ETV Bharat / state

ಕೆಜಿಎಫ್: ದಶಕಗಳಿಂದ ಮುಚ್ಚಿದ್ದ ಬಿಜಿಎಂಎಲ್ ಆಸ್ಪತ್ರೆ ಮತ್ತೆ ತೆರೆಯಲು ನಿರ್ಧಾರ

author img

By

Published : May 4, 2021, 2:27 PM IST

Kolar
ದಶಕಗಳಿಂದ ಮುಚ್ಚಿದ್ದ ಬಿಜಿಎಂಎಲ್ ಆಸ್ಪತ್ರೆ ಮತ್ತೆ ತೆರೆಯಲು ನಿರ್ಧಾರ

ಕೆಜಿಎಫ್​ ಕಾರ್ಮಿಕರಿಗಾಗಿಯೇ ಮೀಸಲಾಗಿದ್ದ ಬಿಜಿಎಂಎಲ್ ಆಸ್ಪತ್ರೆ 2001ರಲ್ಲಿ ಸ್ಥಗಿತಗೊಂಡಿತ್ತು. ದಶಕಗಳಿಂದ ಮುಚ್ಚಿದ್ದ ಆಸ್ಪತ್ರೆಯನ್ನು ಇದೀಗ ಕೊರೊನಾ ಕಾರಣದಿಂದ ತೆರೆಯಲಾಗುತ್ತಿದೆ.

ಕೋಲಾರ: ಬ್ರಿಟಿಷರ ಕಾಲದಲ್ಲಿ ಚಿನ್ನದ ಗಣಿಯಲ್ಲಿ‌ ಕೆಲಸ ಮಾಡುವ ಕಾರ್ಮಿಕರಿಗಾಗಿ ಮೀಸಲಿರಿಸಿದ್ದ ಹಾಗು ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೆಜಿಎಫ್​ನ ಪುರಾತನ ಬಿಜಿಎಂಎಲ್ ಆಸ್ಪತ್ರೆಯನ್ನು ಗಣಿ ಕೆಲಸ ಸ್ಥಗಿತಗೊಂಡಾಗ ಮುಚ್ಚಲಾಗಿತ್ತು. ಇದೀಗ ಮಹಾಮಾರಿ ಕೊರೊನಾ ಈ ಆಸ್ಪತ್ರೆಯ ತೆರೆಯುವಂತೆ ಮಾಡಿದೆ.

ದಶಕಗಳಿಂದ ಮುಚ್ಚಿದ್ದ ಬಿಜಿಎಂಎಲ್ ಆಸ್ಪತ್ರೆ ಮತ್ತೆ ತೆರೆಯಲು ನಿರ್ಧಾರ

ಕೆಜಿಎಫ್​ನಲ್ಲಿ ಮೈಸೂರು ರಾಜರ ಕಾಲದಿಂದಲೂ ಚಿನ್ನಕ್ಕಾಗಿ ಗಣಿಗಾರಿಕೆ ನಡೆಯುತ್ತಿತ್ತು. ನಂತರ ಬ್ರಿಟಿಷರ ಕಾಲದಲ್ಲಿ ಆಸ್ಪತ್ರೆ ಆಧುನಿಕತೆ ಪಡೆದುಕೊಂಡಿತ್ತು. ಸಾವಿರಾರು ಮಂದಿ ಕಾರ್ಮಿಕರು ಇಲ್ಲಿನ ಗಣಿಗಳಲ್ಲಿ ಕೆಲಸ‌ ಮಾಡುತ್ತಿದ್ದರು. ಕೆಜಿಎಫ್​ ಕಾರ್ಮಿಕರಿಗಾಗಿಯೇ ಮೀಸಲಾಗಿದ್ದ ಬಿಜಿಎಂಎಲ್ ಆಸ್ಪತ್ರೆ 2001ರಲ್ಲಿ ಸ್ಥಗಿತಗೊಂಡಿತ್ತು.

ಕೆಜಿಎಫ್ ನಗರದಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಡ್​ಗಳ ಕೊರತೆ ಉಂಟಾಗಿದೆ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಗಣಿ ಇಲಾಖೆಯ ಸುಪರ್ದಿಯಲ್ಲಿರುವ ಬಿಜಿಎಂಎಲ್ ಆಸ್ಪತ್ರೆಯನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಆಸ್ಪತ್ರೆಯ ಕಟ್ಟಡಗಳಲ್ಲಿ 200ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲು ಚಿಂತನೆ‌ ನಡೆದಿದ್ದು, ಸ್ಥಳೀಯ ಯುವಕರು ಸ್ವಯಂಪ್ರೇರಿತವಾಗಿ ಸಹಕರಿಸುತ್ತಿದ್ದಾರೆ.

ಕೊರೊನಾ ನೆಪದಲ್ಲಿ ಇಷ್ಟುದಿನ ಮುಚ್ಚಿದ್ದ ಆಸ್ಪತ್ರೆಯನ್ನು ಮತ್ತೆ ತೆರೆಯಲಾಗುತ್ತಿದೆ. ಆಸ್ಪತ್ರೆಯನ್ನು ಕ್ರಮೇಣ ಮೇಲ್ದರ್ಜೆಗೇರಿಸಬೇಕು ಮತ್ತು ಆಧುನೀಕರಣಗೊಳಿಸಬೇಕು. ಕೊರೊನಾ ಕಾಲ ಮುಗಿದ ನಂತರವೂ ಈ‌ ಆಸ್ಪತ್ರೆ ಮುಂದುವರೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಾರದ ಹಿಂದಷ್ಟೇ ಮದುವೆ... ರಾತ್ರಿ ಮಲಗಿ ಬೆಳಗಾಗುವುದರಲ್ಲಿ ವ್ಯಕ್ತಿ ಕೊರೊನಾಗೆ ಬಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.