ETV Bharat / state

ವಿದ್ಯುತ್​ ತಂತಿ ತಗುಲಿ ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

author img

By

Published : Mar 26, 2020, 7:47 AM IST

Youth died by electric shock at Bhatkal
ವಿದ್ಯುತ್​ ತಂಗಿ ತಗುಲಿ ಓರ್ವ ಸಾವು, ಮತ್ತೊರ್ವ ಗಂಭೀರ

ಮನೆ ಟೆರಸ್​ ಮೇಲೆ ನಿಂತಿದ್ದ ವೇಳೆ ವಿದ್ಯುತ್​​ ತಂತಿ ತಗುಲಿ ಯುವಕ ಸಾವನ್ನಪಿದ್ದರೆ, ಆತನ ಜೊತೆಗಿದ್ದ ಮತ್ತೊಬ್ಬ ಗಂಭಿತವಾಗಿ ಗಾಯಗೊಂಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳ: ಮನೆ ಟೆರಸ್ ಮೇಲೆ ನಿಂತಿದ್ದ ವೇಳೆ ವಿದ್ಯುತ್ ತಂತಿ‌ ತಗುಲಿ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಕಾರ್​ಸ್ಟ್ರೀಟ್​ ಬಳಿ ನಡೆದಿದೆ.

ವಿದ್ಯುತ್​ ತಂಗಿ ತಗುಲಿ ಯುವಕ ಸಾವು, ಮತ್ತೊರ್ವ ಗಂಭೀರ

ಮೊಹಮ್ಮದ್​ ಫಹಾದ್ ಫಾರಿಕ್ ಮನಿಯಾರ (18) ಮೃತ ಯುವಕ. ಹಜಪ್ ಫಾರಿಕ್ ಮನಿಯಾರ (15) ಗಾಯಗೊಂಡಿರುವ ಯುವಕ. ಈ ಇಬ್ಬರು ಸಹೋದರರು ತಮ್ಮ ಮನೆಯ ಮೇಲಿನ ಟೆರಸ್​ ಮೇಲೆ ನಿಂತಿದ್ದರು. ಆಗ ಆಕಸ್ಮಿಕವಾಗಿ ವಿದ್ಯುತ್​ ತಂತಿ ತಗುಲಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅಕ್ಕ- ಪಕ್ಕದ ಮನೆಯವರು ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.

ಇನ್ನು ಗಾಯಗೊಂಡ ಮತ್ತೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.