ETV Bharat / state

ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿದ ಐಟಿ ಅಧಿಕಾರಿಗಳ ಶೋಧಕಾರ್ಯ

author img

By

Published : Oct 11, 2019, 6:17 PM IST

Updated : Oct 11, 2019, 7:36 PM IST

ಕಾಲೇಜಿನಿಂದ ವಾಪಸ್​ ತೆರಳಿದ ಐಟಿ ಅಧಿಕಾರಿಗಳು

ನಿನ್ನೆ ಬೆಳಗ್ಗೆಯಿಂದ ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಐಟಿ ಅಧಿಕಾರಿಗಳು, ಇಂದು ಮಧ್ಯಾಹ್ನ ಕಾಲೇಜಿನಿಂದ ವಾಪಸ್​ ತೆರಳಿದ್ದಾರೆ.ಆದ್ರೆ ಮತ್ತೊಂದು ತಂಡ ತಮಗೆ ಪೂರಕವಾಗಿ ಸಿಕ್ಕಂತಹ ಕಡತಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆಸಿದೆ.

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಒಡೆತನದ ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿನ್ನೆ ಬೆಳಗ್ಗೆಯಿಂದ ಐಟಿ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು.

ಇಂದು ಮಧ್ಯಾಹ್ನ ಐಟಿ ಇಲಾಖೆ ಅಧಿಕಾರಿಗಳ ಒಂದು ತಂಡ ಕಾಲೇಜಿನಿಂದ ವಾಪಸ್ ತೆರಳಿದೆ. ಮೂಲಗಳ ಪ್ರಕಾರ, ಮೂರು ತಂಡಗಳಲ್ಲಿ ಆಗಮಿಸಿದ್ದ ಐಟಿ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಲೇಜಿನಿಂದ ವಾಪಸ್​ ತೆರಳಿದ ಐಟಿ ಅಧಿಕಾರಿಗಳು

ಈ ನಡುವೆ ಕಾಲೇಜಿನ ಪ್ರಾಂಶುಪಾಲರು ಮತ್ತು ಅಕೌಂಟ್ಸ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಸಾಕಷ್ಟು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಮತ್ತೊಂದು ತಂಡ ಸಂಜೆಯಾದರೂ ತನಿಖೆ ಮುಂದುವರಿಸಿದೆ. ಒಟ್ಟು ಆರು ಇನ್ನೋವಾ ಕಾರುಗಳಲ್ಲಿ ಬಂದಿರುವಂತಹ 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ತಮಗೆ ಪೂರಕವಾಗಿ ಸಿಕ್ಕಂತಹ ಕಡತಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆಸಿದ್ದಾರೆ. ಮೆಡಿಕಲ್ ಕಾಲೇಜಿನ ಎರಡು ಕಟ್ಟಡಗಳಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.

Intro:Body:ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಿಂದ ಹೊರಟ ಐಟಿ ಇಲಾಖೆ ಅಧಿಕಾರಿಗಳು

ತುಮಕೂರು
ಗುರುವಾರ ಬೆಳಗ್ಗೆಯಿಂದಲೂ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ ಒಡೆತನದ ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲೆ ಗಳ ಪರಿಶೀಲನೆ ನಡೆಸುತ್ತಿದ್ದ ಐಟಿ ಇಲಾಖೆ ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ ಕಾಲೇಜಿನಿಂದ ವಾಪಸ್ ತೆರಳಿದೆ. ಮೂಲಗಳ ಪ್ರಕಾರ ಮೂರು ತಂಡಗಳಲ್ಲಿ ಆಗಮಿಸಿದ್ದ ಐಟಿ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿಸಿದೆ.
ಈ ನಡುವೆ ಕಾಲೇಜಿನ ಪ್ರಾಂಶುಪಾಲರು ಮತ್ತು ಅಕೌಂಟ್ಸ್ ಡಿಪಾರ್ಟ್ಮೆಂಟ್ ಸಿಬ್ಬಂದಿಗಳನ್ನು ಸಾಕಷ್ಟು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದೆ.Conclusion:
Last Updated :Oct 11, 2019, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.