ETV Bharat / state

ಕೊಡಗು ಜಿಲ್ಲೆಯಾದ್ಯಂತ ನಿಲ್ಲದ ವರುಣನ ಅಬ್ಬರ.. ರೆಡ್​​​ ಅಲರ್ಟ್​ ನಡುವೆ 204 ಮಿ.ಮೀ ಮಳೆ ಸಾಧ್ಯತೆ

author img

By

Published : Jul 14, 2021, 5:00 PM IST

ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ನದಿ ಪಾತ್ರದಲ್ಲಿ ಹಾಗೂ ಬೆಟ್ಟ-ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ..

ರೆಡ್​​​ ಅಲರ್ಟ್​ ನಡುವೆ 204 ಮಿ ಮೀ ಮಳೆ
ರೆಡ್​​​ ಅಲರ್ಟ್​ ನಡುವೆ 204 ಮಿ ಮೀ ಮಳೆ

ಕೊಡಗು : ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕಳದೆ 5 ದಿನಗಳಿಂದ ನಿರಂತರ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಇದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೊಡಗು ಜಿಲ್ಲೆಗೆ ರೆಡ್ ಅಲರ್ಟ್​​ ಘೋಷಣೆ ಮಾಡಲಾಗಿದ್ದು, 204 ಮಿ.ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 5 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಮಡಿಕೇರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ರಸ್ತೆಗಳು ನದಿಯಂತಾಗಿವೆ.

ಕೊಡಗು ಜಿಲ್ಲೆಯಾದ್ಯಂತ ಮುಂದುವರಿದ ಮಳೆಯಾರ್ಭಟ

ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ನದಿ ಪಾತ್ರದಲ್ಲಿ ಹಾಗೂ ಬೆಟ್ಟ-ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕೊಡಗು ಜಿಲ್ಲೆಯ ಮಳೆ ವಿವರ

ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 61.58 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 89.5 ಮಿ.ಮೀ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 45.28 ಮಿ.ಮೀ, ಸೋಮವಾರಪೇಟೆಯಲ್ಲಿ ಸರಾಸರಿ 49.95 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ದಾಖಲಾಗಿರುವ ಮಳೆ ವಿವರ

ಮಡಿಕೇರಿ ಕಸಬಾ 83.6, ನಾಪೋಕ್ಲು 95, ಸಂಪಾಜೆ 76, ಭಾಗಮಂಡಲ 103.4, ವಿರಾಜಪೇಟೆ ಕಸಬಾ 64.2, ಹುದಿಕೇರಿ 50.5, ಶ್ರೀಮಂಗಲ 56, ಪೊನ್ನಂಪೇಟೆ 40, ಅಮ್ಮತ್ತಿ 32.5, ಬಾಳೆಲೆ 28.5, ಸೋಮವಾರಪೇಟೆ ಕಸಬಾ 46.4, ಶನಿವಾರಸಂತೆ 24.8, ಶಾಂತಳ್ಳಿ 115.5, ಕೊಡ್ಲಿಪೇಟೆ 48.6, ಕುಶಾಲನಗರ 22.4, ಸುಂಟಿಕೊಪ್ಪ 42 ಮಿ.ಮೀ ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2849.55 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 23.4 ಮಿ.ಮೀ, ಒಳಹರಿವು 7,753 ಕ್ಯೂಸೆಕ್, ಇಂದಿನ ಹೊರ ಹರಿವು 365 ಕ್ಯೂಸೆಕ್. ನಾಲೆಗೆ 40 ಕ್ಯೂಸೆಕ್.

ಓದಿ : ಬೆಂಗಳೂರಲ್ಲಿ ಮಳೆ ಅವಾಂತರ : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.