ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ ನೋ ನೆಟ್​ವರ್ಕ್​; ಛತ್ರಿ ಹಿಡಿದು ಗುಡ್ಡದ ಮೇಲೆ ನಿಂತ ಟೆಕ್ಕಿ, ವಿದ್ಯಾರ್ಥಿಗಳು

author img

By

Published : Jun 24, 2021, 10:03 PM IST

Updated : Jun 25, 2021, 7:07 PM IST

network-problem-in-shimoga-district
ಮಲೆನಾಡಲ್ಲಿ NO ನೆಟ್​ವರ್ಕ್​

ಕೊರೊನಾ ಕಾರಣದಿಂದ ಸಾವಿರಾರು ಉದ್ಯೋಗಿಗಳು ವರ್ಕ್ ಫ್ರಂ ಹೋಂಗಾಗಿ ತಮ್ಮ ಊರುಗಳಿಗೆ ಮರಳಿದ್ದಾರೆ. ಹಾಗೆಯೇ ಸಾವಿರಾರು ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಿಯಾಗಿ ನೆಟ್​ವರ್ಕ್​ ಸಿಗದೇ ಕಷ್ಟ ಅನುಭವಿಸುತ್ತಿದ್ದಾರೆ.

ಶಿವಮೊಗ್ಗ: ಮಲೆನಾಡಿನಲ್ಲಿ ದಿನೇ ದಿನೇ ನೆಟ್​ವರ್ಕ್​ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಇಡೀ ದೇಶದಲ್ಲಿ ಡಿಜಿಟಲ್ ಇಂಡಿಯಾದಡಿ ಎಲ್ಲವನ್ನೂ ಡಿಜಿಟಲೈಸೇಷನ್ ಮಾಡಲಾಗುತ್ತಿದೆ. ಆದರೆ ಮಲೆನಾಡಿನಲ್ಲಿ 2ಜಿ ನೆಟ್​ವರ್ಕ್​ ಸಹ ಸರಿಯಾಗಿ ಸಿಗುತ್ತಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ನೋ ನೆಟ್​ವರ್ಕ್​

ಲಾಕ್​ಡೌನ್​ ಕಾರಣದಿಂದ ಸಾವಿರಾರು ಉದ್ಯೋಗಿಗಳು ಮಲೆನಾಡಿನ ತಮ್ಮ ಕುಗ್ರಾಮಗಳಿಗೆ ಆಗಮಿಸಿದ್ದರು. ಆದರೆ ನೆಟ್​ವರ್ಕ್​ ಸಮಸ್ಯೆಯಿಂದಾಗಿ ಮನೆಯ ಸಮೀಪದಲ್ಲಿ ಎಲ್ಲಿ ನೆಟ್​ವರ್ಕ್​ ಸಿಗುತ್ತದೆಯೋ ಅಲ್ಲಿ ಟೆಂಟ್ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದರು. ಹೀಗೆ ನಿರ್ಮಿಸಿಕೊಂಡಿರುವ ಟೆಂಟ್​​ಗಳಲ್ಲಿ ವಿದ್ಯಾರ್ಥಿಗಳೂ ಆನ್​ಲೈನ್​ ಶಿಕ್ಷಣ ಪಡೆಯುತ್ತಿದ್ದರು. ಆದರೆ ಇದೀಗ ಮಳೆಗಾಲ ಆರಂಭಗೊಂಡಿದ್ದು, ಟೆಂಟ್​ಗಳಲ್ಲಿಯೂ ನೆಟ್​ವರ್ಕ್​ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಧೋ ಎಂದು ಸುರಿಯುವ ಮಳೆಯಲ್ಲಿ ಗುಡ್ಡದ ಮೇಲೆ ಛತ್ರಿ ಹಿಡಿದು ನಿಲ್ಲಬೇಕಾದ ಸ್ಥಿತಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳದ್ದಾಗಿದೆ.

ಸಾಗರ ಹಾಗೂ ಹೊಸನಗರ ತಾಲೂಕಿನ ಕುಗ್ರಾಮಗಳಲ್ಲಿ ನೆಟ್​ವರ್ಕ್​ ಸಮಸ್ಯೆ ಹೇಳತೀರದಾಗಿದೆ. ನೆಟ್​ವರ್ಕ್​ ಸಿಗಲಿ ಎಂಬ ಕಾರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬೂಸ್ಟರ್​ಗಳನ್ನು ಅಳವಡಿಸಿಕೊಂಡರೂ ನೆಟ್​ವರ್ಕ್​​ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬೆಟ್ಟದ ಮೇಲೆ ಕುರ್ಚಿ ಹಾಕಿಕೊಂಡು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಲ್ಯಾಪ್​ಟ್ಯಾಪ್ ಹಿಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಓದಿ:ತಾರಕಕ್ಕೇರಿದ ಶಾಲಾ ಫೀಸ್ ಫೈಟ್: 10ನೇ ತರಗತಿ ಪರೀಕ್ಷೆಗೆ Delta+ ವೈರಸ್ Tension

Last Updated :Jun 25, 2021, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.