ETV Bharat / state

ತುಮುಲ್​ನಲ್ಲಿದೆ ಉದ್ಯೋಗಾವಕಾಶ! 219 ಹುದ್ದೆಗಳಿಗೆ ಅರ್ಜಿ ಆಹ್ವಾನ- ಕಂಪ್ಲೀಟ್‌ ಡಿಟೇಲ್ಸ್ ಇಲ್ಲಿದೆ

author img

By

Published : Mar 20, 2023, 10:21 AM IST

ತುಮುಲ್​ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 219 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ.

Tumakuru Cooperative Milk Producers Societies Union Limited invited applications For various post
Tumakuru Cooperative Milk Producers Societies Union Limited invited applications For various post

ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ತುಮುಲ್​)ದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 219 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು, ಆಡಳಿತಾಧಿಕಾರಿ, ಉಗ್ರಾಣಾಧಿಕಾರಿ, ಸಿಸ್ಟಮ್ಸ್​ ಅಧಿಕಾರಿ, ಲೆಕ್ಕಾಧಿಕಾರಿ, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ, ವಿಸ್ತರಣಾಧಿಕಾರಿ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-2, ಆಡಳಿತ ಸಹಾಯಕ ದರ್ಜೆ-2, ಕಿರಿಯ ಸಿಸ್ಟಂ ಆಪರೇಟರ್​, ಚಾಲಕರು.

ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ, ಬಿ.ಕಾಂ, ಬಿಬಿಎ, ಬಿಇ, ಬಿಟೆಕ್​, ಎಂಬಿಎ ಸೇರಿದಂತೆ ಹಲವು ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ತಮ್ಮ ವಿದ್ಯಾರ್ಹತೆಗೆ ಸೂಕ್ತವಾದ ಹುದ್ದೆಗೆ ಅರ್ಜಿ ಸಲ್ಲಿಸಿ.

ವಯೋಮಿತಿ: ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿದ್ದು, ಗರಿಷ್ಠ 35 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ, ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಿದ್ದು, ಉಳಿದ ಅಭ್ಯರ್ಥಿಗಳಿಗೆ 1,000 ರೂ ಅರ್ಜಿ ಶುಲ್ಕವಿದೆ.

ಆಧಿಸೂಚನೆ
ಅಧಿಸೂಚನೆ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ.

ವೇತನ: ವಿವಿಧ ಶ್ರೇಣಿಗೆ ಅನುಸಾರವಾಗಿ 21,400 ರಿಂದ 97,100 ರೂವರೆಗೆ ವೇತನ.

ಅರ್ಜಿ ಸಲ್ಲಿಕೆ ದಿನಾಂಕ: ಮಾರ್ಚ್​ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಏಪ್ರಿಲ್​ 17 ಕಡೆಯ ದಿನಾಂಕ. ಅರ್ಜಿ ಶುಲ್ಕ ಪಾವತಿಗೂ ಏಪ್ರಿಲ್​ 17 ಕಡೆಯ ದಿನ.

ವಿಶೇಷ ಸೂಚನೆ: ಅರ್ಜಿ ಆಹ್ವಾನಿಸಲಾದ ಹುದ್ದೆಗಳಲ್ಲಿ ಕೋ ಆರ್ಡಿನೇಟರ್​ (ಪ್ರೊಟೆಕ್ಷನ್​), ಕಿರಿಯ ತಾಂತ್ರಿಕ ಮತ್ತು ಚಾಲಕರ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್​ ಜ್ಞಾನ ಹೊಂದಿರಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡು, ಸರಿಯಾದ ನಿಗದಿತ ದಾಖಲೆಗಳನ್ನು ಭರ್ತಿ ಮಾಡಬೇಕು. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ, ವರ್ಗೀಕರಣ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ tumul.coop ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ: 242 ಲೆಕ್ಕ ಸಹಾಯಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.