ETV Bharat / state

ಕಾವೇರಿ ಕೂಗು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರ ಬೆಂಬಲ

author img

By

Published : Sep 3, 2019, 8:54 PM IST

ಜೀವ ನದಿ ಕಾವೇರಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಚಾಲನೆ‌ ದೊರೆತಿದ್ದು, ಸ್ಯಾಂಡಲ್‌ವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲ ನೀಡಿದ ನಟರಾದ ರಕ್ಷಿತ್ ಶೆಟ್ಟಿ ಹಾಗೂ ದಿಗಂತ್

ಮಡಿಕೇರಿ: ಜೀವ ನದಿ ಕಾವೇರಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಇಂದು ಚಾಲನೆ‌ ಸಿಕ್ಕಿದೆ.

ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲ ನೀಡಿದ ನಟರಾದ ರಕ್ಷಿತ್ ಶೆಟ್ಟಿ ಹಾಗೂ ದಿಗಂತ್

ನದಿಯನ್ನು ಉಳಿಸಲು ಗಿಡಗಳನ್ನು ನೆಡಬೇಕು ಎಂಬ ಧ್ಯೇಯದೊಂದಿಗೆ ಬೈಕ್ ರ್ಯಾಲಿ ಆರಂಭವಾಗಿದ್ದು, ಖುದ್ದು ಬೈಕ್ ರೈಡ್ ಮಾಡುವ ಮೂಲಕ ಸದ್ಗುರು ಗಮನ ಸೆಳೆದರು. ಇನ್ನು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಗುರುವಿನೊಂದಿಗೆ ಬೈಕ್ ರೈಡ್ ಮಾಡಿದ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕಾವೇರಿ ಕೂಗು ಅಭಿಯಾನಕ್ಕೆ ಶುಭ ಹಾರೈಸಿದ್ದಾರೆ. ಕಾವೇರಿ ಕೂಗಿಗೆ ಹಲವಾರು ಉದ್ದೇಶ ಮತ್ತು ಅವಶ್ಯಕತೆ ಇದೆ. ಅದನ್ನು ನಾವು ಅರಿಯಬೇಕು. ಆ ಉದ್ದೇಶಕ್ಕೆ ಸಾಥ್ ನೀಡಲು ಸದ್ಗುರು ಜಗ್ಗಿ ವಾಸುದೇವ ಅವರ ಜೊತೆ ನಾವು ಬಂದಿದ್ದೇವೆ ಎಂದರು.

Either follow a leader or Be the lead ಅನ್ನೋ ಮಾತಿದೆ. ಹಾಗೆಯೇ ನಾವು ಕೂಡ ಸದ್ಗುರು ಅವರನ್ನು ಫಾಲೋ ಮಾಡ್ತಿದಿವಿ. ಕಾವೇರಿ ನೀರು ಸಮೃದ್ಧಿಯಾಗಿ ಇದ್ದರೆ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯ. ಇದೊಂದು ಒಳ್ಳೆಯ ಅಭಿಯಾನ. ಹಾಗಾಗಿ ಅದರಲ್ಲಿ ತೊಡಗಿಸಿಕೊಂಡು ಬೈಕ್ ರೈಡ್​ ಮಾಡ್ತಿದಿವಿ. ನೀವೆಲ್ಲರೂ ನಿಮ್ಮ ಕೈಯಲ್ಲಿ ಎಷ್ಟು ಗಿಡ ಕೊಂಡುಕೊಳ್ಳೋಕೆ ಆಗುತ್ತದೆಯೋ ಅಷ್ಟನ್ನು ಖರೀದಿಸುವುದರೊಂದಿಗೆ ಅವುಗಳನ್ನು ಪೋಷಿಸಿ ಎಂದು ನಾಯಕ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕರೆ ನೀಡಿದ್ರು.

Intro:ಕಾವೇರಿ ಕೂಗು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರ ಬೆಂಬಲ

ಕೊಡಗು: ಜೀವ ಕಾವೇರಿ ನದಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಚಾಲನೆ‌ ದೊರೆತಿದೆ.

ನದಿಯನ್ನು ಉಳಿಸಲು ಮರಗಳನ್ನು ನೆಡಬೇಕು ಎಂಬ ಧ್ಯೇಯದೊಂದಿಗೆ ಬೈಕ್ ರಾಲಿ ಆರಂಭವಾಗಿದ್ದು, ಖುದ್ದು ಬೈಕ್ ರೈಡ್ ಮಾಡುವ ಮೂಲಕ ಸದ್ಗುರು ಗಮನ ಸೆಳೆದರು. ಇನ್ನು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸಾತ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸದ್ಗುರುಗಳೊಂದಿಗೆ ಬೈಕ್ ರೈಡ್ ಮಾಡಿದ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕಾವೇರಿ ಕೂಗು ಅಭಿಯಾನಕ್ಕೆ ಶುಭ ಹಾರೈಸಿದ್ದಾರೆ.ಕಾವೇರಿ ಕೂಗಿಗೆ ಹಲವಾರು ಉದ್ದೇಶ ಮತ್ತು ಅವಶ್ಯಕತೆ ಇದೆ. ಅದನ್ನು ನಾವು ಅರಿಯಬೇಕು. ಆ ಉದ್ದೇಶಕ್ಕೆ ಸಾಥ್ ನೀಡಲು ಸದ್ಗುರು ಜಗ್ಗಿ ವಾಸುದೇವ ಅವರ ಜೊತೆ ನಾವು ಬಂದಿದ್ದೇವೆ ಎಂದ್ರು..

ಐದರ್ ಪಾಲೋ ಎ ಲೀಡರ್ ಆರ್ ಬಿ ದ ಲೀಡ್ ಅಂತಾರೆ.ಹಾಗೆಯೇ ನಾವು ಕೂಡ ಸದ್ಗುರು ಅವರನ್ನು ಫಾಲೋ ಮಾಡ್ತಿದೀವಿ. ಕಾವೇರಿ ನೀರು ಸಮೃದ್ಧಿಯಾಗಿ ಇದ್ದರೆ ಮಾತ್ರ ನಮ್ಮ‌ ಬದುಕು ಹಸನಾಗಲು ಸಾಧ್ಯ. ಇದೊಂದು ಒಳ್ಳೆಯ ರಾಲಿ ಹಾಗಾಗಿ ಅದರಲ್ಲಿ ತೊಡಗಿಕೊಂಡು ಬೈಕ್ ರೇಡ್ ಮಾಡ್ತಿದೀವಿ.ನೀವೆಲ್ಲರೂ ನಿಮ್ಮ ಕೈಯಲ್ಲಿ ಎಷ್ಟು ಗಿಡ ಕೊಂಡುಕೊಳ್ಳೋಕೆ ಆಗುತ್ತದೆ ಕೊಂಡುಕೊಂಡು ಬೆಳೆಸಿ ಅಂತ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕರೆ ನೀಡಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.