ETV Bharat / state

ಬಿಜೆಪಿಗೆ ಯುವ ಮೋರ್ಚಾ ಕಾರ್ಯಕರ್ತರ ಕೊಡುಗೆ ಏನು?, ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ: ಈಶ್ವರಪ್ಪ ಆಕ್ರೋಶ

author img

By

Published : Jul 29, 2022, 4:54 PM IST

ಶ್ಯಾಮ್​ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಅವರು ಸತ್ತರು, ಆದರೆ, ಅವರ ಸಿದ್ದಾಂತ ಸತ್ತಿದ್ಯಾ?. ರಾಜೀನಾಮೆ ಕೊಟ್ಟರೆ ಹಿಂದುತ್ವ ಮತ್ತು ನಮ್ಮ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ಎಂದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ ಎಂದು ಕೆ.ಎಸ್​.ಈಶ್ವರಪ್ಪ ಹೇಳಿದರು.

what-is-the-contribution-of-yuva-morcha-workers-to-bjp-asks-ks-eshwarappa
ಬಿಜೆಪಿಗೆ ಯುವ ಮೋರ್ಚಾ ಕಾರ್ಯಕರ್ತರ ಕೊಡುಗೆ ಏನು?, ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ: ಈಶ್ವರಪ್ಪ ಆಕ್ರೋಶ

ಶಿವಮೊಗ್ಗ: ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧಬಿಜೆಪಿ ಯುವ ಮೋರ್ಚಾದ ಯುವಕರ ಆಕ್ರೋಶ ಯಾರ ಮೇಲೆ?. ನನ್ನ ಸಿದ್ಧಾಂತದ ಮೇಲೆ ಬೇರೆಯವರು ಗೂಂಡಾಗಿರಿ ಮಾಡುತ್ತಿದ್ಧಾರೆ. ಹರ್ಷ, ಪ್ರವೀಣ್ ಮೃತರಾದ ತಕ್ಷಣ ಸಿದ್ಧಾಂತ ಮಣ್ಣಾಗಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿ ರಾಜೀನಾಮೆ ಕೊಡುತ್ತೇನೆ ಎನ್ನುವುದು ಹೇಡಿಗಳ ಲಕ್ಷಣ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಪಕ್ಷಕ್ಕೆ ದುಡಿದಿದ್ದೇವೆ. ನಮ್ಮಕ್ಕಿಂತ ಮೊದಲು ಅನೇಕರು ತ್ಯಾಗ ಮಾಡಿ ಕಟ್ಟಿರುವ ಪಕ್ಷ ಬಿಜೆಪಿ. ಪರಿಣಾಮ ನಾವೆಲ್ಲ ಸ್ಥಾನ - ಮಾನದಲ್ಲಿದ್ದೇವೆ. ನರೇಂದ್ರ ಮೋದಿ ಪ್ರಧಾನಿಯಾಗಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ. ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಆಗಲೇ ನಾನು ರಾಜೀನಾಮೆ ಕೊಡುತ್ತೇನೆ ಅಂತಾರೆ. ಯುವ ಮೋರ್ಚಾ ಯುವಕರು ಪಕ್ಷಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸಿದ್ಧಾಂತಕ್ಕೆ ರಾಜೀನಾಮೆ ಕೊಡುತ್ತೀರಾ: ಶ್ಯಾಮ್​ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಅವರು ಸತ್ತರು, ಆದರೆ ಅವರ ಸಿದ್ದಾಂತ ಸತ್ತಿದ್ಯಾ?. ಆಗ ಯಾರೂ ರಾಜೀನಾಮೆ ಕೊಟ್ಟು ಹಿಂದೆ ಸರಿಯಲಿಲ್ಲ. ರಾಜೀನಾಮೆ ಕೊಟ್ಟರೆ ಹಿಂದುತ್ವ ಮತ್ತು ನಮ್ಮ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ಎಂದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ. ನಾವು ಯಾವಾಗ ಸಾಯ್ತೀವೋ ಗೊತ್ತಿಲ್ಲ. ನೀವು ರಾಜೀನಾಮೆ ಯಾರಿಗೆ ಕೊಡುತ್ತಿದ್ದೀರಾ?. ಸಿದ್ಧಾಂತಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಹರಿಹಾಯ್ದರು.

ಬಿಜೆಪಿಗೆ ಯುವ ಮೋರ್ಚಾ ಕಾರ್ಯಕರ್ತರ ಕೊಡುಗೆ ಏನು?, ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ: ಈಶ್ವರಪ್ಪ ಆಕ್ರೋಶ

ಕೊಲೆ ಮಾಡುವ ಕಿಡಿಗೇಡಿಗಳಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡುತ್ತೇವೆ. ಬಗ್ಗದಿದ್ದರೆ ನರೇಂದ್ರ ಮೋದಿ, ಯೋಗಿ ಆದಿತ್ಯಾನಾಥ್ ನೀಡುವ ನಿರ್ದೇಶನ ಪಾಲನೆ ಮಾಡುತ್ತೇವೆ. ರಾಜೀನಾಮೆ ಕೊಡುವುದು ಹಿಂದೂ ಸಂಘಟನೆಗೆ ಮಾಡುವ ಅವಮಾನ, ರಾಜೀನಾಮೆ ಉತ್ತರವಲ್ಲ. ರಾಜೀನಾಮೆ ಕೊಟ್ಟಿದ್ದನ್ನು ಒಪ್ಪಿಕೊಂಡರೆ ಬಿಜೆಪಿಗೆ ಹೊಸ ಕಾರ್ಯಕರ್ತ ಬರ್ತಾನೆ, ನೀನು ಎಲ್ಲಿಗೆ ಹೋಗ್ತೀಯಾ?. ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಇದೆ. ಹಿರಿಯರಾದ ನಾವು ಬೇಸರ ವ್ಯಕ್ತಪಡಿಸದೇ ಸಮಾಧಾನ ಮಾಡ್ತೀವಿ. ಆಕ್ರೋಶದಿಂದ ನಿರ್ಧಾರ ತೆಗದುಕೊಂಡವರು ಬಿಜೆಪಿ ಬಿಡಲ್ಲ ಎಂದೂ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಆ ಹಂತಕ್ಕೆ ರಾಜ್ಯ ಹೋಗುವುದು ಬೇಡ: ಪ್ರವೀಣ್ ನೆಟ್ಟಾರು ಹಂತಕರನ್ನ ಬಂಧಿಸುವವರೆಗೆ ಸುಮ್ಮನಿರೋದಿಲ್ಲ. ಸಮಾಜ ಈಗ ಜಾಗೃತಿಯಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಇದ್ದರೂ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಆಕ್ರೋಶ ನನಗೂ ಇದೆ. ಆದರೆ, ಕೊಲೆಗೆ ಕೊಲೆ ಮಾಡಬೇಕು ಎಂಬ ಉದ್ದೇಶ ನಮಗಿಲ್ಲ. ಮುಸ್ಲಿಂ ಕೊಲೆಗಡುಕರಿಗೆ ಏನು ಬುದ್ಧಿ ಕಲಿಸಬೇಕೋ, ಅದನ್ನ ಕಲಿಸುತ್ತೇವೆ. ಕಾನೂನು ತಿದ್ದುಪಡಿ ಸಂಬಂಧ ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಲಾಗಿದೆ ಎಂದರು.

ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೂ ಮಾತನಾಡಿ ರಾಜ್ಯಕ್ಕೆ ಕಠಿಣ ಕಾನೂನು ತರುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದ್ದೇವೆ. ಉತ್ತರ ಪ್ರದೇಶದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ, ನಮ್ಮಲ್ಯಾಕೆ ಇಲ್ಲ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಪರಿಸ್ಥಿತಿ ಬೇರೆ, ನಮ್ಮ ರಾಜ್ಯದ್ದೇ ಬೇರೆ. ಅಭಿವೃದ್ಧಿ ಮಾದರಿಯಿಂದ ಗುಜರಾತ್​ನಿಂದ ಅಳವಡಿಕೊಂಡಿದ್ದೇವೆ.

ಉತ್ತರ ಪ್ರದೇಶ ಮಾದರಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಆ ತರಹದ ಕಾನೂನು ತರುವ ಹಂತಕ್ಕೆ ರಾಜ್ಯ ಹೋಗುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಈಶ್ವರಪ್ಪ ಹೇಳಿದರು.

ಪ್ರವೀಣ್ ಹತ್ಯೆ ಮುಸ್ಲಿಂ ಗೂಂಡಾಗಳೇ ಮಾಡಿರೋದು ಸಾಬೀತಾಗಿದೆ. ನಂತರ ಆದ ಫಾಜಿಲ್ ಕೊಲೆ ಪ್ರತೀಕಾರಕ್ಕೆ ಎಂಬುದು ಖಾತ್ರಿ ಇಲ್ಲ. ಅದರ ಬಗ್ಗೆ ಈಗ ಪ್ರತಿಕ್ರಿಯಿಸಲಾಗದು. ಸಿಎಂ ಬೊಮ್ಮಾಯಿ ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ.‌ ದಯವಿಟ್ಟು ನರೇಂದ್ರ ಮೋದಿ ಜೊತೆ ಮಾತನಾಡಿ, ರಾಜ್ಯದಲ್ಲಿ ಕಠಿಣ ಕಾನೂನು ತರುವ ಬಗ್ಗೆ ನಿರ್ಧರಿಸಲಿ. ಮರ್ಯಾದೆ ಗೆಟ್ಟ ಗೂಂಡಾಗಳಿಗೆ ಕಠಿಣ ಕ್ರಮ ಏನು ಎಂದು ನಿಧಾನವಾಗಿ ಅರ್ಥವಾಗುತ್ತೆ ಎಂದರು.

ಇದೇ ವೇಳೆ, ತಾವು ಸಚಿವ ಸಂಪುಟ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗಲ್ಲ, ದೇವರಿಗೂ ಸಹ ಗೊತ್ತಿಲ್ಲ. ದೆಹಲಿಗೆ ಹೋಗಿ ಇಲ್ಲಿಯವರೆಗೆ ನನಗೆ ಮಂತ್ರಿ ಮಾಡಿ ಎಂದು ಕೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಎನ್​ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.