ETV Bharat / state

ನಾವು ಪಠ್ಯಪುಸ್ತಕವನ್ನು ಕೇಸರಿಮಯ ಮಾಡುತ್ತಿಲ್ಲ, ಕನ್ನಡಕ ಹಾಕಿ ನೋಡುತ್ತಿದ್ದೇವೆ : ಶಿಕ್ಷಣ ಸಚಿವ ಬಿ ಸಿ ನಾಗೇಶ್

author img

By

Published : May 24, 2022, 3:50 PM IST

ಪಠ್ಯಪುಸ್ತಕವನ್ನು ಮೊದಲು ಸಿದ್ದರಾಮಯ್ಯ ಓದಲಿ. ಸಿದ್ದರಾಮಯ್ಯ ಎಲ್ಲಾ ವಿಚಾರಗಳಲ್ಲಿ ಮಿಸ್ಫೈರ್ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಕಿಡಿಕಾರಿದ್ದಾರೆ..

ಶಿಕ್ಷಣ ಸಚಿವ ಬಿ ಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್

ಮೈಸೂರು : ನಾವು ಪಠ್ಯಪುಸ್ತಕವನ್ನು ಕೇಸರಿಮಯ ಮಾಡುತ್ತಿಲ್ಲ. ನಾವು ಕನ್ನಡಕ ಹಾಕಿ ನೋಡುತ್ತಿದ್ದೇವೆ. ನಮಗೆ ಯಾವ ಬಣ್ಣವೂ ಕಾಣುತ್ತಿಲ್ಲ. ನಮಗೆ ಕಾಣುತ್ತಿರುವುದು ಮಕ್ಕಳಷ್ಟೇ.. ಮಕ್ಕಳ ಹಿತದೃಷ್ಟಿಯಿಂದ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ನಾವು ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದೇವೆ. ಅದಕ್ಕೆ ಹಸಿರು ಬಣ್ಣದ ವೋಟು ನಮಗೆ ಬೀಳುವುದಿಲ್ಲ ಎಂದು ಸಿದ್ದರಾಮಯ್ಯ ವಿರೋಧ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಮಾತನಾಡಿದರು

ಕುವೆಂಪು ಅವರಿಗೆ ಅವಮಾನ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ

ಕಾಂಗ್ರೆಸ್​ ಪಕ್ಷದವರು ಸುಳ್ಳನ್ನ ಹಬ್ಬಿಸುತ್ತಿದ್ದಾರೆ. ಟಿಪ್ಪು, ನಾರಾಯಣ ಗುರು, ಭಗತ್ ಸಿಂಗ್, ಬಸವಣ್ಣ ಅವರ ಮೇಲೆ ಸುಳ್ಳು ಹಬ್ಬಿಸಿದ್ದರು. ಆ ಸುಳ್ಳುಗಳು ಫೇಲ್ ಆದ ಮೇಲೆ ಈಗ ಕುವೆಂಪು ಅವರನ್ನು ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯ ಕುವೆಂಪು ಅವರ ನಾಲ್ಕು ಪಾಠವನ್ನು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

ಪಠ್ಯಪುಸ್ತಕವನ್ನು ಮೊದಲು ಸಿದ್ದರಾಮಯ್ಯ ಓದಲಿ. ಸಿದ್ದರಾಮಯ್ಯ ಎಲ್ಲಾ ವಿಚಾರಗಳಲ್ಲಿ ಮಿಸ್ಫೈರ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನಾನೊಬ್ಬನೇ ಬುದ್ಧಿವಂತ ಅನ್ನೋದನ್ನ ಬಿಡಬೇಕು. ಅದು ಅವರ ದುರಹಂಕಾರವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತಬ್ಯಾಂಕ್ ಮಾಡಿತ್ತು

ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತಬ್ಯಾಂಕ್ ಮಾಡಿಕೊಂಡಿದೆ. ಅದಕ್ಕಾಗಿ ಪಠ್ಯದಲ್ಲಿ ತಪ್ಪುಗಳು ಆಗಿತ್ತು. ಟಿಪ್ಪು ಒಬ್ಬನೇ ಸ್ವಾತಂತ್ರ್ಯ ಹೋರಾಟಗಾರನಾ?. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ಮೈಸೂರು ಮಹಾರಾಜರಿಗೆ ಅನ್ಯಾಯವಾಗಿದ್ದರೆ ಅದು ಹೈದರಾಲಿ ಹಾಗೂ ಟಿಪ್ಪುವಿನಿಂದ

ಟಿಪ್ಪುವಿನಿಂದ ಕನ್ನಡಕ್ಕೆ ಅನ್ಯಾಯವಾಗಿದೆ. ಪರ್ಷಿಯನ್ ಭಾಷೆಯನ್ನು ಏಕೆ ತರಬೇಕಾಗಿತ್ತು. ನಾವು ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕ ರಚನೆ ಮಾಡಿದ್ದೇವೆ. ಮಾಹಿತಿಗಾಗಿ ಯಾವ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ತಪ್ಪುಗಳನ್ನು ಪಠ್ಯದಲ್ಲಿ ಹೇಳಿದ್ರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತೆ ಪಠ್ಯಪುಸ್ತಕ ಪರಿಷ್ಕರಣೆಯ ಪ್ರಶ್ನೆಯೇ ಇಲ್ಲ

ಈಗಾಗಲೇ ಪುಸ್ತಕ ಮುದ್ರಣವಾಗಿದೆ. ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡುವ ಪ್ರಶ್ನೆಯಿಲ್ಲ. ಪಠ್ಯಪುಸ್ತಕ ಸಮಿತಿ ಅಧ್ಯಕ್ಷರ ವಿರುದ್ಧ ಸಿದ್ದು ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರ ದುರಹಂಕಾರವನ್ನು ತೋರಿಸುತ್ತದೆ. ನಾನೊಬ್ಬನೇ ಸರಿ, ನಾನು ಮಾಡಿದ್ದೆ ಸರಿ, ನನಗೆ ಎಲ್ಲಾ ಗೊತ್ತಿರೋದು ಎನ್ನುವಂಥ ಅವಹೇಳನಕಾರಿ ಮಾತುಗಳು ಗೌರವ ಕೊಡದಿರುವುದು, ಯಾವಾಗಲೂ ಏಕವಚನದಲ್ಲಿ ಮಾತನಾಡುವುದು ಇದಕ್ಕೆಲ್ಲ ಕಾರಣ. ಅವರ ಹಿಂದೆ ಇರುವ ತಂಡ ಇದಕ್ಕೆಲ್ಲ ಕಾರಣ. ಪಾಪ ಇದಕ್ಕೆ ಸಿದ್ದರಾಮಯ್ಯ ಅವರು ಕಾರಣರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಓದಿ: ನಾಡಗೀತೆ, ಕುವೆಂಪು ಅವಮಾನಿಸಿದವರನ್ನು ಒದ್ದು ಒಳಕ್ಕೆ ಹಾಕಬೇಕು : ಚಕ್ರತೀರ್ಥ ವಿರುದ್ಧ ಹೆಚ್​ಡಿಕೆ ಕಿಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.