ETV Bharat / state

ತುಂಗಭದ್ರಾ ಜಲಾಶಯದಿಂದ 1.41 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಐತಿಹಾಸಿಕ ಸ್ಮಾರಕಗಳು ಜಲಾವೃತ

author img

By

Published : Aug 9, 2022, 2:29 PM IST

ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿನ ಐತಿಹಾಸಿಕ ಸ್ಮಾರಕಗಳು ಜಲಾವೃತವಾಗಿವೆ.

Historical monuments submerged
ಐತಿಹಾಸಿಕ ಸ್ಮಾರಕಗಳು ಜಲಾವೃತ

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.41 ಸಾವಿರ ಕ್ಯೂಸೆಕ್​​ಗೂ ಅಧಿಕ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಮತ್ತೆ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ತಾಲೂಕಿನ ಆನೆಗೊಂದಿ ಭಾಗದಲ್ಲಿನ ಐತಿಹಾಸಿಕ ಸ್ಮಾರಕಗಳು ಸಂಪೂರ್ಣ ಜಲಾವೃತವಾಗಿವೆ. ಸಣಾಪುರದ ಕಲ್ಲಿನ ಸೇತುವೆ ಸುತ್ತ ನೀರು ಹರಿಯುತ್ತಿದ್ದು, ದೃಶ್ಯ ಮನಮೋಹಕವಾಗಿದೆ.

ತುಂಗಭದ್ರಾ ಜಲಾಶಯ

ಆನೆಗೊಂದಿ ಸಮೀಪದ ಶ್ರೀ ಕೃಷ್ಣದೇವರಾಯನ ಸಮಾಧಿ ಹಾಗೂ ನವ ವೃಂದಾವನ ಗಡ್ಡೆಗೆ ತೆರಳಲು ಇದ್ದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಜಲಾಶಯದ ಮಟ್ಟ 1632.06 ಅಡಿಯಿದ್ದು, 101.974 ಟಿಎಂಸಿ ನೀರಿನ ಸಂಗ್ರಹಣ ಸಾಮರ್ಥ್ಯವಿದೆ.

ಪ್ರತಿ ಗಂಟೆಗೆ 1.41 ಲಕ್ಷ ಕ್ಯೂಸೆಕ್ ನೀರು ಒಳ ಹರಿವಿದ್ದು, 1.52 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಾಲುವೆಗಳಿಗೆ 10,512 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ 8 ಗೇಟ್​​ಗಳನ್ನು ತಲಾ ಒಂದು ಅಡಿಗೆ ಹಾಗೂ 25 ಗೇಟ್​​​ಗಳನ್ನು 3.5 ಅಡಿಗೆ ಏರಿಸಿ ಜಲಾಶಯದಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇದನ್ಬೂ ಓದಿ: ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.