ETV Bharat / state

ಎರಡು ವಾಹನಗಳ ನಡುವೆ ಡಿಕ್ಕಿ: ಇಬ್ಬರ ಸಾವು

author img

By

Published : May 17, 2022, 5:27 PM IST

ಅಮರಾವತಿ ಕ್ರಾಸ್​ನಲ್ಲಿ ರೋಡ್ ಹಂಪ್ ಇರುವುದರಿಂದ ರಾತ್ರಿ ಸಮಯದಲ್ಲಿ ಅತಿ ವೇಗವಾಗಿ ವಾಹನ ಚಲಿಸಿದ ಪರಿಣಾಮ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದಾರೆ.

ರಾಯಚೂರಲ್ಲಿ ಅಪಘಾತವಾಗಿ ಇಬ್ಬರ ಸಾವು
ರಾಯಚೂರಲ್ಲಿ ಅಪಘಾತವಾಗಿ ಇಬ್ಬರ ಸಾವು

ರಾಯಚೂರು: ಲಾರಿ ಹಾಗೂ ಟಾಟಾ ಏಸ್ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ಜರುಗಿದೆ. ಟಾಟಾ ಏಸ್​ ಚಾಲಕ ಇಶಾಖ್ ಅಲಿ (42), ವಿನಯಾ ಚುನ್ನಿ ಲಾಲಾ( 54) ಸಾವಿಗೀಡಾದವರು. ಮೃತರನ್ನ ಬೆಂಗಳೂರು ಮೂಲದವರೆಂದು ಗುರುತಿಸಲಾಗಿದೆ.

ಅಮರಾವತಿ ಕ್ರಾಸ್​ನಲ್ಲಿ ರೋಡ್ ಹಂಪ್ ಇರುವುದರಿಂದ ರಾತ್ರಿ ಸಮಯದಲ್ಲಿ ಅತಿ ವೇಗವಾಗಿ ವಾಹನ ಚಲಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಮಾನವಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: 8 ವರ್ಷಗಳಿಂದ ನಾಪತ್ತೆಯಾಗಿದ್ದ ಡ್ರಗ್ಸ್ ಫೆಡ್ಲರ್ ಎನ್​ಸಿಬಿ ಅಧಿಕಾರಿಗಳ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.