ETV Bharat / state

ಕೆಆರ್​​ಎಸ್ ಡ್ಯಾಂ ಗೇಟ್ ಸರಿಪಡಿಸಿದ್ದೇವೆ, ಹೊಸದಾಗಿ ಬದಲಾವಣೆ ಆಗಿದೆ: ಸಿಎಂ ಬೊಮ್ಮಾಯಿ

author img

By

Published : May 1, 2023, 11:12 PM IST

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಚಾರ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಮಂಡ್ಯ: ಜೆಡಿಎಸ್ ಭದ್ರಕೋಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಬ್ಬರದ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಪ್ರಚಾರ ನಡೆಸಿ ಮತಯಾಚಿಸಿದರು. ಮಂಡ್ಯ ನಗರದ ನೂರಡಿ ರಸ್ತೆಯಿಂದ ಮಹಾವೀರ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದರು.

ರಸ್ತೆಯುದ್ದಕ್ಕೂ ಪುಷ್ಪವೃಷ್ಟಿ ಸಲ್ಲಿಸಿ ಜನರು ಜೈಕಾರ ಕೂಗಿ ಬೃಹತ್ ಹಾರಗಳನ್ನ ಹಾಕಿ ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವಾಗತಿಸಿದ್ರು. ಸಿಎಂ ರೋಡ್ ಶೋ ನಲ್ಲಿ ನಟಿ ತಾರಾ, ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಸಾಥ್ ನೀಡಿದರು.

ಬಳಿಕ ಮಾತನಾಡಿದ ಅವರು, ಉತ್ಸವವನ್ನ ಮೇ 10ಕ್ಕೆ ತೋರಿಸಿ ಎಂದು ಜೈಕಾರ ಕೂಗಿದ ಯುವಕರಿಗೆ ಸಿಎಂ ಬೊಮ್ಮಾಯಿ ಕರೆ ಕೊಟ್ಟರು. ಮಂಡ್ಯ ಇಸ್ ಇಂಡಿಯಾ. ನರೇಂದ್ರ ಮೋದಿ ಬಂದ ಮೇಲೆ ಇಂಡಿಯಾ ಇಸ್ ಮಂಡ್ಯ ಹಾಗಿದೆ. ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಶ್ರಮಪಟ್ಟರೆ ಈ ಗಾಳಿ ಸುನಾಮಿ ಆಗುತ್ತೆ ಎಂದರು.

ಎಸ್ಡಿ ಜಯರಾಂ ಅವರನ್ನ ನೆನಪು ಮಾಡಿಕೊಂಡ ಸಿಎಂ: ಮಂಡ್ಯ ಅಭಿವೃದ್ಧಿಗೆ ಎಸ್ಡಿ ಜಯರಾಂ ಶ್ರಮ ಇದೆ. ಹೃದಯವಂತ ಎಸ್ಡಿ ಜಯರಾಂ, ಅವರ ಮಗ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಎಸ್. ಡಿ ಜಯರಾಂ ಅವರ ಎಲ್ಲಾ ಅಭಿಮಾನಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಸಹ. ಪಕ್ಷಾತೀತವಾಗಿ ಅಶೋಕ್ ಜಯರಾಂ ಅವರಿಗೆ ಆಶೀರ್ವಾದ ಮಾಡಿ. ಮಂಡ್ಯದ ಮಣ್ಣು ಮಣ್ಣಲ್ಲ ಬಂಗಾರ ಚಿನ್ನ. ರೈತರ ಬೆವರು ಸುರಿಸಿದರೆ ಬಂಗಾರದ ಬೆಳೆ ಕೊಡ್ತಾಳೆ ಎಮದು ಹೇಳಿದರು.

ಮಾದೇಗೌಡರ ಜೊತೆ ಸಂಪರ್ಕ ಇತ್ತು. ಈ ನಾಡು ಅತ್ಯಂತ ಶ್ರೀಮಂತವಾಗಬೇಕಾದ ನಾಡು. ಅಂಬರೀಶ್ ಅಣ್ಣ ಮಂಡ್ಯದಲ್ಲಿ ಇದ್ದರು. ಅತ್ಯಂತ ಆತ್ಮೀಯ ಸ್ನೇಹಿತರು 40 ವರ್ಷದ ಸ್ನೇಹಿತರು. ಆ ಪ್ರೀತಿಗಾಗಿ ಮಂಡ್ಯದ ಜನರು ಅಷ್ಟೆ ಹತ್ತಿರ ಇದ್ದಾರೆ. ಸುಮಲತಾ ಅಕ್ಕ ಪಾರ್ಲಿಮೆಂಟ್​ನಲ್ಲಿ ಕನ್ನಡದ ಧ್ವನಿ ಎತ್ತಿದ್ದಾರೆ. ಮೈಸೂರು ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ರೈತರ ಜೊತೆ ಸುಮಲತಾ ಅಕ್ಕ ಶ್ರಮಿಸಿದ್ದಾರೆ ಎಂದು ಅಂಬರೀಶ್ ಹಾಗೂ ಸುಮಲತಾರನ್ನ ಹಾಡಿ ಹೊಗಳಿದ್ರು.

ಕೆ.ಆರ್.ಎಸ್ ಡ್ಯಾಂ ಗೇಟ್ ಸರಿಪಡಿಸಿದ್ದೇವೆ. 75 ವರ್ಷ ಆಗಿತ್ತು. ಎಲ್ಲಾ ಗೇಟ್ ಬದಲಾವಣೆ ಮಾಡಿದ್ದೇವೆ.
ಹೊಸ ಡ್ಯಾಂ ಆಗಿ ಬದಲಾವಣೆ ಆಗಿದೆ. ಹಲವಾರು ಜನ ನಾಯಕರು ಮಂತ್ರಿಯಾಗಿದ್ದಾರೆ. ಯಾಕೆ ನೋಡಿಲ್ಲ, ಯಾಕೆ ಇಚ್ಛಾ ಶಕ್ತಿ ಇಲ್ಲ? kRS ನಮ್ಮ ಆಸ್ತಿ. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಎಂದರು.

ವಿಸಿ ನಾಲೆ ಅಭಿವೃದ್ಧಿ ಮಾಡಿದ್ದೇವೆ. ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಬಿಜೆಪಿಗೆ ಬದ್ಧತೆ ಇದೆ. ಮೈಸೂರು ಕಾರ್ಖಾನೆಯ ಬಗ್ಗೆ ಮಟ್ಟಕ್ಕೆ ಹೋಗಬೇಡಿ ಅಂದ್ರು. ಅರ್ಜುನ ಗುರಿ ತಪ್ಪಿದರೂ ಕರ್ಣನ ಗುರಿ ತಪ್ಪಲ್ಲ. ಅದೇ ರೀತಿ ನಾನು. ಕಾರ್ಖಾನೆ ಪ್ರಾರಂಭವಾಯಿತು. ಈ ಭಾಗದ ರೈತರ ಕಬ್ಬು ಬೇರೆ ಕಾರ್ಖಾನೆಗೆ ಹೋಗಬಾರದು. ಮಂಡ್ಯ ನಗರವನ್ನ ಹೊಸ ನಗರವನ್ನ ಮಾಡ್ತೇವೆ ಎಂದು ಹೇಳಿದರು.

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಬೆಂಗಳೂರು ನಗರದಂತೆ ಮಂಡ್ಯ ನಗರ ಬೆಳೆಯಬೇಕು. ಆಧುನಿಕ ಮಂಡ್ಯ ಕಟ್ಟಲು ನಾವು ಬಂದಿದ್ದೇವೆ. ದಿಟ್ಟ ಯುವ ನಾಯಕ, ಬಲ ಭೀಮ ಅಶೋಕ್ ಜಯರಾಂ. ಅವರನ್ನ ಗೆಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ. 30 ವರ್ಷದಿಂದ ಕಾಂಗ್ರೆಸ್ ಜೆಡಿಎಸ್ ನೋಡಿ ಬೇಜಾರಾಗಿದ್ದಾರೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಮಂಡ್ಯದ ಎಲ್ಲಾ ಯುವಕರು ಸಂಕಲ್ಪ ಮಾಡಿ ಜಯ ನಮ್ಮದಾಗುತ್ತೆ. ಜಯರಾಂ ಅವರಿಗೆ ಜಯ ಆಗುತ್ತೆ. ಅತ್ಯಂತ ಕ್ರಿಯಾಶೀಲ ಕೆಲಸ ಮಾಡುವ ಯುವಕ. ಮಂಡ್ಯದಲ್ಲಿ ಬದಲಾವಣೆ ಮಾಡಿ ತೋರಿಸಿ ಜಿಲ್ಲೆ ಬದಲಾವಣೆ ಆಗುತ್ತೆ ಎಂದು ಹೇಳಿದರು.

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ಸಿಎಂ ಅಬ್ಬರದ ಪ್ರಚಾರದ ಮೂಲಕ ಮಂಡ್ಯದಲ್ಲಿ ಕಮಲ ಅರಳಿಸಲು ಸಜ್ಜಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸುವಂತೆ ಮನವಿ ಮಾಡಿ ಮತಯಾಚನೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಎಲ್ಲವೂ ಉಚಿತವೆಂದ್ರೆ ಖಜಾನೆ ಖಾಲಿ, ನಮ್ಮದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.