ETV Bharat / state

ನರೇಗಾ - ರಾಜ್ಯದಲ್ಲಿ 9.30 ಲಕ್ಷ ಜನರಿಗೆ ಕೂಲಿ ಕೆಲಸ: ಸಚಿವ ಈಶ್ವರಪ್ಪ

author img

By

Published : May 29, 2020, 5:39 PM IST

Updated : May 29, 2020, 7:08 PM IST

ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ದಿನಗೂಲಿಯನ್ನು 249 ರೂ. ನಿಂದ 275 ರೂ. ಗೆ ಹೆಚ್ಚಿಸಿದೆ. ಕೆಲಸ ಆರಂಭವಾಗುತ್ತಿದ್ದಂತೆ ನೇರವಾಗಿ ಬ್ಯಾಂಕ್ ಅಕೌಂಟಿಗೆ ಕೂಲಿ ಹಣ ಜಮೆಯಾಗುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Minister Ishwarappa
ನರೇಗಾ ಯೋಜನೆಯಡಿ ರಾಜ್ಯದಲ್ಲಿ 9,30,000 ಜನರಿಂದ ಕೂಲಿ ಕೆಲಸ: ಸಚಿವ ಈಶ್ವರಪ್ಪ

ತುಮಕೂರು: ರಾಜ್ಯದಲ್ಲಿ 9,30,000(9.30 ಲಕ್ಷ) ಜನರು ಒಂದು ದಿನ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ತುಮಕೂರಿನಲ್ಲಿ ಅಂತರ್ಜಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ನರೇಗಾ ಮೂಲಕ ಕೂಲಿ ಕೆಲಸ ಮಾಡುತ್ತೇವೆ ಎಂದು ನೇರವಾಗಿ ಬಂದರೆ ಜಾಬ್​ಕಾರ್ಡ್ ನೀಡಿ ಕೆಲಸ ಕೊಡುತ್ತಿದ್ದೇವೆ. ಸರ್ಕಾರಿ ನೌಕರರಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ, ಆದಾಯ ತೆರಿಗೆದಾರರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವುದಿಲ್ಲ. ಇನ್ನು ಯಾರೇ ಬಂದರೂ ಕೆಲಸ ಎಂದರೆ ಧಾರಾಳವಾಗಿ ಕೊಡುತ್ತಿದ್ದೇವೆ ಬದುಕುವುದರಿಂದ ಹಸನಾಗಿದೆ ಎಂದರು.

ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ದಿನಗೂಲಿಯನ್ನು 249 ರೂ. ನಿಂದ 275 ರೂ.ಗೆ ಹೆಚ್ಚಿಸಿದೆ. ಕೆಲಸ ಆರಂಭವಾಗುತ್ತಿದ್ದಂತೆ ನೇರವಾಗಿ ಬ್ಯಾಂಕ್ ಅಕೌಂಟಿಗೆ ಕೂಲಿ ಹಣ ಜಮೆಯಾಗುತ್ತದೆ. ಹೀಗಾಗಿ ಎಲ್ಲ ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಕೂಲಿ ಹಣ ನೀಡಲಾಗುತ್ತಿದೆ ಎಂದರು.

ಭೂಮಿ ಮೇಲೆ ಆಕ್ರಮಣ ಮಾಡಿ ಹಾಳು ಮಾಡಿದ್ದೇವೆ ಅದರ ಋಣ ತೀರಿಸಲು ಅಂತರ್ಜಲ ಯೋಜನೆ ಯಶಸ್ವಿಯಾಗಿ ಜಾರಿಗೆ ತರುತ್ತಿದ್ದೇವೆ. ಸಣ್ಣ ನೀರಾವರಿ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಯೋಜನೆ ಅನುಷ್ಠಾನಗೊಳಿಸುತ್ತಿವೆ ಎಂದು ತಿಳಿಸಿದರು.

Last Updated : May 29, 2020, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.