ETV Bharat / state

ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು.. ಸಚಿವ ಮುನಿರತ್ನ

author img

By

Published : Sep 18, 2022, 3:59 PM IST

ಇಡಿ ವಿಚಾರದಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ಡಿಕೆಶಿಗೆ ಇಡಿ ನೋಟಿಸ್​ ನೀಡಿದೆ. ಸಿದ್ದರಾಮಯ್ಯ ಅವರಿಗೆ ಯಾಕೆ ಇಡಿ ನೋಟೀಸ್​ ನೀಡಿಲ್ಲ. ವೈಯಕ್ತಿಕ ದ್ವೇಷ, ಷಡ್ಯಂತ್ರ ಎನ್ನುವುದಾರೆ ಸಿದ್ದರಾಮಯ್ಯ ಅವರು ಇಂದು ಜೈಲಿನಲ್ಲಿರಬೇಕಿತ್ತು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

minister-munirathna-statement-about-siddaramaiah
ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು... ಸಚಿವ ಮುನಿರತ್ನ

ಕೋಲಾರ : ಇಡಿ ದಾಳಿ ವೈಯಕ್ತಿಕ ದ್ವೇಷ ಅಥವಾ ಷಡ್ಯಂತ್ರ ಎನ್ನುವುದಾದರೆ ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು ಎಂದು ಸಚಿವ ಮುನಿರತ್ನ ಪ್ರತಿಕ್ರಿಯಿಸಿದರು.

ಇಂದು ಮಾಧ್ಯಮದವರೊಂದಿಗೆ ಡಿ ಕೆ ಶಿವಕುಮಾರ್​ಗೆ ಇಡಿ ವಿಚಾರಣೆ ಕುರಿತಂತೆ ಮಾತನಾಡಿದ ಅವರು, ಪ್ರಕರಣ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಕಾನೂನಿನ ಪ್ರಕಾರ ಎಲ್ಲವೂ ಆಗುತ್ತದೆ ಎಂದು ಹೇಳಿದರು.

ಇನ್ನು, ಈ ವಿಚಾರದಲ್ಲಿ ಯಾವುದೇ ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಡಿಕೆಶಿ ಸಿಎಂ ಅಭ್ಯರ್ಥಿ ಎಂದು ಅವರಿಗೆ ಇಡಿ ನೋಟಿಸ್​ ನೀಡಿಲ್ಲ. ಹಾಗಿದ್ದರೆ ಸಿದ್ದರಾಮಯ್ಯ ಅವರು ಸಿಎಂ ಅಭ್ಯರ್ಥಿ, ಹಾಗಿದ್ದರೆ ಸಿದ್ದರಾಮಯ್ಯ ಮೇಲೆ ಏಕೆ ದಾಳಿ ಮಾಡಿಲ್ಲ. ಸಿದ್ದರಾಮಯ್ಯನವರಿಗೆ ಯಾಕೆ ಇಡಿ ನೋಟಿಸ್​ ಕೊಟ್ಟಿಲ್ಲ. ವೈಯಕ್ತಿಕ ದ್ವೇಷ ಅನ್ನೋ ಹಾಗಿದ್ದರೆ ಸಿದ್ದರಾಮಯ್ಯ ಅವರನ್ನು ಇಷ್ಟೊತ್ತಿಗೆ ಜೈಲಿಗೆ ಹಾಕಬೇಕಿತ್ತು ಎಂದು ಸಚಿವ ಮುನಿರತ್ನ ಹೇಳಿದರು.

ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು ಎಂದ ಸಚಿವ ಮುನಿರತ್ನ

ಸಿದ್ದರಾಮಯ್ಯ ಅವರ ರಾಜ್ಯ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದ ವಿಚಾರ ನಮಗ್ಯಾಕೆ, ಅದು ನಮ್ಮ ಪಕ್ಷಕ್ಕೆ ಸಂಬಂಧ ಇಲ್ಲ. ನಮ್ಮ ಕ್ಷೇತ್ರವೂ ಭಾರತದಲ್ಲೇ ಇದೆ. ನಮ್ಮ ಕ್ಷೇತ್ರದಲ್ಲೂ ಪ್ರವಾಸ ಮಾಡಲಿ ಬಿಡಿ ಎಂದು ಹೇಳಿದರು.

ಇದನ್ನೂ ಓದಿ : ಪ್ರಿಯಾಂಕ್ ಖರ್ಗೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ: ಸಿಎಂ ಬೊಮ್ಮಾಯಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.