ETV Bharat / state

ಹುಲಿಹೈದರ ಪ್ರಕರಣಕ್ಕೆ ಶಾಸಕ, ಪೊಲೀಸರೇ ಹೊಣೆ: ಕೆಪಿಸಿಸಿ ವಕ್ತಾರ ಮುಕುಂದರಾವ್

author img

By

Published : Aug 12, 2022, 10:38 PM IST

Mukundarao Bhavanimath reaction about hulihyder issue koppal
ಕೆಪಿಸಿಸಿ ವಕ್ತಾರ ಮುಕುಂದರಾವ್

ಕಾಂಗ್ರೆಸ್ ಮುಖಂಡ ಕೆಪಿಸಿಸಿ ವಕ್ತಾರ ಮುಕುಂದರಾವ್ ಭವಾನಿಮಠ ಅವರು ಹುಲಿಹೈದರ ಗ್ರಾಮದಲ್ಲಿ ನಡೆದ ಕೊಲೆ ಮತ್ತು ಕೋಮು ಘರ್ಷಣೆಗೆ ಸ್ಥಳೀಯ ಪೊಲೀಸರು ಕಾರಣ ಎಂದು ದೂರಿದ್ದಾರೆ.

ಗಂಗಾವತಿ(ಕೊಪ್ಪಳ): ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಗ್ರಾಮದಲ್ಲಿ ನಡೆದ ಇಬ್ಬರ ಕೊಲೆ ಮತ್ತು ಕೋಮು ಘರ್ಷಣೆಗೆ ಸ್ಥಳೀಯ ಪೊಲೀಸರು ಮತ್ತು ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ನೇರ ಹೊಣೆ ಎಂದು ಕಾಂಗ್ರೆಸ್ ಮುಖಂಡ ಕೆಪಿಸಿಸಿ ವಕ್ತಾರ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.

ಈ ಬಗ್ಗೆ ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಅಸಮರ್ಥ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ತಂದು ಪ್ರತಿಷ್ಠಾಪಿಸುತ್ತಿರುವ ಶಾಸಕ ಈ ಪ್ರಕರಣ ಹೊಣೆ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಹುಲಿಹೈದರ ಪ್ರಕರಣಕ್ಕೆ ಶಾಸಕ, ಪೊಲೀಸರೇ ಹೊಣೆ

ಹಣ ಕೊಟ್ಟು ವರ್ಗಾವಣೆ: ಕನಕಗಿರಿಯ ಹುಲಿಹೈದರ ಕೊಲೆಯಾಗುವಂತ ಪ್ರಕರಣಗಳಿಂದಾಗಿ ಎರಡು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲೀಸರು ಸ್ಥಳೀಯ ಶಾಸಕರಿಗೆ ಹಣಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬರುತ್ತಿರುವುದು ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದರು.

ಇದನ್ನೂ ಓದಿ: ಹುಲಿಹೈದರ ಗ್ರಾಮದಲ್ಲಿ ಗುಂಪು ಘರ್ಷಣೆ: 9 ದಿನ ನಿಷೇಧಾಜ್ಞೆ, 28 ಜನರ ವಿರುದ್ಧ ಎಫ್​ಐಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.