ETV Bharat / state

ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ 150 ಕೋಟಿ ರೂ.: ಡಿಸಿಎಂ ಅಶ್ವಥ್ ನಾರಾಯಣ್

author img

By

Published : Oct 20, 2019, 6:03 PM IST

ಡಿಸಿಎಂ ಅಶ್ವಥ್ ನಾರಾಯಣ್

ರಾಮನಗರ ಜಿಲ್ಲೆಯ ಮಾಗಡಿ ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಬೇಟಿ ನೀಡಿದ್ದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು, ಸರ್ಕಾರ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ 150 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು. ಅಲ್ಲದೆ ಕೆಂಪೇಗೌಡರ ಸಮಾಧಿ ಒಂದು ಐತಿಹಾಸಿಕ ತಾಣವಾಗಿ ಪರಿಚಯವಾಗಲಿದೆ ಎಂದರು.

ರಾಮನಗರ: ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳದ ಅಭಿವೃದ್ಧಿಗಾಗಿ ಇಲ್ಲಿಯವರೆಗೂ ಅಧಿಕಾರ ನಡೆಸಿದ ಸರ್ಕಾರಗಳು ಯಾವುದೇ ಯೋಜನೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಈ ಸ್ಥಳದ ಅಭಿವೃದ್ಧಿಗೆ ನೀಲನಕ್ಷೆ ತಯಾರಾಗುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಅವರು, ಐಡೆಕ್ ಹೆಸರಿನ ಸಂಸ್ಥೆಗೆ ಈ ಯೋಜನೆಯನ್ನ ಒಪ್ಪಿಸಲಾಗುತ್ತಿದೆ. ಅದಕ್ಕಾಗಿ 150 ಕೋಟಿ ರೂ. ಹಣ ಮಂಜೂರಾಗಿದೆ. ಇಡೀ ನಾಡೇ ನೋಡುವ ರೀತಿ ನಾವು ಈ ಕೆಲಸ ಮಾಡುತ್ತೇವೆ. ಕೆಂಪೇಗೌಡರ ಸಮಾಧಿ ಒಂದು ಐತಿಹಾಸಿಕ ತಾಣವಾಗಲಿದೆ ಎಂದರು.

ಇದೇ ವೇಳೆ ರಾಮನಗರ ನನ್ನ ಜಿಲ್ಲೆ. ಭಾವನಾತ್ಮಕವಾಗಿ ನನಗೆ ಸಂಬಂಧವಿದೆ. ನಾನು ಹೊರಗಿನಿಂದ ರಾಜಕೀಯವಾಗಿ ಬಳಸಿಕೊಳ್ಳಲು ಬಂದವನಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಸದ್ಯದಲ್ಲೇ ನನ್ನ ಕಚೇರಿ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಡಿಸಿಎಂ ಅಶ್ವಥ್ ನಾರಾಯಣ್

ಡಿಕೆಶಿ ವಿರುದ್ಧ ಡಿಸಿಎಂ ಅಸಮಾಧಾನ...

ಇದೇ ವೇಳೆ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಅಧಿಕಾರ ಇದೆ ಎಂದು ಏನೆನೋ ಮಾಡೋಕಾಗಲ್ಲ. ಶಕ್ತಿ ಇದೆಯೆಂದು ಎಲ್ಲವನ್ನೂ ನಮ್ಮ ಮನೆಗೆ ಎತ್ತಿಕೊಂಡು ಹೋಗೋಕ್ಕಾಗುತ್ತಾ? ಅಧಿಕಾರ ಯಾವತ್ತೂ ಬಳಕೆಯಾಗಬೇಕು. ದುರ್ಬಳಕೆ ಆಗಬಾರದು. ರಾಮನಗರದಲ್ಲಿ ಅವರು ಏನು ಮಾಡಿಲ್ಲ. ಅದನ್ನ ನಾವು ಮಾಡ್ತೀವಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್​ ವಿರುದ್ಧ ಕುಟುಕಿದರು.

ಸಿದ್ದುಗೆ ಗುದ್ದು...

ಸಾವರ್ಕರ್​ಗೆ ಭಾರತ ರತ್ನ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ರೀತಿಯ ದೇಶ ಭಕ್ತ ಅಂತಾ ಗೊತ್ತಿದೆ. ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನ ಮಾಡೋದು ಯಾರಿಗೂ ಗೌರವ ತರಲ್ಲ. ಸಿದ್ದರಾಮಯ್ಯನವರು ಈ ರೀತಿ ಮಾತನಾಡೋದು ಅವರ ಸ್ಥಾನಕ್ಕೂ ಗೌರವ ತರೋದಿಲ್ಲ. ಜನರು ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಡಿಸಿಎಂ ತಿರುಗೇಟು ನೀಡಿದರು.

Intro:Body:ರಾಮನಗರ : ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳವನ್ನು ಅಭಿವೃದ್ದಿಗಾಗಿ ಇಲ್ಲಿಯವರೆಗೂ ಅಧಿಕಾರ ನಡೆಸಿದ ಸರ್ಕಾರಗಳು ಯಾವುದೇ ಪ್ಯ್ಲಾನ್ ಮಾಡಿಲ್ಲ, ನಮ್ಮ ಅವಧಿಯಲ್ಲಿ ಕೆಂಪೇಗೌಡರ ಸಮಾಧಿ ಸ್ಥಳದ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಾಗುತ್ತಿದೆ. ಐಡೆಕ್ ಹೆಸರಿನ ಸಂಸ್ಥೆಗೆ ಈ ಯೋಜನೆಯನ್ನ ಒಪ್ಪಿಸಲಾಗುತ್ತೆ ಅದಕ್ಕಾಗಿ 150 ಕೋಟಿ ಹಣ ಕೂಡ ಮಂಜೂರಾಗಿದೆ ಇಡೀ ನಾಡೇ ನೋಡುವ ರೀತಿ ನಾವು ಕೆಲಸ ಮಾಡ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಮಾಗಡಿಯ ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಬೇಟಿ ನೀಡಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಕೆಂಪೇಗೌಡರ ಸಮಾಧಿ ಒಂದು ಐತಿಹಾಸಿಕ ತಾಣವಾಗಿ ಪರಿಚಯವಾಗಲಿದೆ ಎಂದರು. ಇದೇ ವೇಳೆ ರಾಮನಗರ ಜಿಲ್ಲೆ ನನ್ನ ಜಿಲ್ಲೆ, ಭಾವನಾತ್ಮಕವಾಗಿ ನನಗೆ ಸಂಬಂಧವಿದೆ, ನಾನು ಹೊರಗಿನಿಂದ ಬಂದವನಲ್ಲ
ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಬಂದವರಲ್ಲ.
ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಜಿಲ್ಲೆಯಲ್ಲಿ ಸದ್ಯದಲ್ಲೇ ನನ್ನ ಕಚೇರಿ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಡಿಕೆಶಿ ವಿರುದ್ದ ಡಿಸಿಎಂ ಅಸಮಾಧಾನ :
ಇದೇ ವೇಳೆ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆದ ವಿಚಾರಕ್ಕೆ ಪ್ರತಿಕ್ರಿಯಿಸಿ ನಮಗೆ ಅಧಿಕಾರ ಇದೇ ಅಂತಾ ಏನೆನೋ ಮಾಡೋಕಾಗಲ್ಲ ಶಕ್ತಿ ಇದೇ ಅಂತಾ ಎಲ್ಲವನ್ನೂ ನಮ್ಮ ಮನೆಗೆ ಎತ್ಕೊಂಡ್ ಹೋಗೋಕಾಗುತ್ತೇನ್ರಿ ಅಧಿಕಾರ ಯಾವತ್ತು ಬಳಕೆಯಾಗಬೇಕು, ದುರ್ಬಳಕೆ ಆಗಬಾರದು ರಾಮನಗರದಲ್ಲಿ ಅವರು ಏನು ಮಾಡಿಲ್ಲ, ಅದನ್ನ ನಾವು ಮಾಡ್ತೀವಿ ಎಂದು ಮಾಜಿ ಸಚಿವ ಡಿಕೆಶಿವಕುಮಾರ್ ಗೆ ಕುಟುಕಿದರು.

ಸಿದ್ದುಗೆ ಗುದ್ದು :

ಸಾವರ್ಕರ್ ಗೆ ಭಾರತ ರತ್ನ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಯಾವ ರೀತಿಯ ದೇಶ ಭಕ್ತರು ಅಂತಾ ಗೊತ್ತಿದೆ, ಆದರೆ ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನ ಮಾಡೋದು ಯಾರಿಗೂ ಗೌರವ ಸಲ್ಲಲ್ಲ. ಸಿದ್ದರಾಮಯ್ಯನವರು ಈ ರೀತಿ ಮಾತನಾಡೋದು ಅವರ ಸ್ಥಾನಕ್ಕೂ ಗೌರವ ತರೋದಿಲ್ಲ. ಜನರು ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ, ಕಣ್ಣಿಗೆ ಕಾಣದ ರೀತಿ ಆಗುವ ಮುನ್ನ ಸಿದ್ದರಾಮಯ್ಯ ಅರ್ಥ ಮಾಡ್ಕೊಂಡ್ರೆ ಒಳ್ಳೆಯದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸಿದ್ದುಗೆ ಮಾತಿನ ಗುದ್ದು ನೀಡಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.