ETV Bharat / state

ಸಾಗರ: ಶೌಚ ಗುಂಡಿಗೆ ಬಿದ್ದ ಕೋಣ ರಕ್ಷಿಸಿದ ಅಗ್ನಿ‌ಶಾಮಕದಳ

author img

By

Published : May 31, 2021, 1:11 PM IST

buffalo fell into toilet pit
ಕೋಣ

ಮನೆಯ ಶೌಚಗುಂಡಿಗೆ ಕೋಣ ಅಯತಪ್ಪಿ ಬಿದ್ದಿದ್ದು, ಮೇಲಕ್ಕೆ‌ ಬಾರಲು ಆಗದೆ ಅಲ್ಲೇ ಒದ್ದಾಡುತ್ತಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕದಳವರು ಕೋಣವನ್ನು‌ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ..

ಶಿವಮೊಗ್ಗ : ಶೌಚ ಗುಂಡಿಗೆ ಬಿದ್ದ ಕೋಣವನ್ನು ಅಗ್ನಿಶಾಮಕದಳದವರು ಸುರಕ್ಷಿತವಾಗಿ ಮೇಲಕ್ಕೆ ಎತ್ತಿರುವ ಘಟನೆ ಸಾಗರದಲ್ಲಿ‌ ನಡೆದಿದೆ.

ಗುಂಡಿಗೆ ಬಿದ್ದ ಕೋಣ ರಕ್ಷಿಸಿದ ಅಗ್ನಿ‌ಶಾಮಕದಳ

ಸಾಗರ ಪಟ್ಟಣದ ನೆಹರೂ ನಗರದ ಮೊದಲನೇ ತಿರುವಿನಲ್ಲಿ ಮನೆಯ ಶೌಚಗುಂಡಿಗೆ ಕೋಣ ಆಯತಪ್ಪಿ ಬಿದ್ದಿದೆ.‌ ಶೌಚ ಗುಂಡಿಯು 8 ಅಡಿ‌ ಅಳವಾಗಿದ್ದು,‌ ಕೋಣಕ್ಕೆ ಮೇಲಕ್ಕೆ‌ ಬಾರಲು ಆಗದೆ ಅಲ್ಲೇ ಒದ್ದಾಡುತ್ತಿತ್ತು.

ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳವರು ಕೋಣದ ಪರಿಸ್ಥಿತಿ ಅರಿತು. ನಂತರ ಗುಂಡಿಗೆ ನೀರು ಬಿಟ್ಟು‌ ಕೋಣವನ್ನು ಸ್ವಲ್ಪ ಮೇಲಕ್ಕೆ‌ ಬರುವಂತೆ ಮಾಡಿ, ನಂತರ ಕೋಣವನ್ನು‌ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಗಿದೆ.

ಗುಂಡಿಯಿಂದ ಹೊರ ಬಂದ ಕೋಣಕ್ಕೆ ಸ್ವಲ್ಪ ಗಾಯಗಳಾಗಿವೆ. ಪಶು ವೈದ್ಯರು ಆಗಮಿಸಿ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಶ್ರೀ ಕೆ. ತಿಮ್ಮಪ್ಪ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಅಬ್ದುಲ್ ರಜಾಕ್, ವಿಲ್ ಫ್ರೆಡ್ ಜಿ, ನಂದಕುಮಾರ್ ಎಂ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.