ETV Bharat / state

ಈ ಬಾರಿ ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಬರುತ್ತೆ, ಹೆಚ್​ಡಿಕೆ ಸಿಎಂ ಆಗ್ತಾರೆ : ಆಯನೂರು ಮಂಜುನಾಥ್​​ ಭವಿಷ್ಯ

author img

By

Published : May 4, 2023, 9:05 PM IST

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಕಾರ್ಮಿಕರ, ರೈತರ ಮತ್ತು ನೌಕರರ ಸಮೂಹದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಲ್ಲ ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಜೆಡಿಎಸ್​​ ಅಭ್ಯರ್ಥಿ ಆಯನೂರು ಮಂಜುನಾಥ್​ ಹೇಳಿದ್ದಾರೆ.

jds-government-will-come-to-power-in-the-state-says-ayanur-manjunath
ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಆಡಳಿತಕ್ಕೆ ಬರುತ್ತದೆ, ಹೆಚ್​ಡಿಕೆ ಮುಖ್ಯಮಂತ್ರಿ ಆಗ್ತಾರೆ : ಆಯನೂರು ಮಂಜುನಾಥ್​​ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಆಡಳಿತಕ್ಕೆ ಬರುತ್ತದೆ, ಹೆಚ್​ಡಿಕೆ ಮುಖ್ಯಮಂತ್ರಿ ಆಗ್ತಾರೆ : ಆಯನೂರು ಮಂಜುನಾಥ್​​

ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಆಡಳಿತಕ್ಕೆ ಬರುತ್ತೆ, ಹೆಚ್​ಡಿಕೆ ಮುಖ್ಯಮಂತ್ರಿ ಆಗ್ತಾರೆ : ಆಯನೂರು ಮಂಜುನಾಥ್​​

ಶಿವಮೊಗ್ಗ: ಹೆಚ್.ಡಿ ಕುಮಾರಸ್ವಾಮಿಯವರು ರಾಜ್ಯಕ್ಕೆ ಹೊಸ ಭರವಸೆಗಳನ್ನು ನೀಡಿರುವುದರಿಂದ ರಾಜ್ಯದಲ್ಲಿ ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮತ್ತು ನಾನು ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಸರ್ಕಾರಿ ನೌಕರರ ಸಮಸ್ಯೆಯಾದ ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು. ಅನುದಾನರಹಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ, ಅತಿಥಿ ಉಪನ್ಯಾಸಕರಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. ಇದರಿಂದ ಸುಮಾರು 4 ಲಕ್ಷ ನೌಕರರಿಗೆ ಅನುಕೂಲವಾಗುತ್ತದೆ ಎಂದರು.

ಇದರ ಜೊತೆಗೆ ಕಟ್ಟಡ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರಿದ್ದಾರೆ. ಇವರೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ. ವಿಶೇಷವಾಗಿ ಇವರೆಲ್ಲರ ಹಿತಕ್ಕಾಗಿ ಕಾರ್ಮಿಕ ಕಲ್ಯಾಣ ಮಂಡಳಿ ರಚನೆ ಮಾಡುವುದು, ಇದರ ಜೊತೆಗೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೂ ಅನುಕೂಲವಾಗುವಂತೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಸೆಸ್ ಸಂಗ್ರಹಿಸುವುದು. ಈ ಸೆಸ್ ಹಣದಲ್ಲಿ ಚಾಲಕರ ಅಭಿವೃದ್ಧಿ ಮಾಡಲು ಸಾಧ್ಯ. ಇದರಿಂದ ಸುಮಾರು 40 ಲಕ್ಷ ಅವಲಂಬಿತ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.

ಹಾಗೆಯೇ ಮಧ್ಯಮ ವರ್ಗ ಮತ್ತು ರೈತ ಮಕ್ಕಳು ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದು, ಅದನ್ನು ಮನ್ನಾ ಮಾಡಲಾಗುವುದು. ಜೊತೆಗೆ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಎಂಬ ಹೊಸ ಯೋಜನೆ ಜಾರಿಗೆ ತರಲಾಗುವುದು. ಇದರಿಂದ ನಿವೃತ್ತ ಸರ್ಕಾರಿ ಒಂದಿಷ್ಟು ನೆಮ್ಮದಿಯಾಗಿ ಜೀವನ ಮಾಡಬಹುದಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹೆದ್ದಾರಿ, ರೈಲ್ವೆ, ವಿಮಾನ ಸೇವೆ ಸೌಲಭ್ಯವಿದ್ದು, ಈ ಸೌಲಭ್ಯ ಬಳಸಿಕೊಂಡು ಜಿಲ್ಲೆಗೆ ಎರಡು ದೊಡ್ಡ ಕೈಗಾರಿಕೆಗಳನ್ನು ತರುವುದಾಗಿ ಹಾಗೂ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಪುನರ್ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಕಾರ್ಮಿಕರ, ರೈತರ ಮತ್ತು ನೌಕರರ ಸಮೂಹದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಲ್ಲ ಓರ್ವ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಎನ್‌ಇಎಸ್ ಮೈದಾನದಲ್ಲಿ ನಡೆದ ಬಹಿರಂಗಸಭೆ ಯಶಸ್ವಿಯಾಗಿರುವುದರಿಂದ ನನ್ನ ಗೆಲುವಿಗೆ ಪುಷ್ಠಿ ನೀಡಿದಂತಾಗಿದೆ. ಹಾಗೂ ಕುಮಾರಸ್ವಾಮಿ ಅವರ ಭೇಟಿ ಜನಸಾಮಾನ್ಯರಿಗೆ ಲಾಭ ತಂದುಕೊಡುವ ವಿಶ್ವಾಸವಿದೆ ಎಂದು ಹೇಳಿದರು.

ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಬೆಂಗಳೂರಿನಲ್ಲಿ ಗಾಯತ್ರಿ ಭವನ ನಿರ್ಮಾಣ ಮಾಡಲು ದೊಡ್ಡ ನಿವೇಶನ ನೀಡಿದ್ದರು. ಅಲ್ಲಿ ಭವನ ನಿರ್ಮಾಣವಾಗಿದೆ. ಅದೇ ಸಮಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಮಾಡಿದ್ದೆ. ಒತ್ತಾಯಕ್ಕೆ ಮಣಿದ ಅವರು ಅಂದು ನಿಗಮ ಸ್ಥಾಪನೆ ಮಾಡಿದ್ದರು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ನಿಗಮಕ್ಕೆ 100 ಕೋಟಿ ರೂ. ಅನುದಾನ ತೆಗೆದಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಆಚಾರ್ಯತ್ರಯರ ಭವನ ನಿರ್ಮಾಣ ಮಾಡಲಾಗಿದೆ. ಅದರಂತೆಯೇ ಎಲ್ಲಾ ಜಿಲ್ಲೆಗಳಲ್ಲೂ ಆಚಾರ್ಯತ್ರಯರ ಭವನ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರ ಮತಗಳು ಆಯನೂರು ಮಂಜುನಾಥ್ ಅವರಿಗೆ ದೊರೆಯುತ್ತವೆ. ಅವರು ಗೆಲ್ಲುವುದು ಖಚಿತ. ಅಷ್ಟೇ ಅಲ್ಲ, ಕುಮಾರಸ್ವಾಮಿ ಅವರು ಮತ್ತೊಂದು ಭರವಸೆ ನೀಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಆಯನೂರು ಮಂಜುನಾಥ್ ಹಾಗೂ ಶಾರದಾ ಪೂರ್ಯಾನಾಯ್ಕ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ ಎಂದರು. ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮುಖಂಡರಾದ ವೈ.ಹೆಚ್. ನಾಗರಾಜ್, ಮುಕ್ತಿಯಾರ್ ಅಹಮ್ಮದ್, ಭಾಸ್ಕರ್, ದೀಪಕ್ ಸಿಂಗ್, ಸಮೀವುಲ್ಲಾ ಇದ್ದರು.

ಇದನ್ನೂ ಓದಿ : ತಿಪಟೂರಿನಲ್ಲಿ ಯಡಿಯೂರಪ್ಪ ಭರ್ಜರಿ ರೋಡ್ ಶೋ : ಸಚಿವ ನಾಗೇಶ್​ ಪರ ಮತಯಾಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.