ETV Bharat / state

ಯೋಗ ಜೊತೆ ಪ್ರವಾಸೋದ್ಯಮ ವರ್ಷ ಆಚರಣೆಗೆ ಯೋಜನೆ: ಶಾಸಕ ರಾಮದಾಸ್​

author img

By

Published : Jun 21, 2022, 12:00 PM IST

ಮುಂದಿನ ಒಂದು ವರ್ಷದಲ್ಲಿ ಯೋಗ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ 50 ಜನರಿಗೆ ಮೇಲ್ಪಟ್ಟು ನೀಡುವ ಯೋಗ ತರಬೇತುದಾರರಿಗೆ ಸರ್ಕಾರದ ವತಿಯಿಂದ ಮಾಸಿಕ 6000 ರೂ. ನೀಡುವುದರ ಬಗ್ಗೆ ಮತ್ತು ಪ್ರತಿಯೊಂದು ಶಾಲೆಯಲ್ಲಿ ಯೋಗ ಶಿಕ್ಷಕರ ನೇಮಕದ ಬಗ್ಗೆ ಚಿಂತನೆ ನಡೆಸಿರುವುದಾಗಿ ಬಿ.ಸಿ.ನಾಗೇಶ್​ ಹೇಳಿದ್ದಾರೆ.

MLA S.R.Ramadas talked to press
ಶಾಸಕ ಎಸ್​.ಆರ್​.ರಾಮದಾಸ್​ ಮಾಧ್ಯಮದೊಂದಿಗೆ ಮಾತನಾಡಿದರು.

ಮೈಸೂರು : ಮೈಸೂರಿನಲ್ಲಿ ಪ್ರವಾಸೋದ್ಯಮದ ಜೊತೆಯಲ್ಲಿ ಒಂದು ವರ್ಷ ಕಾಲ ಯೋಗ ವರ್ಷವನ್ನಾಗಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತು ಯೋಗ ಬೆಳವಣಿಗೆ ಬಗ್ಗೆ ಆಸಕ್ತಿ ವಹಿಸಿದ್ದು, ಅದರನ್ವಯ ಮುಂದಿನ ಒಂದು ವರ್ಷ ಯೋಗ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಯೋಜನೆಯ ಕಾರ್ಯ ರೂಪಕ್ಕೆ ಶ್ರಮಿಸಲಾಗುವುದು ಎಂದರು.

ಮುಂದಿನ ಒಂದು ವರ್ಷದಲ್ಲಿ ಮನೆ ಮನೆಗೆ ಯೋಗ ತಲುಪಿಸುವ ಕಾರ್ಯ ನಡೆಯಲಿದೆ. ಯೋಗ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ 50 ಜನರಿಗೆ ಮೇಲ್ಪಟ್ಟು ನೀಡುವ ಯೋಗ ತರಬೇತುದಾರರಿಗೆ ಸರ್ಕಾರದ ವತಿಯಿಂದ ಮಾಸಿಕ 6000 ರೂ. ನೀಡುವುದರ ಬಗ್ಗೆ ಮತ್ತು ಪ್ರತಿಯೊಂದು ಶಾಲೆಯಲ್ಲಿ ಯೋಗ ಶಿಕ್ಷಕರ ನೇಮಕದ ಬಗ್ಗೆ ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದರು.

ಶಾಸಕ ಎಸ್​.ಆರ್​.ರಾಮದಾಸ್​ ಮಾಧ್ಯಮದೊಂದಿಗೆ ಮಾತನಾಡಿದರು.

60 ವಾರ್ಡ್​ಗಳಲ್ಲಿ 1 ವಾರ್ಡ್ ಟೋಟಲ್ ಹೆಲ್ತ್ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆ ಮಾಡಿ, ಸಂಪೂರ್ಣ ಆರೋಗ್ಯ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಮೈಸೂರಿನಲ್ಲಿ ಯೋಗ ಆಚರಣೆಗೆ ತಪಸ್ಸು ಮಾಡಿದ ಗಣ್ಯರ ನೆನಪಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ 3 ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು. ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅರಮನೆ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯ ಯಶಸ್ಸಿಗೆ ದುಡಿದ ಯೋಗ ತರಬೇತುದಾರರು, ಯೋಗ ಪಟುಗಳು, ಸರ್ವರಿಗೂ ಅಭಿನಂದನೆ ಅರ್ಪಿಸಿದರು.

ಯೋಗಾ ಪಟು ರಕ್ಷಾ ಅಭಿಪ್ರಾಯ : ಸಾಮೂಹಿಕವಾಗಿ ಯೋಗ ಮಾಡಿದ್ದು ಖುಷಿ ತಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮೋದಿ ಅವರೊಟ್ಟಿಗೆ ಯೋಗ ಮಾಡಿದ್ದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿರುವ ಯೋಗ ದಿನ ಹಿಸ್ಟಾರಿಕಲ್ ಮೂಮೆಂಟ್, ಇಂತಹ ದಿನ ಜೀವನದಲ್ಲಿ ಮತ್ತೆ ಬರಲು ಸಾಧ್ಯವಿಲ್ಲ. ನಾವು ಮೋದಿಯವರೊಟ್ಟಿಗೆ ಯೋಗ ಮಾಡುತ್ತೇವೆ ಎಂದುಕೊಂಡಿರಲಿಲ್ಲ. ಕೊನೆ ಘಳಿಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಸ್ ಸಿಕ್ಕಿತ್ತು. ಅಲ್ಲಿಯವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಈ ಕ್ಷಣವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಯೋಗ ಪಟು ರಕ್ಷಾ ಸಂತಸ ವ್ಯಕ್ತಪಡಿಸಿದ್ದಾರೆ.

ಯೋಗಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗ ಪಟುಗಳ ಅನಿಸಿಕೆ ಹಂಚಿಕೊಂಡರು.

ಪ್ರಗತಿ ವಿದ್ಯಾ ಕೇಂದ್ರ ಶಾಲೆಯ ಶಿಕ್ಷಕಿ ಮಮತಾ: ಇಂದು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪ್ರಧಾನಿಯವರೊಟ್ಟಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತಸದ ವಿಷಯ. ಮೋದಿಯವರನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೆವು. ಕಳೆದ ಜೂನ್ 12ರಿಂದಲೂ ವಿದ್ಯಾರ್ಥಿಗಳೊಡನೆ ಯೋಗ ತಾಲಿಮಿಗೆ ಬರುತ್ತಿದ್ದೆವು. ನಮಗೆ ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಪಾಸ್ ದೊರೆತದ್ದು, ನಮ್ಮ ವಿದ್ಯಾರ್ಥಿಗಳೆಲ್ಲರೂ ಬಹಳ ಖುಷಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಪ್ರಗತಿ ವಿದ್ಯಾ ಕೇಂದ್ರ ಶಾಲೆಯ ಶಿಕ್ಷಕಿ ಮಮತಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.