ETV Bharat / state

ಶಿರಸಿ ಪ್ರೇಮಿಗಳ ಆತ್ಮಹತ್ಯೆ ಪ್ರಕರಣ: ಮಗನ ಸಾವಿನಿಂದ ನೊಂದ ತಂದೆಗೂ ಹೃದಯಾಘಾತ

author img

By

Published : Jan 26, 2021, 11:31 PM IST

Updated : Jan 26, 2021, 11:51 PM IST

ಮಗನ ದುರಂತ ಸಾವಿನಿಂದ ಕಂಗಾಲಾಗಿದ್ದ ತಂದೆ ಗಣೇಶ ಶಂಕರ ಮಾವಿನಕುರ್ವೆ(59) ತುಂಬಾ ನೊಂದುಕೊಂಡಿದ್ದರು. ಮಗ ಮತ್ತು ಆತನ ಪ್ರಿಯತಮೆ ಹೆಣವಾಗಿ ಪತ್ತೆಯಾದ ಮರುದಿನವೇ ಅಂದರೆ ಮಂಗಳವಾರ ಬೆಳಗ್ಗೆ ಮನೆಯಲ್ಲಿ ಹೃದಯಾಘಾತದಿಂದ ಅವರೂ ಮೃತಪಟ್ಟಿದ್ದಾರೆ.

father-died-by-heart-attack-after-his-son-commits-suicide-in-shirasi
ಪ್ರೇಮಿಗಳು ಆತ್ಮಹತ್ಯೆ

ಶಿರಸಿ: ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಶವ ಪತ್ತೆಯಾದ ಮರುದಿನವೇ ಯುವಕನ ತಂದೆಯೂ ಸಾವಿನ ಮನೆಯ ಕದ ತಟ್ಟಿದ ಹೃದಯವಿದ್ರಾಹಕ ಘಟನೆ ತಾಲೂಕಿನ ಹುಸುರಿಯ ಬೊಮ್ಮನಕೊಡ್ಲಿನಲ್ಲಿ ನಡೆದಿದೆ.

ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 90.29 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಗನ ಸಾವಿನಿಂದ ಕಂಗಾಲಾಗಿದ್ದ ತಂದೆ ಗಣೇಶ ಶಂಕರ ಮಾವಿನಕುರ್ವೆ(59) ತುಂಬಾ ನೊಂದುಕೊಂಡಿದ್ದರು. ಮಗ ಮತ್ತು ಆತನ ಪ್ರಿಯತಮೆ ಹೆಣವಾಗಿ ಪತ್ತೆಯಾದ ಮರುದಿನವೇ ಅಂದರೆ ಮಂಗಳವಾರ ಬೆಳಗ್ಗೆ ಮನೆಯಲ್ಲಿ ಹೃದಯಾಘಾತದಿಂದ ಅವರೂ ಮೃತಪಟ್ಟಿದ್ದಾರೆ.

father-died-by-heart-attack-after-his-son-commits-suicide-in-shirasi
ಮಗನ ಆತ್ಮಹತ್ಯೆಯಿಂದ ನೊಂದ ತಂದೆಗೆ ಹೃದಯಾಘಾತ

ಬೊಮ್ಮನಕೊಡ್ಲುವಿನ ವಿಕ್ರಮ ಮಾವಿನಕುರ್ವೆ(28) ಹಾಗೂ ತೆರಕನಹಳ್ಳಿಯ ಮೇಘನಾ ನಾಯ್ಕ(27) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ವಿಕ್ರಮ ಮಾವಿನಕುರ್ವೆ ಜ.20ರಂದು ಮನೆಯಿಂದ ನಾಪತ್ತೆಯಾಗಿದ್ದ ಇವರಿಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ನಿನ್ನೆ (ಸೋಮವಾರ) ಪತ್ತೆಯಾಗಿತ್ತು. ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಘಟನಾ ಸ್ಥಳಕ್ಕೆ ಪೊಲೀಸರೊಂದಿಗೆ ತೆರಳಿದ್ದ ವಿಕ್ರಮನ ತಂದೆ ಗಣೇಶ ಶಂಕರ ಮಾವಿನಕುರ್ವೆ ಅವರು ಇದು ತನ್ನ ಮಗನ ಶವ ಎಂದು ಗುರುತಿಸಿದ್ದರು.

ವಿಕ್ರಮ ಮತ್ತು ಮೇಘನಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Last Updated : Jan 26, 2021, 11:51 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.