್ಟು ಮಾಡ್ತಿದ್ದೇವೆ ಎಂದು ಹೇಳಿದರು.

ಓದಿ: ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ‌ ವಿರುದ್ಧ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.