ETV Bharat / bharat

ಮದುವೆ ಭರವಸೆ ನೀಡಿ 200 ಹುಡುಗಿಯರಿಗೆ ವಂಚನೆ, ಲಕ್ಷಾಂತರ ಹಣ ದೋಚಿದ 'ತರುಣ' ಅರೆಸ್ಟ್‌

author img

By

Published : Apr 7, 2022, 3:06 PM IST

ಮದುವೆಯಾಗುವುದಾಗಿ ನಂಬಿಸಿ, ವಿವಿಧ ರಾಜ್ಯಗಳ 200ಕ್ಕೂ ಅಧಿಕ ಯುವತಿಯರಿಗೆ ವ್ಯಕ್ತಿಯೋರ್ವ ಮೋಸ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Man held for cheating 200 girls
Man held for cheating 200 girls

ಬಸ್ತಿ(ಉತ್ತರ ಪ್ರದೇಶ): ವಿವಾಹವಾಗುವುದಾಗಿ ನಂಬಿಸಿ, 200ಕ್ಕೂ ಅಧಿಕ ಯುವತಿಯರಿಗೆ ಮೋಸ ಮಾಡಿರುವ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್​ನಿವಾಸಿ ತರುಣ್​ ಕುಮಾರ್​ ಎಂಬಾತನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಈತ ಆನ್​ಲೈನ್​ ಮ್ಯಾಟ್ರಿಮೋನಿಯಲ್​ ಸೈಟ್​ ಮೂಲಕ ವಿವಿಧ ರಾಜ್ಯಗಳ ಹುಡುಗಿಯರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸುತ್ತಿದ್ದ.

ಹುಡುಗಿಯರಿಗೆ ಮದುವೆಯ ಸುಳ್ಳು ಭರವಸೆ ಕೊಟ್ಟು ಅವರಿಂದಲೇ ಲಕ್ಷಾಂತರ ರೂಪಾಯಿ ದೋಚಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಬಸ್ತಿ ಜಿಲ್ಲಾ ಪೊಲೀಸರು ಮಾಹಿತಿ ನೀಡಿದರು. ತರುಣ್ ಕುಮಾರ್​, ಆನ್​ಲೈನ್ ಆ್ಯಪ್​ನಲ್ಲಿ ತನ್ನ ಹೆಸರು ನೋಂದಣಿ ಮಾಡಿಕೊಂಡಿದ್ದು, ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ಆಮಿಷ ಒಡ್ಡುತ್ತಿದ್ದನಂತೆ.

ಆ ಬಳಿಕ ತಮ್ಮಿಬ್ಬರ ಜಾತಕ ಹೊಂದಾಣಿಕೆಯಾಗುವುದರ ಬಗ್ಗೆ ಜ್ಯೋತಿಷಿಗಳ ಬಳಿ ಕೇಳಬೇಕೆಂದು ಹಣ ಕೇಳುತ್ತಿದ್ದ. ಯುವತಿಯರು ಹಣ ವಾಪಸ್ ನೀಡುವಂತೆ ಕೇಳಿದಾಗ, ಮ್ಯಾಟ್ರಿಮೋನಿಯಲ್‌ ಸೈಟ್​ನಲ್ಲಿ ತಾನು ಮರಣ ಹೊಂದಿರುವುದಾಗಿ ಘೋಷಿಸುವ ಡಿಪಿ (ಡಿಸ್ಪೇ ಫೋಟೋ) ಹಾಕಿಕೊಳ್ಳುತ್ತಿದ್ದನಂತೆ. ಇದನ್ನು ಸುಲಭವಾಗಿ ನಂಬುತ್ತಿದ್ದ ಹುಡುಗಿಯರು ಸುಮ್ಮನಾಗಿ ಬಿಡುತ್ತಿದ್ದರು.

ಇದನ್ನೂ ಓದಿ: ಪ್ರೀತಿ ಮಾಯೆ ಹುಷಾರು.. ಪೊಲೀಸ್​ ಕನಸು ಹೊತ್ತಿದ್ದ ಯುವಕ ಮಾಫಿಯಾ ಲೋಕಕ್ಕೆ ಡಾನ್​ ಆಗಿದ್ದು ಹೀಗೆ!

ಈ ಬಗ್ಗೆ ಬಸ್ತಿಯಲ್ಲಿ ವಾಸವಾಗಿದ್ದ ಹುಡುಗಿಯೋರ್ವಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದಾಗ ವಿಷಯ ಬಯಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದಾಗ, ವಂಚಕ ತರುಣ್​ ನೂರಾರು ಯುವತಿಯರಿಗೆ ಮೋಸ ಮಾಡಿರುವ ವಿಷಯ ಹೊರಬಿದ್ದಿದೆ. ಇದರ ಬೆನ್ನಲ್ಲೇ ಆತನ ಬಂಧನ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.