ETV Bharat / state

ಹೆದ್ದಾರಿ ಉದ್ಘಾಟನೆಗೆ ಬರುವ ಮೋದಿಗೆ ಕಪ್ಪು ಬಾವುಟ ತೋರಿಸುತ್ತೇವೆ: ಎಂ.ಲಕ್ಷ್ಮಣ್

author img

By

Published : Feb 28, 2023, 4:49 PM IST

ಚುನಾವಣೆಯ ದೃಷ್ಠಿಯಿಂದ ಬಿಜೆಪಿಯವರು ಮೋದಿ ಕೈಯಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ಉದ್ಘಾಟನೆ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್​
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್​

ಮೈಸೂರು : ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಆತುರಾತುರವಾಗಿ ಮೋದಿಯವರ ಕೈಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಆದರೆ ಈ ರಸ್ತೆಯ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಹಾಗಾಗಿ, ಮೋದಿಯವರು ರಸ್ತೆ ಉದ್ಘಾಟನೆಗೆ ಬಂದಾಗ ಅವರಿಗೆ ‌ಕಪ್ಪು ಬಾವುಟ ಪ್ರದರ್ಶಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಮಾಧ್ಯಮ‌ ವಕ್ತಾರ ಎಂ.ಲಕ್ಷ್ಮಣ್ ಕರೆ ಕೊಟ್ಟಿದ್ದಾರೆ.

ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ‌ನಡೆಸಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಹಾದು ಹೋಗಿರುವ ಜಾಗಕ್ಕೆ ಜನರಿಗೆ ಇನ್ನೂ ಪರಿಹಾರ ನೀಡಿಲ್ಲ. ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ವೀಸ್ ರಸ್ತೆ ಮತ್ತು ಕಾಮಗಾರಿಗಳು ಪೂರ್ಣಗೊಳ್ಳದೇ ರಸ್ತೆ ಉದ್ಘಾಟನೆ ಮಾಡಲು ಮೋದಿ ಬರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶಾಂತರೀತಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಆಪ್ ನಾಯಕ! ಜಗನ್ನಾಥ ಭವನಕ್ಕೆ ಭಾಸ್ಕರ್ ರಾವ್ ಬಂದಿದ್ದೇಕೆ?

ಮೈಸೂರು-ಬೆಂಗಳೂರು ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ವೀಸ್ ರಸ್ತೆಯೂ‌ ಸಹ ಆಗಿಲ್ಲ. ಆಗಲೇ ಟೋಲ್ ಸಂಗ್ರಹಕ್ಕೆ ರಾತ್ರೊರಾತ್ರಿ ಆದೇಶಿಸಿದ್ದಾರೆ ಹೊರಡಿಸಿದ್ದಾರೆ. ಟೋಲ್ ನೆಪದಲ್ಲಿ ಜನರನ್ನ‌ ಸುಲಿಗೆ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧವಿದೆ. ದಶಪಥ ಹೆದ್ದಾರಿ ಕಾಮಗಾರಿ ಮತ್ತು ಸರ್ವೀಸ್ ರಸ್ತೆ ಆಗುವವರೆಗೂ ‌ಟೋಲ್ ಸಂಗ್ರಹ ‌ಮಾಡಬಾರದೆಂದು ಎಂ.ಲಕ್ಷ್ಮಣ್ ಮನವಿ ಮಾಡಿದರು.

ಇದನ್ನೂ ಓದಿ : ಶಿಗ್ಗಾಂವಿ ಗ್ರಾಮ ದೇವತೆ ಆರ್ಶೀವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ: ಬಸವರಾಜ್ ಬೊಮ್ಮಾಯಿ

ಪ್ರತಾಪ್ ಸಿಂಹಗೆ ತಿರುಗೇಟು: ಜನರು ಮೈಮರೆತು ಓಟು ಹಾಕಿದರೆ ತಾಲಿಬಾನ್ ಸರ್ಕಾರ ಬರುತ್ತದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್, ಆರ್​ಎಸ್​ಎಸ್​ ಮಹಿಳೆಯರ ವಿರುದ್ಧವಾಗಿದೆ. ಅವರು ಯಾರೂ ಮದುವೆಯಾಗಿಲ್ಲ‌. ಆದರೆ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ಅದೇ ರೀತಿ ತಾಲಿಬಾನ್ ಸಹ ಇದೇ ಮಾದರಿಯಲ್ಲಿದ್ದಾರೆ. ಆರ್​ಎಸ್​ಎಸ್​ನವರು ಕೋಮು‌ಗಲಭೆ ಸೃಷ್ಟಿಸಿ ರಕ್ತಪಾತ ಮಾಡಲು ಇಷ್ಟಪಡುತ್ತಾರೆ. ಆರ್​ಎಸ್​ಎಸ್​ನವರಿಗೆ ರಾಷ್ಟ್ರಧ್ವಜ ಬೇಕಿಲ್ಲ. ಇವರಿಗೂ ಮತ್ತು ತಾಲಿಬಾನ್​ಗಳಿಗೂ ಯಾವುದೇ ವ್ಯತ್ಯಾಸ ಇಲ್ಲ‌ ಎಂದು ಟೀಕಿಸಿದರು.

ಇದನ್ನೂ ಓದಿ : ಸರ್ಕಾರಿ ನೌಕರರ ಪ್ರತಿಭಟನೆ: ಸಂಜೆ ಆಯೋಗ, ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥ- ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.