ETV Bharat / city

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

author img

By

Published : Jun 21, 2022, 6:39 AM IST

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ ಯೋಗಾ ದಿನವನ್ನು ಭೌತಿಕ ಕ್ರಮದಲ್ಲಿ ಆಚರಿಸಲು ಭಾರತವೂ ಎದುರು ನೋಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮೈಸೂರು ಅರಮನೆ ಮೈದಾನದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ 15,000 ಯೋಗಾಸಕ್ತರು ಮೋದಿಯವರೊಂದಿಗೆ ಸೇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದೊಂದಿಗೆ ಕಾರ್ಯಕ್ರಮವು ಬೆಳಗ್ಗೆ 6:30 ರ ಸುಮಾರಿಗೆ ಪ್ರಾರಂಭವಾಗಲಿದ್ದು, ನಂತರ 7 ರಿಂದ 7.45 ರ ನಡುವೆ ಯೋಗ ಅಧಿವೇಶನ ನಡೆಯಲಿದೆ.

International yoga day 2022, PM Modi international Yoga day, PM Modi participate yoga day in Mysore, International yoga day live from Mysore, ಅಂತರಾಷ್ಟ್ರೀಯ ಯೋಗ ದಿನ 2022, ಪ್ರಧಾನಿ ಮೋದಿ ಅಂತರಾಷ್ಟ್ರೀಯ ಯೋಗ ದಿನ, ಮೈಸೂರಿನಲ್ಲಿ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಪಿಎಂ ಮೋದಿ, ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಮೈಸೂರಿನಿಂದ ಅಂತರಾಷ್ಟ್ರೀಯ ಯೋಗ ದಿನ ನೇರಪ್ರಸಾರ,
ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಮೈಸೂರು: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಅಂಬಾವಿಲಾಸ ಅರಮನೆಯ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಅರಮನೆಯ ಮುಂಭಾಗ ನಡೆಯುತ್ತಿರುವ ಯೋಗ ದಿನದ ವೇದಿಕೆಯಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಭಾಗವಹಿಸಲಿದ್ದು, ಸುಮಾರು 51 ವಿವಿಧ ವರ್ಗದ ಜನರೂ ಪಾಲ್ಗೊಂಡಿದ್ದಾರೆ.

15 ಸಾವಿರಕ್ಕೂ ಹೆಚ್ಚು ಮಂದಿಗೆ ಅವಕಾಶ: ಈಗಾಗಲೇ ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಂಡಿರುವ ಜನರು ಪ್ರಧಾನಿಯೊಂದಿಗೆ ಯೋಗ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಮನೆ ಮುಂಭಾಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅರಮನೆಯ ನಾಲ್ಕು ದ್ವಾರಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 6:30 ರ ಒಳಗೆ ಅರಮನೆಯೊಳಗೆ ಯೋಗ ಮಾಡುವವರು ಬರಬೇಕು, ಅನಂತರ ನಾಲ್ಕು ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. 15,000ಕ್ಕೂ ಹೆಚ್ಚು ಮಂದಿ ಯೋಗ ಮಾಡಲು ವೇದಿಕೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದರು.

ಓದಿ: ಅರಮನೆ ಮುಂಭಾಗದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ : ನೆರಪ್ರಸಾರ

ಪ್ರಧಾನಿ ಸ್ವಾಗತಕ್ಕೆ ಯೋಗ ನಗರದ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಮೋದಿಯವರು ಹಾದು ಹೋಗುವ ರಸ್ತೆಗಳ ಪಕ್ಕದಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರವೂ ಆಗಿದೆ.

ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ನಂತರ ವಸ್ತು ಪ್ರದರ್ಶನ ವೀಕ್ಷಿಸುವರು. ಬಳಿಕ, ಅರಮನೆಗೆ ಭೇಟಿ ನೀಡಿ ರಾಜವಂಶಸ್ಥರ ಜೊತೆ ಬೆಳಗಿನ ಉಪಹಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.