ETV Bharat / state

ಭಾರಿ ಮಳೆಗೆ ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

author img

By

Published : Oct 1, 2020, 10:47 AM IST

Updated : Oct 1, 2020, 1:38 PM IST

ಮುದ್ದೇಬಿಹಾಳ ತಾಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತ
ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತ

ಮುದ್ದೇಬಿಹಾಳ: ಕಳೆದ ತಡರಾತ್ರಿ ಸುರಿದ ಭಾರಿ ಮಳೆಯಿಂದ ತಾಲೂಕಿನ ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಅಷ್ಟೇ ಅಲ್ಲದೆ, ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಹೊಲಗಳಿಗೆ ಮತ್ತು ಗ್ರಾಮಗಳಿಗೆ ತೆರಳುವ ರೈತರು ಪರದಾಟ ನಡೆಸುತ್ತಿದ್ದಾರೆ. ಇನ್ನು ಕೂಡಲೇ ಸರ್ಕಾರ ಗ್ರಾಮದ ಸೇತುವೆ ದುರಸ್ತಿ ಕಾರ್ಯ ಮಾಡಬೇಕು. ಮಳೆಗಾಲದಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭಾರಿ ಮಳೆಗೆ ಬಸರಕೋಡ-ಸಿದ್ದಾಪೂರ ಗ್ರಾಮದ ಸಂಪರ್ಕ ಕಡಿತ

ಈ ಬಗ್ಗೆ ರೈತ ಬಸವರಾಜ ಹಡಪದ ಮಾತನಾಡಿ, ಪ್ರತಿ ವರ್ಷ ಮಳೆಯಾದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಐದು ಎಕರೆ ಜಮೀನಿನಲ್ಲಿ ಹಾಕಿರುವ ಕಬ್ಬು ನೀರಿನಿಂದ ನಾಶವಾಗಿದೆ. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಹೊಲಗಳು ಇದೇ ಭಾಗದಲ್ಲಿವೆ. ಅವರು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

Last Updated : Oct 1, 2020, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.