ETV Bharat / state

'ಕೂ ಆ್ಯಪ್' ಪ್ರವೇಶಿಸಿದ ತುಮಕೂರಿನ ಸಿದ್ದಗಂಗಾ ಮಠ

author img

By

Published : Sep 25, 2021, 11:47 AM IST

ಹೆಸರಾಂತ ತ್ರಿವಿಧ ದಾಸೋಹಿ ಕಾರ್ಯಕ್ಷೇತ್ರವಾದ ಸಿದ್ದಗಂಗಾ ಮಠ 'ಕೂ ಆ್ಯಪ್ ' (Koo Application) ಮೂಲಕ ಮಠದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳನ್ನು ಭಕ್ತರು ಹಾಗೂ ಸಾರ್ವಜನಿಕರಿಗೆ ತಲುಪಿಸಲಿದೆ.

siddaganga matt joins koo application
ಸಿದ್ದಗಂಗಾ ಮಠ

ತುಮಕೂರು: ಗಣನೀಯ ಸಾಧನೆ ಮಾಡಿರುವ ಹೆಸರಾಂತ ಸಂಸ್ಥೆಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳಿಗೆ ಅಪ್ಲಿಕೇಶನ್ ಸೇರ್ಪಡೆಗೆ ಮುಕ್ತ ಅವಕಾಶ ನೀಡಿರುವ 'ಕೂ' (Koo Application), ಪ್ರಸ್ತುತ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಬಹುತೇಕ ಮಠದ ಎಲ್ಲ ಕಾರ್ಯಕ್ರಮಗಳನ್ನು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸಲಿದೆ.

ಸಿದ್ಧಗಂಗಾ ಮಠದ ಪ್ರಥಮ ಕೂ ಅನ್ನು ಮಾಡಿರುವ ಅಪ್ಲಿಕೇಶನ್, 10000ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣ ವಸತಿ ಆಹಾರವನ್ನು ಯಾವುದೇ ತಾರತಮ್ಯವಿಲ್ಲದೇ ಶಾಲೆಗಳನ್ನು ನಡೆಸುತ್ತಿದೆ ಮಠವು ಅಂದ ಶಾಲೆಗಳನ್ನು ನಡೆಸುತ್ತಿದ್ದು, ನೂರಕ್ಕೂ ಹೆಚ್ಚು ಒಂದು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುತ್ತಿದೆ ಎಂದು ತಿಳಿಸಿದೆ. ಇದು ಮಠದ ಕುರಿತು ಮೊದಲ 'ಕೂ' ಆಗಿದೆ.

'ಕೂ' ಮೂಲಕ ದೇಶಾದ್ಯಂತ ನಾನಾ ಭಾಗದ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ ಒಬ್ಬರನ್ನೊಬ್ಬರು ಸಂಪರ್ಕಿಸಲು ಸಾಮಾಜಿಕ ಜಾಲತಾಣದ ಒಂದು ಪ್ರಮುಖ ವ್ಯವಸ್ಥೆಯಾಗಿದೆ 2000ರಲ್ಲಿ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾದ ಕೂ. ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಇದೀಗ ಕೂ ವೇದಿಕೆ ಮೂಲಕ ಶ್ರೀ ಸಿದ್ದಗಂಗಾ ಮಠದ ಭಕ್ತರು ದಿನನಿತ್ಯದ ಮಠದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ದೇಶಾದ್ಯಂತ ಇರುವ ಮಠದ ಭಕ್ತರು ತಮ್ಮದೇ ಮಾತೃಭಾಷೆಯಲ್ಲಿ 'ಕೂ' ಮೂಲಕ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ:UPSC Exam: ಆಲಮಟ್ಟಿಯ ನೇತ್ರಾ ಮೇಟಿಗೆ 326ನೇ ರ್‍ಯಾಂಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.