ETV Bharat / state

ಅನೈತಿಕ ಸಂಬಂಧ ಶಂಕೆ: ಪತ್ನಿ, ಮಗಳ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

author img

By

Published : Apr 7, 2022, 8:37 PM IST

ಪತ್ನಿ ಹಾಗೂ ಮಗಳ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

accused-sentenced-to-life-imprisonment-in-double-murder-case
ಅನೈತಿಕ ಸಂಬಂಧ ಶಂಕೆ: ಪತ್ನಿ, ಮಗಳ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

ತುಮಕೂರು: ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ರಕ್ಷಣೆಗೆ ಮಧ್ಯೆ ಬಂದ ಮಗಳನ್ನೂ ಕೊಲೆ ಮಾಡಿದ್ದ ಆರೋಪಿಗೆ ಮಧುಗಿರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಂಜುನಾಥ್ ಎಂಬಾತನೆ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.

2018ರ ಏಪ್ರಿಲ್ 9ರಂದು ಪಾವಗಡ ತಾಲೂಕಿನ ಗೌಡೇಟಿ ಗ್ರಾಮದಲ್ಲಿ ತಾಯಿ, ಮಗಳ ಕೊಲೆ ನಡೆದಿತ್ತು. ಮಂಜುನಾಥ್ ಎಂಬಾತ ಪತ್ನಿಗೆ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಈ ನಡುವೆ ಜಗಳ ಬಿಡಿಸಲು ಹೋದ ಮಗಳಿಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ತಾಯಿ ರಾಮಾಂಜಿನಮ್ಮ, ಮಗಳು ನಾಗಮಣಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಸಂಬಂಧ ಮಧುಗಿರಿ ಸೆಷನ್ಸ್ ನ್ಯಾಯಾಲಯವು ಹಂತಕನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಮದುವೆ ಭರವಸೆ ನೀಡಿ 200 ಹುಡುಗಿಯರಿಗೆ ವಂಚನೆ, ಲಕ್ಷಾಂತರ ಹಣ ದೋಚಿದ 'ತರುಣ' ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.