ETV Bharat / state

ಹತ್ಯೆಗೂ ಮುನ್ನ ಹರ್ಷನಿಗೆ ಹುಡುಗಿಯರಿಂದ ವಿಡಿಯೋ ಕಾಲ್: ಕೊಲೆ ರಹಸ್ಯ ಬಿಚ್ಚಿಟ್ಟ ಸ್ನೇಹಿತ

author img

By

Published : Feb 23, 2022, 3:15 PM IST

Updated : Feb 23, 2022, 3:37 PM IST

ಹರ್ಷ ಭಾರತಿ ಕಾಲೋನಿಯಿಂದ ಎನ್.ಟಿ. ರಸ್ತೆಗೆ ಬಂದಾಗ ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸ್ನೇಹಿತರು ಬೈಕ್ ತೆಗೆದುಕೊಂಡು ಬರುವಷ್ಟರಲ್ಲಿ ಹರ್ಷ ಕೊಲೆಯಾದ ವಿಷಯವನ್ನು ಆತನ ಸ್ನೇಹಿತರಿಗೆ ಫೋನ್​​ ಮಾಡಿ ತಿಳಿಸಿದ್ದರಂತೆ.

ಭಜರಂಗದಳದ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ
ಭಜರಂಗದಳದ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ

ಶಿವಮೊಗ್ಗ: ಫೆಬ್ರವರಿ 20 ರ ರಾತ್ರಿ 9 ಗಂಟೆಗೆ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಗೂ ಮುನ್ನ ಹರ್ಷನಿಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್ ಬಂದಿತ್ತು. ಸಹಾಯ ಕೇಳುವ ನೆಪದಲ್ಲಿ ಹುಡುಗಿಯರು ವಿಡಿಯೋ ಕಾಲ್ ಮಾಡಿದ್ದರು ಎನ್ನುವ ಸ್ಫೋಟಕ ಮಾಹಿತಿಯನ್ನು ಹರ್ಷನ ಜೊತೆ ಇದ್ದ ಸ್ನೇಹಿತ ಬಹಿರಂಗಪಡಿಸಿದ್ದಾನೆ.

ಕೊಲೆ ರಹಸ್ಯ ಬಿಚ್ಚಿಟ್ಟ ಹರ್ಷನ ಸ್ನೇಹಿತ

ಹರ್ಷ ಕೊಲೆಯಾದ ದಿನ ರಾತ್ರಿ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್​ ಅನ್ನು ಇಬ್ಬರು ಅಪರಿಚಿತ ಹುಡುಗಿಯರು ಮಾಡುತ್ತಿದ್ದರು. ಅಂದು ಸಹ ಹರ್ಷನಿಗೆ ಫೋನ್​​ ಮಾಡಿ ಮಾತನಾಡುತ್ತಾ ನಾನು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ ಮಾತನಾಡುತ್ತಿದ್ದರು.

ಹರ್ಷ ಮನೆಯಿಂದ ಹೊರಗೆ ಬಂದಾಗ ಆತನ ಜೊತೆ ನಾವು ಇಬ್ಬರು ಸ್ನೇಹಿತರು ಜೊತೆಗಿದ್ದೆವು. ನಾವು ಬೈಕ್ ತೆಗೆದುಕೊಂಡು ಊಟಕ್ಕೆ ಹೋಗೋಣ ಎಂದು ಹೇಳಿದಾಗ, ಇಲ್ಲ ನಡೆದು ಕೊಂಡು ಹೋಗೋಣ ಎಂದು ಹರ್ಷ ಹೇಳಿದ್ದನಂತೆ. ನಂತರ ಸ್ವಲ್ಪ ದೂರ ನಡೆದುಕೊಂಡು ಹೋದ ಮೇಲೆ ಹರ್ಷ ನಮಗೆ ಬೈಕ್ ತೆಗೆದುಕೊಂಡು ಬನ್ನಿ ಹೋಗಿ ಎಂದು ಆತನೇ ಕಳುಹಿಸಿದ್ದ.

ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ.. ಶಿವಮೊಗ್ಗದಲ್ಲಿ ಆರು ಆರೋಪಿಗಳ ಬಂಧನ, ಕರ್ಫ್ಯೂ ವಿಸ್ತರಣೆ

ಹರ್ಷ ಭಾರತಿ ಕಾಲೋನಿಯಿಂದ ಎನ್.ಟಿ. ರಸ್ತೆಗೆ ಬಂದಾಗ ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸ್ನೇಹಿತರು ಬೈಕ್ ತೆಗೆದುಕೊಂಡು ಬರುವಷ್ಟರಲ್ಲಿ ಹರ್ಷ ಕೊಲೆಯಾದ ವಿಷಯವನ್ನ ಆತನ ಸ್ನೇಹಿತರಿಗೆ, ಫೋನ್​​ ಮಾಡಿ ತಿಳಿಸಿದ್ದರಂತೆ. ಆದರೆ, ಇದುವರೆಗೂ ಹರ್ಷನ ಫೋನ್ ಪತ್ತೆಯಾಗಿಲ್ಲ. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ನಾವು ನೋಡಿದಾಗ ಖಾಸಿಫ್ ಬ್ಯಾಟ್ ಹಿಡಿದು ಕೊಂಡು ಬಂದ, ಕಳೆದ ಒಂದು ವಾರದಿಂದ ಅವರು ಹರ್ಷನನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎಂದು ಹರ್ಷನ ಸ್ನೇಹಿತ ಕೊಲೆ ಕಹಾನಿಯನ್ನು ಬಿಚ್ಚಿಟ್ಟಿದ್ದಾನೆ.

Last Updated : Feb 23, 2022, 3:37 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.