ETV Bharat / state

ಬೋಗಿಯಲ್ಲಿ ಮಗು ಮಲಗಿಸಲು ತಾಯಿ ಜೋಲಿ ಕಟ್ಟಿದ್ದನ್ನೇ ತಪ್ಪಾಗಿ ತಿಳಿದ ರೈಲ್ವೆ ಕಾರ್ಮಿಕರು.. ಶಿವಮೊಗ್ಗದಲ್ಲಿ ಮುಂದಾಗಿದ್ದೇನು!?

author img

By

Published : Jan 11, 2022, 7:41 PM IST

Updated : Jan 12, 2022, 11:58 AM IST

ಶಿವಮೊಗ್ಗದ ರೈಲು ನಿಲ್ದಾಣ
ಶಿವಮೊಗ್ಗದ ರೈಲು ನಿಲ್ದಾಣ

ನಿವೇದಿತಾ ಅವರು ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ನಿದ್ದೆಯಲ್ಲಿದ್ದ ಕಾರಣ ಶಿವಮೊಗ್ಗದಲ್ಲಿ ಇಳಿಯದೆ ತಾಳಗುಪ್ಪ ತಲುಪಿದ್ದಾರೆ. ರೈಲು‌ ನಿಂತಾಗ ತಾವು ತಾಳಗುಪ್ಪಕ್ಕೆ ಬಂದಿದ್ದು ತಿಳಿದಿದೆ. ಮಕ್ಕಳು ಬೋಗಿ ಬಿಟ್ಟು ಇಳಿಯದಂತೆ ಬೋಗಿಯ ಒಳಗೆ ಲಾಕ್ ಮಾಡಿ, ನಿವೇದಿತಾ ಶೌಚಾಲಯಕ್ಕೆ ಹೋಗಿದ್ದರು. ಇದನ್ನೇ ತಪ್ಪಾಗಿ ತಿಳಿದ ಇಲಾಖೆ ಕಾರ್ಮಿಕರು ಆಕೆ ಮೇಲೆ ಅನುಮಾನಗೊಂಡು ಹಲ್ಲೆ ಮಾಡಿದ್ದಾರೆ.

ಶಿವಮೊಗ್ಗ: ಮಗು ಮಲಗಿಸಲು ತಾಯಿ ಜೋಲಿ ಕಟ್ಟಿದ್ದನ್ನೇ ತಪ್ಪಾಗಿ ತಿಳಿದ ರೈಲ್ವೆ ಇಲಾಖೆ ಕಾರ್ಮಿಕರು ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಬರುವ ರೈಲಿನಲ್ಲಿ ಹಾಲಿ ಬೆಂಗಳೂರಿನ ಯಲಹಂಕದಲ್ಲಿ ವಾಸವಿರುವ ಹೊನ್ನಾಳಿ ತಾಲೂಕಿನ ಅರಕೆರೆಯ ಎ. ಕೆ ಕಾಲೋನಿಯ ನಿವೇದಿತಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ್ದಾರೆ.

ನಿವೇದಿತಾ ಅವರು ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ನಿದ್ದೆಯಲ್ಲಿದ್ದ ಕಾರಣ ಅಲ್ಲಿ ಇಳಿಯದೆ ತಾಳಗುಪ್ಪ ತಲುಪಿದ್ದಾರೆ. ರೈಲು‌ ನಿಂತಾಗ ತಾವು ತಾಳಗುಪ್ಪಕ್ಕೆ ಬಂದಿದ್ದು ತಿಳಿದಿದೆ. ಮಕ್ಕಳು ಬೋಗಿ ಬಿಟ್ಟು ಇಳಿಯದಂತೆ ಬೋಗಿಯ ಒಳಗೆ ಲಾಕ್ ಮಾಡಿ, ನಿವೇದಿತಾ ಶೌಚಾಲಯಕ್ಕೆ ಹೋಗಿದ್ದಾರೆ. ರೈಲು ನಿಂತ ತಕ್ಷಣ ಬೋಗಿ ಸ್ವಚ್ಛಗೊಳಿಸುವ ಸಿಬ್ಬಂದಿ ಇವರ ಬೋಗಿಗೆ ಬಂದಾಗ ಮಕ್ಕಳು ಮಲಗಿದ್ದು, ವೇಲ್​ ನೇತಾಡುವುದನ್ನು ಕಂಡು ಯಾರೋ ಆತ್ಮಹತ್ಯೆಗೆ ಪ್ರಯತ್ನ ಮಾಡ್ತಾ ಇದ್ದಾರೆ ಎಂಬುದನ್ನು ತಿಳಿದು ರೈಲ್ವೆ ಸಿಬ್ಬಂದಿ ಜೋರಾಗಿ ಚೀರಾಡಿದ್ದಾರೆ. ಅಷ್ಟರಲ್ಲಿ‌ ನಿವೇದಿತಾ ಬಾಗಿಲು ತೆಗೆಯುತ್ತಿದ್ದಂತೆಯೇ ಮಕ್ಕಳನ್ನಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿಯಾ ಎಂದು ಕಪಾಳಕ್ಕೆ ಹೊಡೆದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಲ್ಲಿ ರೈಲ್ವೆ ಸಿಬ್ಬಂದಿ ನಿವೇದಿತಾಳಿಗೆ‌ ಮಾತನಾಡಲು ಅವಕಾಶ ನೀಡದೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆದರೆ, ನಿವೇದಿತಾ ಅವರ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುವುದರಿಂದ ಅಲ್ಲೇ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಪೃಥ್ವಿರಾಜ್ ಹಾಗೂ ಅಕ್ಷತಾ ಎಂಬ ಮಕ್ಕಳಿದ್ದಾರೆ‌. ಅಕ್ಷತಾಳಿಗೆ ಭುಜದ ಮೂಳೆ ಮುರಿತವಾಗಿದೆ. ಪತಿ ನಾಟಿ ಔಷಧಿ ನೀಡಿದ್ದು, ಅದು ಸರಿಯಾಗದ ಕಾರಣ ನಿವೇದಿತಾ ತನ್ನ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬೆಂಗಳೂರಿನಿಂದ ಬಂದ ಇವರಿಗೆ ರೈಲಿನಲ್ಲಿ ಸೀಟು ಸಿಗದ ಕಾರಣ ಬೀರೂರಿನ ತನಕ ನಿಂತುಕೊಂಡೇ ಬಂದಿದ್ದಾರೆ.

ನಂತರ ಸೀಟು ಸಿಕ್ಕ ಕಾರಣ ಮಲಗಿ ಬಿಟ್ಟಿದ್ದಾರೆ. ಇದರಿಂದ ಶಿವಮೊಗ್ಗದಲ್ಲಿ ಇಳಿಯಬೇಕಾದವರು ತಾಳಗುಪ್ಪಕ್ಕೆ ಹೋಗಿದ್ದಾರೆ. ಸದ್ಯ ಸಾಗರದ ರೈಲ್ವೆ ಪೊಲೀಸರು ನಿವೇದಿತಾ ಹಾಗು ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಶಿವಮೊಗ್ಗಕ್ಕೆ ಹೋಗಲು ಮಹಿಳೆಗೆ ಸಾಗರದ ಯುವ ಕಾಂಗ್ರೆಸ್​ ಮುಖಂಡ ಸದ್ದಾಂ ಹುಸೇನ್ ಅವರು ಧನ ಸಹಾಯ ಮಾಡಿದ್ದಾರೆ. ರೈಲ್ವೆ ಪೊಲೀಸರಾದ ದಿನೇಶ್ ಹಾಗು ಕೊಟ್ರೇಶ್ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಕಳುಹಿಸಲಾಗಿದೆ.

ಓದಿ: ಜಾರಿಯಲ್ಲಿರುವ ನಿಯಮ ಮುಂದುವರಿಕೆ, ಮಾರುಕಟ್ಟೆ ಸ್ಥಳಾಂತರ: ಆರಗ ಜ್ಞಾನೇಂದ್ರ

Last Updated :Jan 12, 2022, 11:58 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.