ETV Bharat / state

ಮೂಲ ಸೌಕರ್ಯಗಳ ಕೊರತೆ ಆರೋಪ: ಮುರ್ಡೇಶ್ವರದಲ್ಲಿ ಕ್ವಾರಂಟೈನಿಗಳ ಅಳಲು

author img

By

Published : Jun 24, 2020, 12:58 PM IST

ಭಟ್ಕಳ ತಾಲೂಕಿನ ಮುರ್ಡೇಶ್ವರದ ಮೊರಾರ್ಜಿ ವಸತಿ ನಿಲಯದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ಕ್ವಾರಂಟೈನ್ ಕೇಂದ್ರದಲ್ಲಿದ್ದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Bhatkala
ಮುರ್ಡೇಶ್ವರದ ಮೊರಾರ್ಜಿ ವಸತಿ ನಿಲಯ

ಭಟ್ಕಳ: ಮೂಲ ಸೌಕರ್ಯಗಳಿಲ್ಲದ ಮುರ್ಡೇಶ್ವರದ ಮೊರಾರ್ಜಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನ ಮುರ್ಡೇಶ್ವರದ ಮೊರಾರ್ಜಿ ವಸತಿ ನಿಲಯದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಿದ್ದು, ಪುಣೆಯಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರನ್ನು ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಅವರು ಅಲ್ಲಿನ ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.

ಈ ಕ್ವಾರಂಟೈನ್ ಕೇಂದ್ರದಲ್ಲಿ ಈ ಮೊದಲು ಇದ್ದ ಇಬ್ಬರಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಎಲ್ಲರೂ ಕೂಡ ಇಲ್ಲಿರುವ ಅಸಮರ್ಪಕ ಶೌಚಾಲಯವನ್ನು ಬಳಸುತ್ತಿದ್ದಾರೆ. ಅದಲ್ಲದೇ ಕ್ವಾರಂಟೈನ್​​ಗೆ ಒಳಪಟ್ಟಿರುವವರಿಗೆ ಇಲ್ಲಿ ಊಟವನ್ನು ಕೂಡಾ ಸರಿಯಾಗಿ ನೀಡುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆ ಇದೀಗ ಸ್ಥಳೀಯರ ನಿದ್ದೆಗೆಡಿಸಿದೆ. ಹುಮ್ಮಸ್ಸಿನಿಂದಲೇ ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಿದ್ದ ಗ್ರಾಮ ಪಂಚಾಯತ್ ಈ ಬಗ್ಗೆ ಗಮನಹರಿಸುತ್ತಿಲ್ಲವೆಂಬ ಆರೋಪವೂ ಕೇಳಿಬರುತ್ತಿದೆ.

ಮುರ್ಡೇಶ್ವರದ ಮೊರಾರ್ಜಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ

ಮುರ್ಡೇಶ್ವರದ ಮೊರಾರ್ಜಿ ವಸತಿ ಶಾಲೆ ಪರಿವರ್ತಿತ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಈಟಿವಿ ಭಾರತದೊಂದಿಗೆ ಮಾತನಾಡಿ, ಇದೊಂದು ನರಕ ಎಂದು ತಿಳಿಸಿದ್ದಾರೆ. ನಾನು ಪುಣೆಯಿಂದ 15,000 ರೂ. ಬಾಡಿಗೆ ಕೊಟ್ಟು ವಾಹನ ಮಾಡಿಕೊಂಡು ಬಂದಿದ್ದೇನೆ. ಅಲ್ಲದೆ ಸ್ವಯಂ ಪ್ರೇರಿತನಾಗಿ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚೆಕ್​ಪ್​ ಮಾಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಸ್ಥಳೀಯ ಪಂಚಾಯತ್ ಪಿಡಿಓ ಅವರಿಗೆ ಇಲ್ಲಿಯ ಅವ್ಯವ್ಯಸ್ಥೆ ಬಗ್ಗೆ ಹೇಳಿದರೆ ಕೇಸ್ ಮಾಡಿಸುತ್ತೇನೆ, ತಹಶೀಲ್ದಾರರಿಂದ ನನಗೆ ಕರೆ ಬರಲಿ ಎಂದು ಧಮ್ಕಿ ಹಾಕುತ್ತಾರೆ ಎಂದು ಕ್ವಾರಂಟೈನ್​ಲ್ಲಿದ್ದ ವ್ಯಕ್ತಿ ಈಟಿವಿ ಭಾರತದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.