ETV Bharat / state

ಅಕ್ಟೋಬರ್ 7ರಿಂದ 13ರವರೆಗೆ ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ : ಪಟ್ಟಿ ಇಲ್ಲಿದೆ

author img

By

Published : Oct 1, 2021, 4:13 PM IST

2019ರ ರೀತಿಯಲ್ಲಿ ಈ ಬಾರಿಯು ವೈಭವದ ದೀಪಾಲಂಕಾರ ಮಾಡಲಯು ಯೋಜನೆ ರೂಪಿಸಲಾಗಿದೆ. ಅದು ಶೇ.80ರಷ್ಟು ಮುಗಿದಿದೆ. ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಕಟ್ಟುಪಾಡುಗಳ‌ ಜೊತೆಗೆ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ತಿಳಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಅನ್ನು ಸಚಿವರು ಬಿಡುಗಡೆ ಮಾಡಿದರು..

ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ
ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು : ಅಕ್ಟೋಬರ್​​ 10ರಂದು ಅರಮನೆ ಮುಂಭಾಗದಲ್ಲಿ ಬೆಳಗ್ಗೆ ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನೀಲ್‌ಕುಮಾರ್ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಸರಾ ಉತ್ಸವವನ್ನು ಈ ಬಾರಿ ಭಾವನಾತ್ಮಕವಾಗಿ ಯಶಸ್ವಿಗೊಳಿಸಿ ಧಾರ್ಮಿಕ ಚಟುವಟಿಕೆಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಆಗುತ್ತಿದೆ.

ಅಕ್ಟೋಬರ್ 7 ರಿಂದ 13ರವರೆಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಂಜೆ 6 ರಿಂದ 9.30ರವರೆಗೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಅಕ್ಟೋಬರ್ 10 ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾಮಂದಿರದಲ್ಲಿ ಅಕ್ಟೋಬರ್ 11 ಮತ್ತು 12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ‌

ಜೊತೆಗೆ ನಂಜನಗೂಡಿನ ಶ್ರೀಕಂಠೇಶ್ವರ‌ ದೇವಾಲಯದ ಆವರಣದಲ್ಲಿ ಅಕ್ಟೋಬರ್ 7 ರಿಂದ 13ರವರೆಗೆ ಪ್ರತಿದಿನ ಸಂಜೆ 7 ರಿಂದ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ
ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ

ವೈಭವದ ದೀಪಾಲಂಕಾರ : ಈ ಬಾರಿಯ ನಾಡ ಹಬ್ಬ ದಸರಾ ಸರಳ‌ ಹಾಗೂ ಸಾಂಪ್ರದಾಯಿಕವಾಗಿದ್ದರೂ ವಿಭಿನ್ನವಾಗಿ ಹಾಗೂ ವೈಭವದ ದೀಪಾಲಂಕಾರ ಮಾಡಲು ಸಿದ್ಧತೆ ಮಾಡಲಾಗಿದೆ. ನಗರದ 10 ಕಿ.ಮೀ ವ್ಯಾಪ್ತಿಯ 107 ವೃತ್ತಗಳು, 41 ದೀಪಾಲಂಕಾರದ ಪ್ರತಿಕೃತಿಗಳು ನಿರ್ಮಾಣ ಮಾಡಲಾಗುತ್ತದೆ.

2019ರ ರೀತಿಯಲ್ಲಿ ಈ ಬಾರಿಯು ವೈಭವದ ದೀಪಾಲಂಕಾರ ಮಾಡಲಯು ಯೋಜನೆ ರೂಪಿಸಲಾಗಿದೆ. ಅದು ಶೇ.80ರಷ್ಟು ಮುಗಿದಿದೆ. ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಕಟ್ಟುಪಾಡುಗಳ‌ ಜೊತೆಗೆ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ತಿಳಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಅನ್ನು ಸಚಿವರು ಬಿಡುಗಡೆ ಮಾಡಿದರು.

ಅ.7ರಿಂದ 13ರವರೆಗೆ ಅರಮನೆ ಮುಂಭಾಗ ಕಾರ್ಯಕ್ರಮಗಳು : ನಾಡಹಬ್ಬ ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶ- ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ. ಆದರೆ, ಕೋವಿಡ್ ಹಿನ್ನೆಲೆ ಕೇವಲ ರಾಜ್ಯದ ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

ಅಕ್ಟೋಬರ್ 7 : ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ 7.30ಕ್ಕೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರ್ನಾಟಕ ವೈಭವ ನೃತ್ಯ ರೂಪಕವಿರಲಿದೆ.

ಅಕ್ಟೋಬರ್ 8 : ಸಂಜೆ 6 ಗಂಟೆಗೆ ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಅವರಿಂದ ಜನಪದ ಗಾಯನ, ಸಂಜೆ 7 ಗಂಟೆಗೆ ಶಿವಮೊಗ್ಗದ ಹೊಸಹಳ್ಳಿ ವೆಂಕಟರಾಮು ಕೆ. ಮತ್ತು ತಂಡದಿಂದ ವಯೋಲಿನ್ ವಾದನ. ಹಾಗೂ ರಾತ್ರಿ 8 ಗಂಟೆಗೆ ವೈ ಕೆ ಮುದ್ದು ಕೃಷ್ಣ ಮತ್ತು ತಂಡದಿಂದ ಕನ್ನಡ ಡಿಂಡಿಮ‌ ಕಾರ್ಯಕ್ರಮ.

ಅಕ್ಟೋಬರ್‌ 9 : ಸಂಜೆ 6 ಗಂಟೆಗೆ ಮೈಸೂರಿನ ಹೆಚ್ ಎನ್ ಭಾಸ್ಕರ್ ಮತ್ತು ತಂಡದಿಂದ ಸಂಗೀತ ದರ್ಬಾರ್, ಸಂಜೆ 7 ಗಂಟೆಗೆ ಹಂಸಲೇಖ ಮತ್ತು ತಂಡದಿಂದ ದೇಸಿ ಸಂಸ್ಕೃತಿ ಹಬ್ಬ ಕಾರ್ಯಕ್ರಮ.

ಅಕ್ಟೋಬರ್ 10 : ಸಂಜೆ 6 ಗಂಟೆಗೆ ಬೆಂಗಳೂರಿನ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್‌ನಿಂದ ಮಿಶ್ರ ವಾದ್ಯ ಗಾಯನ, ಸಂಜೆ 6.45ಕ್ಕೆ ಮೈಸೂರಿನ ಶಾಂತಲ ವಟ್ಟಂ ಮತ್ತು ತಂಡದಿಂದ ಗಝಲ್ ಮತ್ತು 7.30ಕ್ಕೆ ತೀರ್ಥಹಳ್ಳಿಯ ಶಮಿತಾ ಮಲ್ನಾಡ್ ಮತ್ತು ತಂಡದಿಂದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ.

ಅಕ್ಟೋಬರ್ 11 : ಸಂಜೆ 6 ಗಂಟೆಗೆ ಪೊಲೀಸ್ ಬ್ಯಾಂಡ್, 7.30ಕ್ಕೆ ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಅವರಿಂದ ನೃತ್ಯ ರೂಪಕ ಮತ್ತು ರಾತ್ರಿ 8.15ಕ್ಕೆ ರಾಯಚೂರು ಶೇಷಗಿರಿದಾಸ್ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ.

ಅಕ್ಟೋಬರ್ 12 : ಸಂಜೆ 6 ಗಂಟೆಗೆ ಅದಿತಿ ಪ್ರಹ್ಲಾದ್ ಅವರಿಂದ ಸುಗಮ ಸಂಗೀತ, ಸಂಜೆ 7 ಗಂಟೆಗೆ ಮುದ್ದುಮೋಹನ್ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಹಾಗೂ ರಾತ್ರಿ 8 ಗಂಟೆಗೆ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ಜುಗಲ್ ಬಂದಿ ಕಾರ್ಯಕ್ರಮ.

ಅಕ್ಟೋಬರ್‌ 13 : ಸಂಜೆ 6 ಗಂಟೆಗೆ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ತಾನಿ ಗಾಯನ, ಸಂಜೆ 7 ಗಂಟೆಗೆ ಬೆಂಗಳೂರಿನ ಬಿ.ಜಯಶ್ರೀ ಮತ್ತು ತಂಡದಿಂದ ರಂಗಗೀತೆಗಳು‌ ಹಾಗೂ ರಾತ್ರಿ 8.30ಕ್ಕೆ ಮೈಸೂರಿನ ಶ್ರೀಧರ್ ಜೈನ್ ಮತ್ತು ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.