ETV Bharat / state

2 ಕೋಟಿ ವೆಚ್ಚದಲ್ಲಿ ಸಿದ್ಧಿ ವಿನಾಯಕ ದೇವಾಲಯ ಕಟ್ಟಿ ಹಿಂದೂಗಳಿಗೆ ಅರ್ಪಿಸಿದ ಕ್ರಿಶ್ಚಿಯನ್.. ಧರ್ಮ ಸಮನ್ವಯವೇ ಧ್ಯೇಯ..

author img

By

Published : Jul 18, 2021, 7:52 PM IST

Updated : Jul 18, 2021, 10:42 PM IST

siddhivinayak-temple-become-a-witness-to-communal-harmony-in-udupi
ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಸಿದ್ಧಿವಿನಾಯಕ ದೇವಾಲಯ

ಬದುಕಿನಲ್ಲಿ ಅಭಿವೃದ್ಧಿ ಸಾಧಿಸಿದರೆ ವಿನಾಯಕ ದೇವಸ್ಥಾನ ಕಟ್ಟಿ ಕೊಡುತ್ತೇನೆ ಎಂದು ಹಿಂದೊಮ್ಮೆ ಹರಕೆ ಹೊತ್ತಿದ್ದರಂತೆ. ಅವರ ಎಲ್ಲಾ ಬಯಕೆಗಳು ಈಡೇರಿದ ಹಿನ್ನೆಲೆ ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಕಳೆದೆರಡು ದಿನಗಳಿಂದ ಈ ದೇವಾಲಯದಲ್ಲಿ ಪಲಿಮಾರು ಮಠಾಧೀಶರ ನೇತೃತ್ವದಲ್ಲಿ ಧಾರ್ಮಿಕ ಕ್ರಿಯೆಗಳು ನಡೆಯುತ್ತಿವೆ..

ಉಡುಪಿ : ಕರಾವಳಿಯಲ್ಲಿ ಕೋಮು ಸೌಹಾರ್ದ ಸಾರುವ ಹತ್ತಾರು ನಿದರ್ಶನಗಳು ನಮ್ಮ ಮುಂದಿವೆ. ಈ ಸಾಲಿಗೆ ಜಿಲ್ಲೆಯ ಶಿರ್ವ ಮುಖ್ಯರಸ್ತೆಯ ಮಟ್ಟಾರು ಅಟ್ಟಿಂಜ ಕ್ರಾಸ್​​​​ನ ಶ್ರೀ ಸಿದ್ಧಿವಿನಾಯಕ ದೇವಾಲಯ ಸೇರಿದೆ. ಇದರ ವಿಶೇಷ ಎಂದರೆ ಒಂದು ಬದಿಯಲ್ಲಿ ಮುಸಲ್ಮಾನರ ಪವಿತ್ರ ಮಸೀದಿ ಕೂಡ ಇದ್ದು, ಅದರ ಎದುರಿಗೆ ದೇವಾಲಯವೂ ತಲೆ ಎತ್ತಿದೆ.

ಇಷ್ಟೇ ಅಲ್ಲ, ಇಂದು ಲೋಕಾರ್ಪಣೆಗೊಂಡ ಈ ಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಹಿಂದೂಗಳಿಗೆ ಕೊಡುಗೆಯಾಗಿ ನೀಡಿರುವುದು ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ಎಂಬುವುದು ಇನ್ನೊಂದು ವಿಶೇಷ. 77 ವರ್ಷದ ಗೇಬ್ರಿಯಲ್ ಫೇಬಿಯನ್ ನಜರತ್ ಅವರ ತಂದೆಯಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಭವ್ಯ ದೇವಸ್ಥಾನ ನಿರ್ಮಿಸಿ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.

2 ಕೋಟಿ ವೆಚ್ಚದಲ್ಲಿ ಸಿದ್ಧಿ ವಿನಾಯಕ ದೇವಾಲಯ ಕಟ್ಟಿ ಹಿಂದೂಗಳಿಗೆ ಅರ್ಪಿಸಿದ ಕ್ರಿಶ್ಚಿಯನ್

ಹಾಗಂತಾ, ಇದು ಸಣ್ಣ ಪ್ರಾರ್ಥನಾಲಯ ಎಂದುಕೊಳ್ಳಬೇಡಿ, ಗೇಬ್ರಿಯಲ್ ಅವರು ಈ ದೇವಸ್ಥಾನಕ್ಕೆ ಬರೋಬ್ಬರಿ 2 ಕೋಟಿ ರೂ. ತಮ್ಮ ಸ್ವಂತ ಹಣ ಖರ್ಚು ಮಾಡಿದ್ದಾರೆ. ಗೇಬ್ರಿಯಲ್ ಫೇಬಿಯನ್ ನಜರತ್ ಅವರು ತಮ್ಮ ತಂದೆ-ತಾಯಿಯ ಸ್ಮರಣಾರ್ಥವಾಗಿ ಈ ದೇವಸ್ಥಾನ ಕಟ್ಟಿಸಿದ್ದಾರೆ. ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಊರಿಗೆ ಬಂದು ಇಲ್ಲೇ ನೆಲೆಸಿದ್ದಾರೆ.

ಬದುಕಿನಲ್ಲಿ ಅಭಿವೃದ್ಧಿ ಸಾಧಿಸಿದರೆ ವಿನಾಯಕ ದೇವಸ್ಥಾನ ಕಟ್ಟಿ ಕೊಡುತ್ತೇನೆ ಎಂದು ಹಿಂದೊಮ್ಮೆ ಹರಕೆ ಹೊತ್ತಿದ್ದರಂತೆ. ಅವರ ಎಲ್ಲಾ ಬಯಕೆಗಳು ಈಡೇರಿದ ಹಿನ್ನೆಲೆ ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

ಕಳೆದೆರಡು ದಿನಗಳಿಂದ ಈ ದೇವಾಲಯದಲ್ಲಿ ಪಲಿಮಾರು ಮಠಾಧೀಶರ ನೇತೃತ್ವದಲ್ಲಿ ಧಾರ್ಮಿಕ ಕ್ರಿಯೆಗಳು ನಡೆಯುತ್ತಿವೆ. ಸಿದ್ಧಿವಿನಾಯಕನ ಪ್ರತಿಷ್ಠಾಪನೆ, ಬ್ರಹ್ಮಕಲಶ, ತ್ರಿಕಾಲ ಪೂಜೆ,ಸಂಕಷ್ಟ ಚೌತಿ ಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳಿಗೆ ಗೇಬ್ರಿಯಲ್ ಅವರು ಹಿಂದೂಗಳಂತೆಯೇ ಖುದ್ದು ಸಾಕ್ಷಿಯಾಗಿದ್ದಾರೆ.

ಓದಿ: ಮೊದಲ ಪ್ರಯೋಗದಲ್ಲೇ ಯಶಸ್ಸು: ಬಂಟ್ವಾಳದ ಕೊಕ್ಕೊ ಹೋಳಿಗೆಗೆ ಈಗ ಭಾರಿ ಡಿಮ್ಯಾಂಡ್

Last Updated :Jul 18, 2021, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.