ETV Bharat / state

ಉಡುಪಿ: ವಿವಾಹ ಕಾರ್ಯಕ್ರಮದಲ್ಲಿ ಹುಲಿ ಕುಣಿತ, 7 ಮಂದಿ ಮೇಲೆ ಎಫ್​ಐಆರ್

author img

By

Published : May 22, 2021, 10:39 PM IST

ಲಾಕ್​ಡೌನ್​ ಸಮಯದಲ್ಲಿ ಕೋವಿಡ್​​ ನಿಯಮ ಉಲ್ಲಂಘನೆ ಮಾಡಿ ಮೆಹಂದಿ ಕಾರ್ಯಕ್ರಮದಲ್ಲಿ ಭರ್ಜರಿ ಹುಲಿ ಕುಣಿತ ಮಾಡಿದ 7 ಮಂದಿಯ ಮೇಲೆ ಪ್ರಕರಣ ದಾಖಲಾದ ಘಟನೆ ಜಿಲ್ಲೆಯ ಕುಂದಾಪುರದ ಕುರ್ಕುಂಜೆ ಗ್ರಾಮದಲ್ಲಿ ನಡೆದಿದೆ.

corona-rules-violation-case-registered-on-seven-people-in-udupi
ಕರ್ಕುಂಜೆ ಮೆಹಂದಿ ಕಾರ್ಯಕ್ರಮ

ಉಡುಪಿ: ಕೋವಿಡ್​ ನಿಯಮ ಉಲ್ಲಂಘನೆ ಮಾಡಿ ವಿವಾಹದ ಮೆಹಂದಿ ಕಾರ್ಯಕ್ರಮದಲ್ಲಿ ಭರ್ಜರಿ ಹುಲಿ ಕುಣಿತ ಮಾಡಿದ 7 ಮಂದಿಯ ಮೇಲೆ ಪ್ರಕರಣ ದಾಖಲಾದ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಮೆಹಂದಿಯಲ್ಲಿ ಭರ್ಜರಿ ಹುಲಿ ಕುಣಿತ ಏಳು ಜನರ ವಿರುದ್ಧ ಪ್ರಕರಣ ದಾಖಲು

ಜಿಲ್ಲೆಯ ಕುಂದಾಪುರದ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಭುಜಂಗ ಶೆಟ್ಟಿ ಎಂಬುವವರ ಮನೆಯಲ್ಲಿ ನಿನ್ನೆ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಮಾಸ್ಕ್ ಬಳಸದೇ, ಸಾಮಾಜಿಕ ಅಂತರ ಇಲ್ಲದೆ ಕುಣಿದಿದ್ದ ಯುವಕರು ಕೋವಿಡ್​​ ನಿಯಮ ಉಲ್ಲಂಘನೆ ಮಾಡಿದ್ದರು. ಡ್ಯಾನ್ಸ್‌ ‌ಮಾಡಿದ ಏಳು ಮಂದಿಯ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.